ಸುಣ್ಣದಂತಿಲ್ಲ ನಾವ್ ನಮ್ಮ ತಪ್ಪೇ ?

Share Button

ಕಣ್ಣ ಹಾಯಿಸುತೊಮ್ಮೆ ನಮ್ಮ ಕಡೆಗೂ ನೋಡಿ
ಸುಣ್ಣದಂತಿಲ್ಲ ನಾವ್ ನಮ್ಮ ತಪ್ಪೇ ?
ಬೆಣ್ಣೆಯಂತೆಯೆ ಮೆದುವು ಹೋಗದಿರಿ ನೀವೋಡಿ
ಬಣ್ಣ ಕಪ್ಪಾದರೇನ್ ಹಾಲು ಕಪ್ಪೇ ?

ಮಂದ ಹಾಲೆಂದು ಮೊದ್ದೆಂದು ಜರಿವರ ಬಿಟ್ಟ-
ದೊಮ್ಮೆ ನಮ್ಮನು ನೀವು ಕೇಳಿ ನೋಡಿ.
ಮಂದವೆಂದರೆ ಗಟ್ಟಿಯೆಂಬುದೊಂದೆ ಯಥಾರ್ಥ
ಎಮ್ಮೆ ಹಾಲ್ ಕುಡಿ ಬಹುದು ಕಸುವು ಕೂಡಿ.

ಗಟ್ಟಿ ಚಾಯವು ಕಾಫಿ ಮಂದನೆಯ ಹಾಲಿನಲಿ
ಎನಿತು ಸ್ವಾದಿಷ್ಟವದು ನೆನೆಸಿ ಆಹಾ !
ಬಟ್ಟು ಕವಡೆಯ ಮೊಸರು ಬೆಣ್ಣೆ ಮಜ್ಜಿಗೆ ತುಪ್ಪ
ದಿನ ಬೆಳಗು ಮಧ್ಯಾಹ್ನ ರಾತ್ರಿ ಸ್ವಾಹಾ ! !

 

–   ಮೋಹಿನಿ ದಾಮ್ಲೆ (ಭಾವನಾ)

 

1 Response

  1. Shruthi Sharma says:

    ನಿಜ .. ಚೆನ್ನಾಗಿ ಮೂಡಿಬಂದಿದೆ.. 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: