Author: K M Sharanabasavesha
ಬಯಲಿನಲಿ ಹೆಮ್ಮರವೊಂದು ಸೆಟೆದು ನಿಂತಿತ್ತು ಹಮ್ಮು ಬಿಮ್ಮುನಲಿ ವಿಶಾಲವಾಗಿ ಹರಡಿಕೊಂಡಿರುವ ರೆಂಬೆ ಕೊಂಬೆಗಳುರಕ್ಕಸ ಮರದ ತುಂಬ ಹಚ್ಚ ಹಸುರಾದ ಎಲೆಗಳು ನಕ್ಕು ನಲಿದಿತ್ತು ಆಳಕ್ಕಿಳಿದ ಬೇರುಗಳಿಂದ ಪೋಷಕಾಂಶಗಳ ಪಡೆಯುತಲಿಅಹಂಕಾರದಲಿ ಮೆರೆದಿತ್ತು ತಿರುಚಿದ ಬಲವಾದ ಕಾಂಡದ ಬೆಂಬಲದಲಿ ಹಿಯ್ಯಾಳಿಸಿ ನಗುತ್ತಿತ್ತು ಕೆಳಗಿರುವ ಗರಿಕೆ ಹುಲ್ಲನ್ನು ನೋಡಿಕೊಲ್ಮಿಂಚು ಗುಡುಗು ಸಿಡಿಲುಗಳ...
ನದಿಯಾಗಿ ನಿಂದಿರುವೆ ಕಡಲ ಬಳಿಹರಿದು ಬಂದು ಕಾದಿರುವೆ ಒಳ ಸೇರಲೆಂದು ಕಂಪಿಸಿದೆ ಏಕೀ ಹೃದಯವಿಶಾಲ ಶರಧಿಯ ನೋಡಿ ಮೊರೆವ ಹೆದ್ದೊರೆಗಳ ಹೊಡೆತಕೆತುಂಬಿ ಹರಿದಿದೆ ಕಣ್ಣೀರ ಕೋಡಿ ಆಗಾಗ ಮುಗಿಲೆತ್ತರದ ಅಲೆಗಳುನೆರೆನೆರೆದು ಭುಸುಗುಟ್ಟುವ ನೀರಿನ ಕಣಗಳು ಎನ್ನೊಡಲ ಮೆಕ್ಕಲು ಮಣ್ಣು ಭಾರವಾಗಿ ಕೂತಿದೆಎನ್ನ ಕೆಂಪಾದ ಕೆನ್ನೆ ನೀಲಿಯಾಗತೊಡಗಿದೆ ನನ್ನ...
ಗೆಳೆಯರೊಂದಿಗೆ ಚಿನ್ನಿ ದಾಂಡು ಆಡಿಬೆಳಗ್ಗೆಯಿಂದ ಎಮ್ಮೆಯೊಂದಿಗೆ ಓಡಿಬಳಲಿದ ಕಾಲುಗಳ ಎದೆಗೆ ಮಡಿಸಿ ಜಾರಿದ್ದೆ ನಿದ್ರೆಗೆ ಮನೆತುಂಬ ಶಿಕ್ಷಕನಾದ ಅಪ್ಪನ ಶಿಷ್ಯಂದಿರುದೊಡ್ಡ ಅಂಕಣದ ತುಂಬಾ ಶಾಲೆಯ ಧಡೂತಿ ಹುಡುಗರುಮಧ್ಯ ರಾತ್ರಿಯಲ್ಲಿ ಎಲ್ಲೋ ಅಳುವಿನ ಧ್ವನಿಮೇಷ್ಟ್ರು ಹೋಗಿಬಿಟ್ಟರು ಎನ್ನುವ ಮಾತುಇದೇನೋ ಕನಸೋ ಎಂದು ಕಣ್ಣುಜ್ಜಿಕೊಳ್ಳುವುದರಲ್ಲಿಯಾರೋ ಬಂದು ಉಳ್ಳಾಡಿಸಿ ಎಬ್ಬಿಸಿದರುಅಪ್ಪ ಸತ್ತ...
