Author: ಕು.ಸ.ಮಧುಸೂದನ್ ನಾಯರ್, ku.sa.madhusudan@gmail.com
ಮರುಕಳಿಸದಿರಲಿ ಹಳೆಯ ನೆನಪುಗಳು ಏಕಾಕಿಯಾದ ನೀರಸ ಗಳಿಗೆಗಳ ನೆರಿಗೆಗಳಲಿ ಅಡ್ಡಾಡದಿರಲಿ ಅವರ ಹಸನ್ಮುಖಿ ಚಹರೆಯ ಛಾಯೆಗಳು. ಈಗಿಲ್ಲಿ ತಾವಿಲ್ಲ ಹಳೆಯದಕೆ ಹೊಸ ಅವಮಾನಗಳು ಹೊಸ ನೋವುಗಳು. ಹೊಚ್ಚ ಹೊಸ ವಂಚನೆಯ ಸಂಚುಗಳು ಭರ್ತಿ ಮಾಡಿಯಾಗಿದೆ ಖಾಲಿ ಜಾಗಗಳ! ಸುಡುಸುಡು ಬೆಂಕಿ ಕೆಂಡಗಳಂತಿದ್ದ ಮೊದಲ ನೋವೀಗ...
ಯಾವ ಪ್ರೀತಿ ತಾನೆ ಸೋತಿದೆ ಹೇಳು ಧರ್ಮದ ದಿಕ್ಕೆಡಿಸುವ ಮತಾಂಧರ ಮೆದುಳುಗಳಲ್ಲಿ ಚಿಗುರೊಡೆದ ದ್ವೇಷಾಸೂಯೆಗಳ ಉರಿಯುವ ಜ್ವಾಲೆಗೆ ಯಾವ ಕಾಲದ ಯಾವ ಯುಗದ ಪ್ರೀತಿಸಿದ ಹೃದಯ ಬೂದಿಯಾಗಿ ಹೋಗಿದೆ ಹೇಳು. ಬೇಕಿಲ್ಲ ಮೂರನೇ ಕಣ್ಣು ನೆಲದಗಲಕ್ಕೂ ಹಬ್ಬುತಿಹ ದ್ವೇಷದ ದಳ್ಳುರಿಯ ಕಾಣಲು ನನಗೋ ಚರಿತ್ರೆಯ...
ಕಾಣುವವರೆಗೂ ಅವಳ ಮತ್ತು ಅವಳ ಕವಿತೆಗಳ ಕಾವ್ಯವಿಷ್ಟು ಬಿಸಿಯಾಗಿರುತ್ತದೆ ಮತ್ತು ನಿಶೆ ತುಂಬಿರುತ್ತದೆಯೆಂದು ಗೊತ್ತಿರಲಿಲ್ಲ ಸುಡು ಬೇಸಿಗೆಯಲೂ ಸುರಿವ ಬಿರು ಮಳೆಯಾಗುವ ಕೊರೆಯುವ ಚಳಿಯಲೂ ಅಗ್ಗಿಷ್ಠಿಕೆಯಾಗುವ ಜಡಿಮಳೆಯ ಮದ್ಯರಾತ್ರಿಯಲೂ ಹೊಕ್ಕುಳದ ಕಾವಾಗುವ ಜೀವ ಮಿಡಿಸುವ ಸಹ್ಯಾದ್ರಿಯ ಹರಿದ್ವರ್ಣದ ಕಾನನದ ನಿಗೂಢತೆಯೊಳಗೂ ಸತ್ಯ ದರ್ಶನ ಮಾಡಿಸುವ ನನ್ನೊಳಗಿನ...
