ಸೂರಪ್ನೋರ ಪಾಠಶಾಲೆ
ಒಂದರ ಮ್ಯಾಲೆ ಒಂದು ಏಳು ಕಲ್ಲಿನ ಗುಂಡು
ಏರಿ ಕುಂತಿದೆ ನೋಡಿ ಸೂರಪ್ನೆಂಬೊ ಚೆಂಡು..!
ಎತ್ತರಕೇರಿದ್ಹಾಂಗ ಆಗಬಾರ್ದು ಭಂಡು
ಭಯ ಅನ್ನೋದಿರಬೇಕೊಂದೇ ಆದ್ರೂ ಹುಂಡು.
ಹೊಗಳೋ ಮಂದಿ ಇದ್ರೂ ನಮ್ಮ ಸುತ್ತ ಹಿಂಡು
ಆಯ ತಪ್ಪಿದಾಗ ಬರೋದಿಲ್ಲ ದಂಡು.
ಬೇಲಿ ಹಾರೋ ದನದ್ಹಾಂಗಾಗಬಾರ್ದು ಪುಂಡು
ಸ್ವಸ್ಥವಾಗಿರಬೇಕು ಗಳಿಸಿದ್ದನ್ನು ಉಂಡು.
ಕೆಸರಿನಾಗ ಇಳ್ದ್ರೆ ಎಳೀತೈತೆ ಜೊಂಡು
ಗಟ್ಟಿಯಾಗಿರ್ಬೇಕು ಮನ್ಸು ಅನ್ನೋ ದಿಂಡು.
ನಾನು ಎಂಬೋ ನಾವು ದೇವ್ರ ಒಂದು ತುಂಡು
ಜೀನ ಅವ್ನು ಎಳ್ದ್ರೆ ಆಗತೀವಿ ಥಂಡು.
ಪಾಠಾ ಕಲೀಬೇಕು ಮಾಡಕ್ಹೋಗ್ದೆ ಮೊಂಡು
ಮ್ಯಾಲೆ ಕುಂತು ಬೆಳಗೋ ಸೂರಪ್ಪನ್ನ ಕಂಡು
- ಮೋಹಿನಿ ದಾಮ್ಲೆ, ಬೆಂಗಳೂರು
Super mam