ಪ್ರಜೆಗಳ ಪರ್ವ
ಪ್ರಜಾಪ್ರಭುತ್ವದ ಮಹೋನ್ನತ ಹಬ್ಬ ಬರುತಿದೆ
ಮತಗಟ್ಟೆಗಳೆಂಬ ದೇಗುಲಗಳು ಸಿಂಗಾರಗೊಂಡು ಕಾಯುತಿವೆ
ಸಂವಿಧಾನವೆಂಬ ಮೂಲಮಂತ್ರ ಪಠಿಸಿ
ಜಾತಿ ಪಂಥ ಭೇದಗಳ ದೂರವಿರಿಸಿ
ಕಷ್ಟ ಕೋಟಲೆಗಳ ಕಳೆಯುವ ದೈವವ ಪ್ರತಿಷ್ಟಾಪಿಸಿ
ಜನ ಜಾಗೃತಿಯ ರಥ ಎಳೆಯಲು ದಿನ ಕೂಡಿ ಬಂದಿದೆ
ಪ್ರಜೆಗಳೇ ಪ್ರಭುಗಳೆಂಬ ತತ್ವವ ಸಾರಲು ಅವಕಾಶ ಸಿಗುತಿದೆ
ಆಳುವ ವ್ಯವಸ್ಥೆಯ ಆಯ್ಕೆ ಮಾಡುವ ಸೌಭಾಗ್ಯ ದೊರೆಯುತಿದೆ
ರಾಜಕೀಯ ಪ್ರಜ್ಞೆ ಬೆಳೆಸಿಕೊಂಡ ಎಲ್ಲರ ಕೈ ಬೀಸಿ ಕರೆಯುತಿದೆ
ಸಾಲಲ್ಲಿ ನಿಂದು ಹಕ್ಕು ಚಲಾಯಿಸಲು ಮನ ಕಾತುರವಾಗಿದೆ
ದೇವರ ಪೂಜೆಯಷ್ಟೇ ಪವಿತ್ರ ಈ ಮತದಾನ ಎಂದು ಮನವರಿಕೆಯಾಗಿದೆ
ಅಸಮಾನತೆ ಕಿತ್ತೊಗೆದು ಪ್ರಜಾಸತ್ತಾತ್ಮಕ ಮೌಲ್ಯಗಳ ಬಿತ್ತಲು ಇದು ಸುವರ್ಣಾವಕಾಶವಾಗಿದೆ
ಆಡಳಿತ ಅಭಿವೃದ್ಧಿಯ ಜಾರಿಗೆ ತರಲು ನಮ್ಮ ಮತವೇ ಕಾರಣವಾಗಲಿದೆ
ರಜೆ ಸಿಕ್ಕಿತೆಂದು ಮೋಜು ಮಸ್ತಿ ಮಾಡದೆ ತಪ್ಪದೇ ಓಟು ಹಾಕೋಣ
ಭವ್ಯ ಭಾರತದ ನಿರ್ಮಾಣಕ್ಕೆ ಜವಾಬ್ದಾರಿಯುತ ನಾಗರೀಕರಾಗೋಣ
ಮತ ಹಾಕಿ ಬೇರೆಯವರೂ ಹಾಕುವಂತೆ ಮನ ಒಲಿಸಿ ಕಡ್ಡಾಯ ಮತದಾನಕ್ಕೆ ಕಾರಣವಾಗೋಣ
-ಕೆ.ಎಂ ಶರಣಬಸವೇಶ, ಶಿವಮೊಗ್ಗ.
ನಾವು ಕೇರಳದವರು. ನಮಗೆ ಈಗ ಇಲ್ಲ.
ನಿಮ್ಮ ರಾಜ್ಯದಲ್ಲಿ ಚುನಾವಣೆ ನಡೆದಾಗ ಖಂಡಿತವಾಗಿ ಮತ ಚಲಾಯಿಸಿ
ನಿಮ್ಮ ರಾಜ್ಯದಲ್ಲಿ ಚುನಾವಣೆ ನಡೆದಾಗ ತಪ್ಪದೇ ಮತ ಚಲಾಯಿಸಿ
ಮತದಾನದ ಮಹತ್ವ ಕರ್ತವ್ಯದ ಕಡೆ ಗಮನದ ಅನಾವರಣ ಗೊಳಿಸಿರುವ ಕವನ ಅರ್ಥಪೂರ್ಣ ವಾಗಿದೆ ಸಾರ್.. ಧನ್ಯವಾದಗಳು
Need of the hour ಅಂತಾರಲ್ಲ, ಹಾಗೆ, ಅತ್ಯಂತ ಸಮಯೋಚಿತವಾಗಿದೆ. ಅಭಿನಂದನೆಗಳು.
ಚಂದದ ಆಶಯ
Nice
ಸಕಾಲಿಕ ಕವನ.
ಮತದಾನದ ಮಹತ್ವ ತಿಳಿಸುವ ಸಕಾಲಿಕ ಕವನ ಚೆನ್ನಾಗಿದೆ.
“ಮತಗಟ್ಟೆಗಳೆಂಬ ದೇಗುಲಗಳು” – ಕಲ್ಪನೆ ಚೆನ್ನಾಗಿದೆ