‘ಒಳಗಿಲ್ಲಾಂದ್ರ ಹುಳುಕು
ಯಾಕಿರಬೇಕ ಅಳುಕು
ಒಳಗಿದ್ದರೆ ಸತ್ಯದ ಹಳಕು
ತಾನಾಗೇ ಬರತದ ಥಳಕು.
ಮನದಾಗಿದ್ದರ ಕೊಳಕು
ಕಾಣತ್ತೇನ ಬೆಳಕು
ಎಂಥ ಬಾಗುಬಳುಕು
ಒಂದಕ್ಕೊಂದು ತಳುಕು.
ಅಂತರಾಳದ ತಳಕು
ಶೋಧಿಸಿ ಮೇಲಕು ಕೆಳಕು
ಭಾರಾನೆಲ್ಲ ಇಳುಕು
ಹೊಡೀದ್ಹಾಂಗ ಚಳುಕು.
ಕಣ್ಬಿಡು ಪಿಳಪಿಳಪಿಳಕು
ನೀರೆರಿ ಈ ತಳಮಳಕು
ಬೆಳಕ ಕರೀ ಒಳ ಒಳಕು
ಕಾಣು ನೀ ಶಾಂತಿಯ ಸೆಳಕು.
-ಮೋಹಿನಿ ದಾಮ್ಲೆ (ಭಾವನಾ)
ಹುಳುಕು-ಕೊಳಕನಟ್ಟಿ ಸತ್ಯದ ಬೆಳಕನಾವಾಹಿಸಿಕೊಂಡರೆ, ತಳಮಳ ಕುಗ್ಗಿಸಿ ಶಾಂತಿಯ ಬೆಳಕಾಗಿಸುವ ನೀತಿ ದರ್ಶನ 🙂