ಯಾಕೆ ?
ಯಾಕೆ ಸ್ವಲ್ಪ ಪ್ರೀತಿ ಬೆಳೆಸಿಕೊಳ್ಳಬಾರದು?
ಒಂದಿಷ್ಟು ಕರುಣೆ ಆವಾಹಿಸಿಕೊಳ್ಳಬಾರದು?
ಯಾಕೆ ಅಂತ:ಕರಣದ ಮಾತು ಕೇಳಿಸಿಕೊಳ್ಳಬಾರದು?
ಯಾಕೆ ಹಾಲುಗಲ್ಲದ ಹಸುಳೆಯ ಅಳುವ ಆಲಿಸಬಾರದು?
ದಿಗಿಟ್ಟು ಬಂದೂಕು ಬಾಂಬುಗಳ ಸದ್ದನು
ಕೇಳಿಸಿಕೊಳ್ಳಬಾರದೇಕೆ ಹೃದಯಗಳ ಬಡಿತವ
ಕಾಣಿಸುತಿಲ್ಲವೇ ಮನುಕುಲದ ಅಂತ್ಯದ ಚಿತ್ರ
ಕೇಳಿಸುತಿಲ್ಲವೇ ಅಂತ್ಯಕಾಲದ ಆಕ್ರಂದನದ ಚೀತ್ಕಾರ
ಯಾಕೆ? ಯಾಕೆ? ಯಾಕಿಂತಹ ದ್ವೇಷಾಗ್ನಿಯ ಆರಾಧನೆ
ಯಾವ ಪುರುಷಾರ್ಥಕ್ಕಿಂತಹ ಹಟಸಾಧನೆ!
– ಕು.ಸ.ಮಧುಸೂದನ ರಂಗೇನಹಳ್ಳಿ