Author: Malini Vadiraj

12

ಸೈನಿಕ – ಜೀವ ರಕ್ಷಕ

Share Button

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಿಂದ ಗೋರಖ್ ಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಕೂತು ಪ್ರಯಾಣಿಸುತ್ತಿದ್ದೆ. ಅದಾಗಲೇ ರೈಲು ಬೆಂಗಳೂರನ್ನು ಬಿಟ್ಟು ವೇಗದಿಂದ ತನ್ನ ನಿರ್ದಿಷ್ಟ ಸ್ಥಳದತ್ತ ಸಾಗುತ್ತಿತ್ತು. ನನ್ನ ಭೋಗಿಯಲ್ಲಿ ಓರ್ವ ವಯಸ್ಸಾದ ಹೆಂಗಸು, ಮಧ್ಯ ವಯಸ್ಸಿನ ಮಹಿಳೆ, ಒಬ್ಬ ತಂದೆ ಹಾಗು ಆತನ ಮಗ,  ಸೈನ್ಯದ...

5

ವಿಭೀಷಣ – ಧರ್ಮದ ಮೂರ್ತ ರೂಪ

Share Button

ವಾಲ್ಮೀಕಿ ಮಹರ್ಷಿಯು ಬರೆದ ರಾಮಾಯಣ ಮಹಾಕಾವ್ಯವು ಜೀವನದಲ್ಲಿ ನಾವು ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಸಂಬಂಧಗಳ ಸೂಕ್ಷ್ಮತೆ ಹಾಗು ಅದರ ನಿರ್ವಹಣೆಯ ಬಗ್ಗೆ ಇಲ್ಲಿ ಸೊಗಸಾಗಿ ವರ್ಣಿಸಲಾಗಿದೆ. ಧರ್ಮಪಾಲನೆ, ವಚನಪಾಲನೆ, ಕರ್ತವ್ಯ ನಿಷ್ಠೆ, ಪತ್ನಿ ಧರ್ಮ, ಸ್ನೇಹ ಧರ್ಮ, ಸಮರ ಧರ್ಮ, ಸಹಿಷ್ಣುತೆ, ಕ್ಷಮಾದಾನ ಹೀಗೆ ನಮ್ಮ ದಿನನಿತ್ಯದ...

6

 ಬೇಡ ಅತಿ ನಿರೀಕ್ಷೆ, ಇರಲಿ ಭರವಸೆ

Share Button

ಒಂದು ಸುಂದರವಾದ ತೋಟದಲ್ಲಿ ವಿಧವಿಧವಾದ ಪುಷ್ಪಗಳು ಅರಳುತ್ತವೆ. ಬಣ್ಣದಲ್ಲಾಗಲಿ, ಗಾತ್ರದಲ್ಲಾಗಲಿ ಅಥವಾ ಸುವಾಸನೆಯಲ್ಲಾಗಲಿ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಒಂದು ಹೂವಿನಲ್ಲಿರವ ವಿಶೇಷತೆ ಮತ್ತೊಂದರಲ್ಲಿ ಇರಲೇ ಬೇಕೆಂದಿಲ್ಲ. ಸುವಾಸನೆ ಬೀರುವ ಹೂಗಳ ನಡುವೆ ಸುವಾಸನೆಯಿರದ ಹೂಗಳೂ ಇರುತ್ತವೆ.  ಹಾಗೆಯೇ ಮಕ್ಕಳೂ ಸಹ. ಒಂದು ಶಾಲೆಯಲ್ಲಿ ವಿಭಿನ್ನವಾದ, ವಿಶಿಷ್ಟವಾದ ಹಲವು...

