ಎಷ್ಟು ಸುಲಭವಾಗಿ ಗೆದ್ದುಬಿಟ್ಟೆ
ಒಂದು ದಿನವೂ
ಕತ್ತಿ ಹಿಡಿಯಲಿಲ್ಲ
ಕವಚ ತೊಡಲಿಲ್ಲ
ರಥವನೇರಲಿಲ್ಲ
ಬಿಲ್ಲುಬಾಣಗಳನೆಸೆಯಲಿಲ್ಲ
ಭರ್ಜಿಗಳ ಬೀಸಲಿಲ್ಲ
ಯುದ್ದೋನ್ಮಾಧಿ ರಣಕೇಕೆ ಹಾಕಲಿಲ್ಲ!
ಸುಮ್ಮನೇ!
ಮುಗುಳ್ನಗುತ್ತ
ಮಾತಾಡುತ್ತ
ಕರುಣೆ ತುಂಬಿದ ಕಣ್ಣುಗಳಿಂದ
ಶತ್ರುವ ನೋಡುತ್ತಲೇ
ಗೆದ್ದುಬಿಟ್ಟೆ!
ಹಾಗೆ ಗೆದ್ದದ್ದನ್ನು ಯಾವುದೇ ಆಸೆಯಿರದೆ
ನಮ್ಮ ಕೈಗಿಟ್ಟು
ನಡೆದುಬಿಟ್ಟೆ!
ಮಾಡಿದರೆ ಯುದ್ದ
ಮಾಡಬೇಕು ನಿನ್ನ ಹಾಗೆ
ಗೆದ್ದರೆ ಶತ್ರುಗಳ
ಗೆಲ್ಲಬೇಕು
ನಿನ್ನ ಹಾಗೆ!
– ಕು.ಸ.ಮಧುಸೂದನ