, ಅಪರಾತ್ರಿಯೊಳಗೆ ಬೇಟಿಯಾದವನು ಕಂಡದ್ದು ಜಗತ್ತಿನ ಕೊನೆಯ ಮನುಷ್ಯನ ಹಾಗೆ ಬಾ ಕೂತುಕೊ ಎಂದವನ ದ್ವನಿಯಲ್ಲಿ ತಾಯಿಯ ಮಮತೆಯಿತ್ತು ತಗೋ ತಿನ್ನೆಂದು ಕೊಟ್ಟ ರೊಟ್ಟಿಯೊಳಗೆ ತಂದೆಯ ಪ್ರೀತಿಯಿತ್ತು ಮಲಗೆಂದು ತನ್ನ ತೊಡೆಗಳ ಮಡಚಿ ಮಡಿಲು ಮಾಡಿಕೊಟ್ಟವನಲ್ಲಿ ನಾನೆಂದೂ ನೋಡಿರದ ದೇವರ ಅಂತ:ಕರಣವಿತ್ತು ಆ ರಾತ್ರಿ ನಾನು...
ಅದೊಂದು ಸದ್ದಿಗೆ ಕಾಯುತ್ತ! ಸುರಿಯುವ ಮೊದಲ ಮಳೆಯ ಕೊನೆಯ ಹನಿ ತಲುಪುವ ಮುಂಚೆಯೇ ನೆಲಕೆ ನಡೆದು ಬಿಟ್ಟೆ ದಡಾರನೆ ಬಾಗಿಲು ತೆಗೆದ ರಭಸಕ್ಕೆ ಮಳೆಯ ಇರುಚಲು ಬಡಿದು ನಡುಮನೆಯೆಲ್ಲ ಒದ್ದೆಯಾಯಿತು ಆಮೇಲಿನದನ ಹೇಳಲಿ ಮಳೆ ನಿಂತಮೇಲೂ ತೊಟ್ಟಿಕ್ಕುತ್ತಲೇ ಇದ್ದ ಹನಿಗಳ ತಟಪಟ ಸದ್ದಿಗೆ...
ಹೊದ್ದು ಬಿಸಿಲ ಜಮಖಾನ ಮಲಗಿದ ಜ್ವರ ಬಂದ ಭೂಮಿತಾಯಿ ಹಸಿರೆಲ್ಲ ಮಾಯವಾಗಿ ಉಸಿರುಗಳು ನಿದಾನವಾಗಿ ಬೋಳುಗುಡ್ಡಗಳ ಮೇಲೆ ಕಾಲು ಮುರಿದ ನರಸತ್ತ ನವಿಲುಗಳು ಗೊಬ್ಬರದ ಗುಂಡಿ ಕೆರೆಯುವ ಕೋಳಿಗಳು ಹಸಿದ ಮಕ್ಕಳು ಸತ್ತವು ಉಳ್ಳವರ ಮನಯ ಕಣಜಗಳ ಕಾಳುಗಳು ಅತ್ತವು ಯಾರ ಕೊಟ್ಟಿಗೆಯ ಯಾವ ಹಸು...
ನಡೆಯುತ್ತೇನೆ ಮುಳ್ಳುಗಳ ದಾರಿಯಲ್ಲಿ ನಿಲ್ಲುತ್ತೇನೆ ಕೆಂಡಗಳ ಕೊಂಡದಲ್ಲಿ ಮಲಗುತ್ತೇನೆ ಅರೆಬೆಂದ ಚಿತೆಗಳ ಮೇಲೆ ಆಗೆಲ್ಲ ನೆನಪು ಮಾಡಿಕೊಳ್ಳುತ್ತೇನೆ ಅವಳ ಮುಗುಳ್ನಗುವನ್ನು ತುಂಗಾ ನದಿಯ ತಟದಲ್ಲಿ ನಿಂತವಳ ಕೆನ್ನೆಯ ಮೇಲೆ ಬಿದ್ದ ಸೂರ್ಯನ ಬೆಳಕಲ್ಲಿ ಹೊಳೆಯುವ ಅವಳ ಝುಮುಕಿಯಲ್ಲಿ ಜೋಕಾಲಿಯಾಡುತ್ತೇನೆ ಕೈ ಸೋತು ಕೆಳಗೆ ಬಿದ್ದಾಗ ಅವಳ ಮಡಿಲಲ್ಲಿ...