11

ಹಿತನಡೆಯ ಹೆತ್ತವರು

Share Button

ನನ್ನ ಶಾಲಾ ದಿನಗಳಲ್ಲಿ ಗಣಿತ ಕೊಂಚ ಕಬ್ಬಿಣದ ಕಡಲೆಯೇ ಆಗಿತ್ತು. ನನ್ನ ಅಪ್ಪ ಪ್ರತಿ ದಿನ ತಮ್ಮ ಬಿಇಎಂಲ್ ಕಾರ್ಖಾನೆಯಿಂದ ಬಂದ ನಂತರ ಚಹಾ ಕುಡಿದು ನನಗೆ ಗಣಿತವನ್ನು ಹೇಳಿ ಕೊಡುತ್ತಿದ್ದರು. ನನ್ನ ಅಪ್ಪ ನನ್ನನ್ನು ಎಂದಿಗೂ ಬೈದು ಹೊಡೆದವರಲ್ಲ. ಎಷ್ಟು ಸಾರಿ ಹೇಳಿಕೊಟ್ಟರೂ ಲೆಕ್ಕ ತಲೆಗೆ ಹತ್ತದಾಗ...

6

ಟೀಚರ್ಸ್ – ನ ಭೂತೋ ನ ಭವಿಷ್ಯತಿ

Share Button

ಟೀ ಹೀರುತ್ತಾ ಕೂತಿದ್ದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಬೆಳಿಗ್ಗಿನಿಂದ ಶಾಲೆಯಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಮಕ್ಕಳ ಶುಭಾಶಯಗಳು, ಅವರ ಸಡಗರ, ಸಂಭ್ರಮದ ಮಾತುಗಳು, ಶಿಕ್ಷಕರ ಬಗ್ಗೆ ಹೆಮ್ಮೆಯ ಭಾಷಣಗಳು, ಮಕ್ಕಳ ಆ ಮುಗ್ಧ ನಗು, ಶಾಲೆಯ ಹಳೆಯ ವಿದ್ಯಾರ್ಥಿಗಳು ಬಂದು ನಮಗೆ ಶುಭಾಶಯ ತಿಳಿಸುವ ಆ ಕ್ಷಣ,...

5

ಹತ್ತನೆ ತರಗತಿಯೋ? ಬಂಗಾರದ ಪಂಜರವೋ?

Share Button

ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಬೆಳಗಿನ ಶುಭೋದಯದೊಂದಿಗೆ ಮಕ್ಕಳು ಶಿಕ್ಷಕರನ್ನು ಸ್ವಾಗತಿಸುವ ಪರಿ ಅತ್ಯಂತ ಮುದ ನೀಡುವಂತಹದ್ದು. ನಿರ್ಮಲ ಮನಸ್ಸಿನ, ತುಂಟ ನಗೆಯ, ಪ್ರಶಾಂತವಾದ ಅವರ ಮುಖ ನೋಡುವುದೊಂದು ಭಾಗ್ಯವೇ ಸರಿ. ಅದರಲ್ಲೂ ಮರ್ಕಟ ಮನಸ್ಸಿನ ಹತ್ತನೆಯ ತರಗತಿಯ ಮಕ್ಕಳನ್ನು ನಿಭಾಯಿಸುವುದೇ ಒಂದು ಸವಾಲು. ಶಾರೀರಿಕವಾಗಿ ಬೆಳವಣಿಗೆ ಆಗಿದ್ದರೂ...

10

ಸತ್ಯ ಮಿಥ್ಯಗಳ ಸುಳಿಯಲ್ಲಿ…..!

Share Button

“ಸತ್ಯ ಮೇವ ಜಯತೆ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯವಂತರಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ” ಎಂದೆಲ್ಲಾ ಭಾಷಣ ಮಾಡುವ ನಾವು, ಅದೇ ಸತ್ಯವನ್ನು ಮರೆಮಾಚಿ ಮಿಥ್ಯವೆಂಬ ಮಾಯಾಂಗನೆಯ ಸೆರಗನ್ನು ಹಿಡಿದು ಹಿಂಬಾಲಿಸುತ್ತೇವೆ. ಮಿಥ್ಯ ಅಥವಾ ಸುಳ್ಳು ಹೇಳುವ ಮನಸ್ಥಿತಿ ಮನುಷ್ಯನಿಗೆ ಹೇಗೆ ಬರುತ್ತದೆ? ಕೀಳರಿಮೆಯನ್ನು ಹೊಂದಿದವರು, ತಮ್ಮನ್ನು...