ಬರೆದಿರುವೆ ನನ್ನ ಕೊನೆಯ ಪತ್ರನಿನಗೆ ಒಂದಲ್ಲ ಒಂದು ದಿನ ತಲುಪುವುದೆಂದು ಪುತ್ರ ನೀನು ನಿನ್ನ ಪುಟ್ಟ ತಂಗಿ ಒಳಗೊಂಡ ನಮ್ಮ ಚಿಕ್ಕ ಸಂಸಾರವಿಶಾಲ ಎದೆಯ ಗಿರಿಜಾ ಮೀಸೆಯ ನನ್ನ ಗಂಡ ಸರದಾರ ಉಟ್ಟು ಉಡಲು ಕಷ್ಟವಿರಲಿಲ್ಲಅನ್ನ ಮೇಲೋಗರಗಳಿಗೆ ಬರವಿರಲಿಲ್ಲಬಯಸಿದ್ದು ಕೊಳ್ಳುವಷ್ಟು ಶಕ್ತಿ ನಮ್ಮಲ್ಲಿ ಇಲ್ಲದೆ ಇರಲಿಲ್ಲ ನಿಮ್ಮ...
ಕಳೆದವಾರ ತರಗತಿಯಲಿ ಕಿರುಪರೀಕ್ಷೆ ನಡೆದಿತ್ತುಜಂಗಮವಾಣಿಯಲ್ಲಿ ಬಂದ ಅಂಕಗಳ ಸಂದೇಶವಿಂದು ಮನೆಯಲಿ ಬಿರುಗಾಳಿ ಸೃಷ್ಟಿಸಿತ್ತು ಮುನಿದ ಅಮ್ಮ ತಟ್ಟೆ ಪಾತ್ರೆಗಳ ಸಾಂಕೇತಿಕ ಭಾಷೆಯಲಿ ಮಾತನಾಡಿದರುನನ್ನ ಮೇಲಿನ ಆಕ್ರೋಶವ ಬರೀ ಉಪ್ಪಿಟ್ಟು ಮಾಡಿ ತೀರಿಸಿಕೊಂಡರು ಸದಾ ಓದಿನಲಿ ಮುಂದಿರುವ ತಂಗಿ ಮುಸಿ ಮುಸಿ ನಗುತಾತಾನು ಗಳಿಸಿದ ಅಂಕಗಳ ಮೂರು ಬಾರಿ...
ವಾರದಲ್ಲಿ ಎರಡು ಬಾರಿ ಬೀಡು ಬಿರುಸಾಗಿ ಸುರಿಯುತ್ತಿದ್ದ ಮಳೆಈಗೀಗ ಕಣ್ಮರೆಯಾಗಿದೆಅಡ್ಡಾದಿಡ್ಡಿ ಬಂದು ಧರೆಯನ್ನು ತೊಯಿಸಿ ತೊಪ್ಪೆಯಾಗಿಸುವ ಹನಿಗಳಿಗಾಗಿಮನ ಹಪಹಪಿಸಿದೆ ಸುರಿದಷ್ಟು ತೀವ್ರತೆ ಪಡೆಯುತ್ತಿದ್ದ ವರ್ಷದ ವೇಗಕ್ಕಾಗಿಬಳಲಿದ ಧರೆಯಿಂದು ಬಾಯಿ ತೆರೆದು ಕಾಯುತಿದೆಬಿಸಿಲ ಬೇಗೆಗೆ ಬಿರುಕು ಮೂಡಿದ ಧರಣಿಹರಿಯುವ ತಂಪನೆಯ ಹಳ್ಳ ತೊರೆಗಳಿಗಾಗಿ ಹಂಬಲಿಸಿದೆ ಕರಿಮೋಡ ಸುತ್ತುಗಟ್ಟಿ ಶಿಷ್ಟಾಚಾರ...
ಓಡುವ ಹೆಜ್ಜೆಗಳ ಸಪ್ಪಳಕೆ ಕೇಳಿಸದಮನದ ಮಾತು ಈಗೀಗ ಸ್ಪಷ್ಟವಾಗಿ ರಿಂಗಣಿಸತೊಡಗಿದೆ ಮೊದಲಿನಂತೆ ಓಟದ ವೇಗ ಈಗಿಲ್ಲಓಡುವ ಹುಮ್ಮಸ್ಸು ಕುಂದಿದೆಯೆಲ್ಲಾ ದಿನವಿಡೀ ದುಡಿದರೂ ಕಾಣದ ಆಯಾಸಈಗ ಬೆಳ ಬೆಳಗ್ಗೆಯೇ ಕಾಡತೊಡಗಿದೆಕೈ ಕಾಲುಗಳಲಿ ನೋವಿನ ರಾಗ ಇಣುಕತೊಡಗಿದೆ ನಡೆದೇ ಬರುತ್ತಿದ್ದ ತರಕಾರಿ ಈಗ ವಾಹನ ಕೇಳತೊಡಗಿದೆಗೊತ್ತಿಲ್ಲದೆ ಮಾತಿನ ಮಧ್ಯೆ ರಾಜಕೀಯ...