ನಾನು ಬದುಕಲೋ ಬೇಡವೊ ಎನ್ನುವ ಗಾಢ ವಿಷಾದದ ದ್ವಂದ್ವದಲ್ಲಿ ಮತ್ತು ಚರ್ಮ ಸೀಳಿ ಮೈಯೊಳಗೆ ನುಗ್ಗಿ ನನ್ನ ಹಸಿಮಾಂಸವ ಸುಡುತ್ತಿರುವೀ! ಬಿಸಿಲ ಧಗೆಯಲ್ಲಿ ಕೂತಿರುವಾಗ ನಿನ್ನ ಮುಖ ಮಾತ್ರ ನೆನಪಿಗೆ ಬರುತ್ತೆ ಹಸಿದ ಹಸುಗೂಸಿಗದರ ತಾಯ ಮುಖ ನೆನಪಾದಂತೆ – ಸುಮ್ಮನೇ ಬಿಳಿಗೋಡೆಯ ನಿಟ್ಟಿಸುತ್ತೇನೆ ಕಿಟಕಿಯಿಂದ ರಾಚಿದ...
ಒಂದು ದಿನವೂ ಕತ್ತಿ ಹಿಡಿಯಲಿಲ್ಲ ಕವಚ ತೊಡಲಿಲ್ಲ ರಥವನೇರಲಿಲ್ಲ ಬಿಲ್ಲುಬಾಣಗಳನೆಸೆಯಲಿಲ್ಲ ಭರ್ಜಿಗಳ ಬೀಸಲಿಲ್ಲ ಯುದ್ದೋನ್ಮಾಧಿ ರಣಕೇಕೆ ಹಾಕಲಿಲ್ಲ! ಸುಮ್ಮನೇ! ಮುಗುಳ್ನಗುತ್ತ ಮಾತಾಡುತ್ತ ಕರುಣೆ ತುಂಬಿದ ಕಣ್ಣುಗಳಿಂದ ಶತ್ರುವ ನೋಡುತ್ತಲೇ ಗೆದ್ದುಬಿಟ್ಟೆ! ಹಾಗೆ ಗೆದ್ದದ್ದನ್ನು ಯಾವುದೇ ಆಸೆಯಿರದೆ ನಮ್ಮ ಕೈಗಿಟ್ಟು ನಡೆದುಬಿಟ್ಟೆ! ಮಾಡಿದರೆ ಯುದ್ದ ಮಾಡಬೇಕು ನಿನ್ನ...
ಯಾಕೆ ಸ್ವಲ್ಪ ಪ್ರೀತಿ ಬೆಳೆಸಿಕೊಳ್ಳಬಾರದು? ಒಂದಿಷ್ಟು ಕರುಣೆ ಆವಾಹಿಸಿಕೊಳ್ಳಬಾರದು? ಯಾಕೆ ಅಂತ:ಕರಣದ ಮಾತು ಕೇಳಿಸಿಕೊಳ್ಳಬಾರದು? ಯಾಕೆ ಹಾಲುಗಲ್ಲದ ಹಸುಳೆಯ ಅಳುವ ಆಲಿಸಬಾರದು? ದಿಗಿಟ್ಟು ಬಂದೂಕು ಬಾಂಬುಗಳ ಸದ್ದನು ಕೇಳಿಸಿಕೊಳ್ಳಬಾರದೇಕೆ ಹೃದಯಗಳ ಬಡಿತವ ಕಾಣಿಸುತಿಲ್ಲವೇ ಮನುಕುಲದ ಅಂತ್ಯದ ಚಿತ್ರ ಕೇಳಿಸುತಿಲ್ಲವೇ ಅಂತ್ಯಕಾಲದ ಆಕ್ರಂದನದ ಚೀತ್ಕಾರ ಯಾಕೆ? ಯಾಕೆ? ಯಾಕಿಂತಹ...
ನಿಮ್ಮ ಅನಿಸಿಕೆಗಳು…