Author: Mohini Damle (Bhavana), bhavanadamle@gmail.com
ನನ್ನೊಳಗೆ ಅವನಿಹನೊ ಅವನೊಳಗೆ ನಾನಿಹೆನೊ ಬಂಧವೆಂತಿದುವೆಂದು ಅರಿಯದಾದೆ. ಮುನ್ನಡೆಸುತಿಹನೊ ಬೆನ್ಗಾವಲಾಗಿಹನೊ ಆ- ನಂದದೀ ಘಳಿಗೆಯಲಿ ತಿಳಿಯದಾದೆ. ಕೊಳಲು ನಾನಾಗಿಹೆನೊ ನನ್ನೊಳಗೆ ಕೊಳಲಿಹುದೊ ಉಲಿಯುತಿರಲವನುಸಿರು ಬೆರೆತು ಹೋದೆ. ಮಳಲಿನೊಳಗವನೊಡನೆ ಮರುಳಾಗಿ ನಲಿದಾಡಿ ಕಳೆದು ಹೋಗುವ ಸುಖದೊಳಾನು ಇಳಿದೆ. ರಾಧೆಯೊಳಗೂ ನಾನೆ ಮಾಧವನೊಳಗು ನಾನೆ ಬಾಧೆಗಳು ಕಾಡದೀ ತೀರದಲ್ಲಿ....
ಮಳೆ ಮಳೆ ಮಳೆ ಮಳೆ ಇಳಿದಿದೆ ಹನಿಹೊಳೆ ಮುಗಿಲಿನ ಬಾಗಿಲ ತೆರೆಯುತಲಿ. ಕಳೆ ಕಳೆಯಿಂದಲಿ ನಗುತಿಳೆ ಹಾಡಿದೆ ಕಥನಕುತೂಹಲ ರಾಗದಲಿ. ಎಳೆಯೆಳೆ ಕಡಿಯದೆ ಸುರಿಯುತ ಬೆಸೆಯುತ ಗಗನಕು ಭೂಮಿಗು ಸೇತುವೆಯ ತಳೆತಳೆಯೆನ್ನುತ ಹಸಿರಿನ ಸಿರಿಮೊಗ ಹಾಡಿದೆ ಮೀಟುತ ತಂಬುರಿಯ. ತೊಳೆತೊಳೆಯೆನ್ನುತ ಜಳಕವ ಮಾಡಿಸಿ ಹೊಳೆಸುತ ಗಿಡಮರಬಳ್ಳಿಗಳ ಬೆಳೆಮೆಳೆ...
*ಕ*ಮಲದಳಗಳ ಮೇಲೆ ನಡೆಯುತ *ಕಾ*ವ್ಯದೇವಿಯು ಬಂದಳು. *ಕಿ*ರುನಗೆಯ ಪನ್ನೀರ ಸೂಸುತ *ಕೀ*ರವಾಣಿಯಲುಲಿದಳು. *ಕು*ಹೂ ಎನ್ನುತ ಮಧುರಪಿಕಗಳು *ಕೂ*ಗೆ ಸುಳಿಯುತ ಬಂದಳು. *ಕೃ*ಪೆಯದೋರುತ ಕವಿಮನಗಳಿಗೆ *ಕೆ*ನೆಯ ಹಾಲಂತೊಲಿದಳು. *ಕೇ*ದಗೆಯ ಪರಿಮಳದ ವನದಿಂ *ಕೈ*ಯ ಬೀಸುತ ಬಂದಳು. *ಕೊ*ರಳ ಪದಕದ ಹಾರ ಮಿಂಚಲು *ಕೋ*ಮಲಾಂಗಿಯು ನಲಿದಳು. *ಕೌ*ತುಕದಿ ನೋಡುತಿರೆ ಅವಳನು...
ಕಣ್ಣ ಹಾಯಿಸುತೊಮ್ಮೆ ನಮ್ಮ ಕಡೆಗೂ ನೋಡಿ ಸುಣ್ಣದಂತಿಲ್ಲ ನಾವ್ ನಮ್ಮ ತಪ್ಪೇ ? ಬೆಣ್ಣೆಯಂತೆಯೆ ಮೆದುವು ಹೋಗದಿರಿ ನೀವೋಡಿ ಬಣ್ಣ ಕಪ್ಪಾದರೇನ್ ಹಾಲು ಕಪ್ಪೇ ? ಮಂದ ಹಾಲೆಂದು ಮೊದ್ದೆಂದು ಜರಿವರ ಬಿಟ್ಟ- ದೊಮ್ಮೆ ನಮ್ಮನು ನೀವು ಕೇಳಿ ನೋಡಿ. ಮಂದವೆಂದರೆ ಗಟ್ಟಿಯೆಂಬುದೊಂದೆ ಯಥಾರ್ಥ ಎಮ್ಮೆ ಹಾಲ್...
ಚಿತ್ತಾರ ಆಗಸದ ಪತ್ತಲದ ಜರಿ ಹೊಳಪೆ ಹೊತ್ತು ಮೂಡುವ ಮೊದಲು ಇಳಿದು ಬಾರೆ ಮುತ್ತಿನಂದದಿ ನೀ ಜಗತ್ತಿನಲಿ ಮಿನುಗುತಿರೆ ಉತ್ತಮರು ಮೆಚ್ಚಿಹರು ಕೇಳೆ ತಾರೆ. ಸಿರಿಯ ಸ್ವರ್ಗದ ಹರಳೆ ಮಿರುಗು ಮೊಗ್ಗಿನ ಮುಗುಳೆ ಹರಿಯ ಮುದ್ದಿನ ಮಗಳೆ ನಲಿದು ಬಾರೆ. ಇರುಳ ದೀಪದ ಬೆರಳೆ ತಿರೆಗೆ ಮಿಂಚಿನ...