ಮನವೆಂಬ ಒಲೆಯಲಿ ಬೇಯುತಿದೆ ಜ್ಞಾನದ ಅಡುಗೆಅನುಭವದ ಅಗ್ನಿ ಜ್ವಾಲೆಗೆ ಕೊತ ಕೊತ ಕುದಿಯುತಿದೆ ಸಮಯವೆಂಬ ಕಟ್ಟಿಗೆ ಉರಿದು ಬೂದಿಯಾಗುತ್ತಿದೆಪರಿಶ್ರಮವೆಂಬ ವ್ಯಂಜನಕ್ಕೆ ನಿಷ್ಠೆಯೆಂಬ ನೀರು ಬೆರೆತಿದೆಅದೃಷ್ಟವೆಂಬ ಚಿಟಿಕೆ ಉಪ್ಪು ರುಚಿಯ ತರಿಸಿದೆ ಬೇಯದ ಗಟ್ಟಿಕಾಳುಗಳಂತೆ ಈ ಹಠಮಾರಿತನವುಬೇಗನೆ ಮೆತ್ತಗಾಗುವ ಹಸಿ ಸೊಪ್ಪಂತೆ ಸಂಕೋಚ ಸ್ವಭಾವವು ಮುದತರುವ ಘಟನೆಗಳೇ ಸಿಹಿಯ...
ಮನದ ಮುಂದೆ ಮಡುಗಟ್ಟಿದ ಆಸೆಯುಬಿಡದೆ ತಿನ್ನಬೇಕೆಂಬ ಇಚ್ಛೆಯ ತಂದೊಡ್ಡಿದೆಕೇಸರಿ ಬಣ್ಣದ ಸುರುಳಿ ಸುರುಳಿಯಾದ ಸಕ್ಕರೆಯಲೇ ಅದ್ದಿದಅಕ್ಕರೆಯ ಜಿಲೇಬಿ ಬಾಯಲ್ಲಿ ನೀರೂರಿಸಿದೆ ನಾಲಿಗೆಗೆ ತಾಗಿದ ಮೆತ್ತನೆಯ ತುಣುಕೊಂದು ಸವಿಯುವ ಮೋಹವ ಕೆರಳಿಸಿದೆದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಅಪಾಯ ತರುವ ಎಚ್ಚರಿಕೆ ಮೂಲೆ ಸೇರಿದೆ ಬೆಳಗಿನ ತಿಂಡಿಯ ಮಣಗಟ್ಟಲೆ ನುಂಗಿದಹೊಟ್ಟೆಯೂ...
ಅಳುತ್ತಾ ಈ ಜಗಕ್ಕೆ ಆಗಮಿಸಿದಾಗನೋವಿನಲ್ಲೂ ನನ್ನ ಎತ್ತಿ ಮುದ್ದಾಡಿ ಸಂತೈಸಿದವಳುಅದೇ ಹೆಣ್ಣೆಂಬ ದೇವತೆ ನನ್ನಮ್ಮ ಕಾಲಚಕ್ರ ಉರುಳಿ ನಾನು ಬೆಳೆದು ನಿಂತುಆಡಲು ಸಂಗಾತಿ ಬೇಕೆನಿಸಿದಾಗನನ್ನಯ ತುಂಟಾಟ ಸಹಿಸಿಕೊಂಡುನನ್ನೊಡನೆ ಆಡಲು ಬಂದಿದ್ದುಅದೇ ಹೆಣ್ಣೆಂಬ ದೇವತೆ ನನ್ನಕ್ಕ ಅಕ್ಷರವ ಅಕ್ಕರೆಯಲಿ ಕಲಿತುಅಜ್ಞಾನವ ದೂರಗೊಳಿಸಲು ಶಾಲೆಗೆ ಸೇರಿದಾಗತಾಳ್ಮೆ ಪ್ರೀತಿಯ ತೋರಿ ಕಲಿಸಲು...
ನಿಮ್ಮ ಅನಿಸಿಕೆಗಳು…