8

ಕರ್ಮ ಹಿಂದಿರುಗಿದಾಗ….!

Share Button

ಮಗುವನ್ನು ತದೇಕಚಿತ್ತದಿಂದ ಹಾಗೇ ನೋಡುತ್ತ ಕೂತ ಸಹನಾಳಿಗೆ ಬಾಬುವಿನ ನೆನಪು ಕಾಡತೊಡಗಿತು. ‘ ವೈನಿ ಬಾ, ಕೂಡು ‘ ಎನ್ನುವ ಅವನ ದಿನನಿತ್ಯದ ಈ ಪದಗಳು ಕಿವಿಗಳಿಗೆ ಅಪ್ಪಳಿಸಿ ಹಿಂಸಿಸುತ್ತಿತ್ತು. ಸಹನಾಳ ಮೈದುನ ಬಾಬು. ಹುಟ್ಟಿನಿಂದ ಮಾನಸಿಕ ಅಸ್ವಸ್ಥ. ತಂದೆ ತಾಯಿಯ ನಿಧನದ ನಂತರ ಅಣ್ಣ ಉಮೇಶನ...

7

ಜೀವನದ ಗೆಲುವು ಪುಸ್ತಕಗಳ ಒಡಲು

Share Button

‘ಪುಸ್ತಕ’ ಎಂದರೆ ಜ್ಞಾನ ಭಂಡಾರ. ಎಂದೂ ಕರಗದ ಸಂಪತ್ತು. ಪುಸ್ತಕಗಳು ತಲೆಮಾರುಗಳ ಆಸ್ತಿಯೂ ಹೌದು. ಪುಸ್ತಕಗಳ ಮಹತ್ವ ಪುಸ್ತಕಗಳನ್ನು ಓದಿದವರಿಗೇ ಗೊತ್ತು. ರಾಮಾಯಣ, ಮಹಾಭಾರತದಂತಹ ಮಹಾ ಗ್ರಂಥಗಳು ಮನುಷ್ಯನಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಹುಟ್ಟು ಹಾಕಬಲ್ಲವು. ಭಗವದ್ಗೀತೆಯು ಬದುಕಿನ ಬವಣೆಗಳನ್ನು ಭೇದಿಸುವ ರಹಸ್ಯವನ್ನು ತಿಳಿಸಿಕೊಡುತ್ತದೆ. ಮನುಷ್ಯನ ಆರೋಗ್ಯಕರ ವಿಕಸನದಲ್ಲಿ...

14

ಕ್ಷಮಿಸಲಾಗದ ಕರ್ಮ

Share Button

ಅಪ್ಪನ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿ ಬಂದ ಮೇಲೆ ಈ ಮನೆ ನನ್ನ ಮನೆಯೆಂದೆ ಅನಿಸುತ್ತಿಲ್ಲ. ಎಲ್ಲಿ ನೋಡಿದರೂ ಅಪ್ಪನ ಮುಖವೇ ಕಾಣುತ್ತಿದೆ. ಅಪ್ಪನ ಚಾಳೀಸು, ಬಿಳಿ ಪಂಚೆ, ಶರ್ಟ್, ಅರ್ಘೆ ಪಾತ್ರೆ, ಜಪ ಮಣಿ, ಕುಳಿತುಕೊಳ್ಳುತ್ತಿದ್ದ ಕುರ್ಚಿ, ತಟ್ಟೆ, ಲೋಟ ಹೀಗೆ ಸಾಕಷ್ಟು ನಿರ್ಜೀವ ವಸ್ತುಗಳು...

Follow

Get every new post on this blog delivered to your Inbox.

Join other followers: