ಉನ್ಮತ್ತ ಕನಸಿನಲ್ಲಿ ಮಾತ್ರ
ನಡೆಯುತ್ತೇನೆ ಮುಳ್ಳುಗಳ ದಾರಿಯಲ್ಲಿ
ನಿಲ್ಲುತ್ತೇನೆ ಕೆಂಡಗಳ ಕೊಂಡದಲ್ಲಿ
ಮಲಗುತ್ತೇನೆ ಅರೆಬೆಂದ ಚಿತೆಗಳ ಮೇಲೆ
ಆಗೆಲ್ಲ ನೆನಪು
ಮಾಡಿಕೊಳ್ಳುತ್ತೇನೆ ಅವಳ ಮುಗುಳ್ನಗುವನ್ನು
ತುಂಗಾ ನದಿಯ ತಟದಲ್ಲಿ
ನಿಂತವಳ ಕೆನ್ನೆಯ ಮೇಲೆ
ಬಿದ್ದ ಸೂರ್ಯನ ಬೆಳಕಲ್ಲಿ
ಹೊಳೆಯುವ ಅವಳ
ಝುಮುಕಿಯಲ್ಲಿ
ಜೋಕಾಲಿಯಾಡುತ್ತೇನೆ
ಕೈ ಸೋತು ಕೆಳಗೆ ಬಿದ್ದಾಗ
ಅವಳ ಮಡಿಲಲ್ಲಿ ಮಲಗಿರುತ್ತೇನೆ
ಇದೆಲ್ಲ ಆಗುವುದು
ನನ್ನ ತೀವ್ರಪ್ರೀತಿಯ
ಉನ್ಮತ್ತ ಕನಸಿನಲ್ಲಿ ಮಾತ್ರ
– ಕು.ಸ.ಮಧುಸೂದನ
ಕಲ್ಪನೆಯಲ್ಲಿ ಕಾವ್ಯದೊಳಕ್ಕೆ ಹೊಕ್ಕು ಖುಷಿಯಿಂದ ಅಡ್ದಾಡುವಾಗ ಒಂದು ಅವ್ಯಕ್ತ ಭಯ ತೂರಿ ಬಂದೆನ್ನಿಸಿತು
ವಾಸ್ತವ ಭ್ರಮೆಯೋ ಅಥವಾ…
ಧನ್ಯವಾದಗಳು