ಒಂದರ ಮ್ಯಾಲೆ ಒಂದು ಏಳು ಕಲ್ಲಿನ ಗುಂಡು ಏರಿ ಕುಂತಿದೆ ನೋಡಿ ಸೂರಪ್ನೆಂಬೊ ಚೆಂಡು..! ಎತ್ತರಕೇರಿದ್ಹಾಂಗ ಆಗಬಾರ್ದು ಭಂಡು ಭಯ ಅನ್ನೋದಿರಬೇಕೊಂದೇ ಆದ್ರೂ ಹುಂಡು. ಹೊಗಳೋ ಮಂದಿ ಇದ್ರೂ ನಮ್ಮ ಸುತ್ತ ಹಿಂಡು ಆಯ ತಪ್ಪಿದಾಗ ಬರೋದಿಲ್ಲ ದಂಡು. ಬೇಲಿ ಹಾರೋ ದನದ್ಹಾಂಗಾಗಬಾರ್ದು ಪುಂಡು ಸ್ವಸ್ಥವಾಗಿರಬೇಕು ಗಳಿಸಿದ್ದನ್ನು...
ಚಿಂತೆಯಲಿ ಮುಳುಗಿರುವೆ ಯಾಕೆನ್ನ ಸಖಿಯೆ ವಂಚಿಸದೆ ಹೇಳಿಂದು ನೀ ನಿಜಕು ಸುಖಿಯೆ. ಮೀರದಿದ್ದರು ನೀನು ಭಾವದಂಚು ಏತಕಾಯಿತು ಬಾಳು ಹಿಂಚುಮುಂಚು? ಶೂನ್ಯದೊಳಹೊಗಲು ನಡೆಸಿದರು ಸಂಚು ಹಾಕಿಹುದು ವಿಭ್ರಮೆಯ ಪರದೆ ಹೊಂಚು. ಕಲ್ಪದಲಿ ಕಂಡಿದ್ದರೂನು ಸುಳಿವು ಕಾಣದಾಯ್ತಲ್ಲ ನಿಜದಲ್ಲಿ ಹಳುವು. ಶಶಿತಾರೆಯಾದಂತೆ ಇಂದು ಕಳವು ಸೆರೆಮನೆಯ ವಾಸವದು ಕೆಸರ...
ಶಿವನ ಜಡೆಯಿಂದಂದು ಧರೆಗ್ಹಾರಿದವಳ ಸಖಿ ಶಿವೆಯ ಕೈತೋಟದಲಿ ನಳನಳಿಸುತಿರಲು ತಾ ರವಿಕಿರಣಗಳ ಝಳಕೆ ಬೆಂದು ಬಾಡಿದಳೊಮ್ಮೆ ಜೀವಸಲಿಲವು ಇಲ್ಲದೆ || ಇಂತೊಂದು ದಿನದಲ್ಲಿ ಸಂತಸದಿ ಶಿವನರಸಿ ಕಾಂತನೊಡಗೂಡಿ ಸಂಚರಿಸಿ ಬರುತಿರಲು ನಿಂತು ನೋಡುತ ಸೊಬಗಿನಡುವಿನಲಿ ಛಾಯೆಯನು ಸಂತಾಪಗೊಂಡಳು ಸತಿ || ಯಾರಲ್ಲಿ ಸೇವಕರು ಕೀಳಿರೈ ಛಾಯೆಯನು...
ಚಿಕ್ಕ ಹಕ್ಕಿಯೊಂದು ಬಂದು ಪಕ್ಕದಲ್ಲಿ ಕುಳಿತುಕೊಂಡು ಬಿಕ್ಕು ನಿಲಿಸಿ ಸುಕ್ಕು ಮರೆಸಿ ನಕ್ಕು ನಗಿಸಿತು. . ಪುಕ್ಕ ಕಳೆದು ರೆಕ್ಕೆ ಬರಲು ರೊಕ್ಕ ಮಿಕ್ಕು ಎಂದೆನಿಸಲು ಕಕ್ಕುಲತೆಯ ತೆಕ್ಕೆ ತೊರೆದು ಹಕ್ಕಿ ಹಾರಿತು. . ಚಕ್ಕಡಿಯಲಿ ಸಾಗುತಿರಲು ಘಕ್ಕನೇನೊ ಸಿಕ್ಕಿದಂತೆ ಧಕ್ಕೆಯಾಗಿ ದಿಕ್ಕುತಪ್ಪಿ ಹಕ್ಕಿ ಹಾರಿತು....
‘ಒಳಗಿಲ್ಲಾಂದ್ರ ಹುಳುಕು ಯಾಕಿರಬೇಕ ಅಳುಕು ಒಳಗಿದ್ದರೆ ಸತ್ಯದ ಹಳಕು ತಾನಾಗೇ ಬರತದ ಥಳಕು. ಮನದಾಗಿದ್ದರ ಕೊಳಕು ಕಾಣತ್ತೇನ ಬೆಳಕು ಎಂಥ ಬಾಗುಬಳುಕು ಒಂದಕ್ಕೊಂದು ತಳುಕು. ಅಂತರಾಳದ ತಳಕು ಶೋಧಿಸಿ ಮೇಲಕು ಕೆಳಕು ಭಾರಾನೆಲ್ಲ ಇಳುಕು ಹೊಡೀದ್ಹಾಂಗ ಚಳುಕು. ಕಣ್ಬಿಡು ಪಿಳಪಿಳಪಿಳಕು ನೀರೆರಿ ಈ ತಳಮಳಕು ಬೆಳಕ ಕರೀ...
ನಿಮ್ಮ ಅನಿಸಿಕೆಗಳು…