ಶೇಕಡಾ ನೂರರಷ್ಟು ಮತದಾನಕ್ಕೆ ಕೆಲವು ಸಲಹೆಗಳು
ಪ್ರತಿಬಾರಿ ಚುನಾವಣೆ ಸಂದರ್ಭದಲ್ಲಿ 100ಕ್ಕೆ 100 ಮತದಾನವಾಗಬೇಕಾದರೆ ನಮ್ಮದೊಂದಿಷ್ಟು ಸಲಹೆಗಳು.
1. ಕಳೆದ ಬಾರಿ ಮತ್ತು ಈ ಬಾರಿ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಕೂಡ ಮತಾಧಿಕಾರ ಚಲಾವಣೆ ಮಾಡದಿರುವವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ ಮುಂದಿನ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧಪಡಿಸಬೇಕು.
2. ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಕೂಡ ಮತಾಧಿಕಾರ ಚಲಾವಣೆ ಮಾಡದಿರುವವರ ಮತದಾರ ಕಾರ್ಡ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸಬೇಕು. ಹಾಗೂ ಸರ್ಕಾರದ ಯಾವುದೇ ಮೂಲಭೂತ ಸೌಕರ್ಯ, ಸೌಲಭ್ಯಗಳನ್ನು ಪಡೆಯದಂತೆ ಅನರ್ಹಗೊಳಿಸಬೇಕು.
3. ಆನ್ಲೈನ್ ಓಟಿಂಗ್ – ಚುನಾವಣೆ ಮತದಾನದ ದಿನದಂದು ವೈಯುಕ್ತಿಕ ಕಾರಣಗಳಿಂದ ಮತದಾನ ಕೇಂದ್ರಗಳಿಂದ ದೂರವಿರುವವರಿಗೆ ಆನ್ಲೈನ್ ಬಯೋಮೆಟ್ರಿಕ್ ಮೂಲಕ ಅವರ ಓಟಿಂಗ್ ಕಾರ್ಡ್, ಆಧಾರ್ ಕಾರ್ಡ್ ಗಳ ಸಹಾಯದಿಂದ ಮತದಾನ ಮಾಡಲು ಅವಕಾಶ ನೀಡಬೇಕು.
4. ಎಟಿಎಂ ಕಾರ್ಡ್ ರೀತಿಯಲ್ಲಿ ಓಟಿಂಗ್ ಕಾರ್ಡ್ ಅನ್ನು ಜನರಿಗೆ ನೀಡಬೇಕು. ಈ ಮೂಲಕ ಒಬ್ಬ ವ್ಯಕ್ತಿ ಒಂದು ಬಾರಿ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾವಣೆ ಸಮಯದಲ್ಲಿ ಓಟಿಂಗ್ ಕಾರ್ಡ್ ಅನ್ನು ಓಟಿಂಗ್ ಮಿಷನ್ ನಲ್ಲಿ ಸ್ಕ್ಯಾನ್ ಮಾಡಿ ಮತದಾನ ಮಾಡಬಹುದು ಹಾಗೂ ಇದರ ದಾಖಲಾತಿ ಓಟಿಂಗ್ ಕಾರ್ಡ್ ನಲ್ಲಿ ದಾಖಲಾಗಬೇಕು. ಇದಕ್ಕೆ ಸಂಬಂಧಿಸಿದ ಓಟಿಂಗ್ ರಸೀದಿಯನ್ನು ಸಹ ಎಟಿಎಂ ಮಿಷನ್ ರೀತಿಯಲ್ಲಿ ನೀಡುವಂತೆ ವ್ಯವಸ್ಥೆ ಮಾಡಬೇಕು.
5. ಮತದಾನದ ಸಮಯ ಬದಲಾವಣೆ – ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗಿರುವ ಮತದಾನದ ಸಮಯವನ್ನು ರಾತ್ರಿ 7 ಗಂಟೆಯವರೆಗೂ ವಿಸ್ತರಣೆ ಮಾಡಬೇಕು.
6. ಮೊಬೈಲ್ ಓಟಿಂಗ್ – ಪ್ರತಿಯೊಬ್ಬರ ಬಳಿಯೂ ಮೊಬೈಲ್ ಇರುತ್ತದೆ. ಪ್ರತಿಯೊಬ್ಬರೂ ಕೂಡ ಓಟಿಂಗ್ ಯ್ಯಾಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡು ತಮ್ಮ ಮನೆಯಿಂದಲೇ ತಮ್ಮ ಆಧಾರ ಕಾರ್ಡ್, ಓಟಿಂಗ್ ಸ್ಮಾರ್ಟ್ ಕಾರ್ಡ್ ನಂಬರ್, ತಮ್ಮ ಮುಖ ಚಹರೆ ಮತ್ತು ಹೆಬ್ಬೆರಳಗಳ ಬಯೋಮೆಟ್ರಿಕ್ ಮೂಲಕ ಓಟಿಂಗ್ ಮಾಡುವಂತೆ ವ್ಯವಸ್ಥೆ ಮಾಡಬೇಕು. ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಈ ಓಟಿಂಗ್ ಮಾಡಿದರ ದಾಖಲೆಯನ್ನು ಐದು ವರ್ಷಗಳ ಕಾಲ ಪ್ರತಿಬಾರಿಯೂ ಸಲ್ಲಿಸುವಂತೆ ಕೋರ್ಟ್ ಆದೇಶ ನೀಡಬೇಕು.
7. ಓಟಿಂಗ್ ಬೂತ್ ಗಳ ಹೆಚ್ಚಳ – 500 ಜನರಿಗೆ ಒಂದು ಓಟಿಂಗ್ ಬೂತ್ ವ್ಯವಸ್ಥೆ ಮಾಡಬೇಕು.
8. ಓಟಿಂಗ್ ಸ್ಮಾರ್ಟ್ ಕಾರ್ಡ್ ಅನ್ನು 18 ವರ್ಷ ಮೇಲ್ಪಟ್ಟ ಭಾರತೀಯರಿಗೆಲ್ಲರಿಗೂ ಚುನಾವಣಾ ಆಯೋಗ ನೀಡಬೇಕು. ಈ ಸ್ಮಾರ್ಟ್ ಕಾರ್ಡ್ ಗೆ ಆಧಾರ್, ಪಾನ್, ರೇಷನ್ ನಂಬರ್ ಲಿಂಕ್ ಆಗಿರಬೇಕು.
9. ಓಟಿಂಗ್ ಸ್ಮಾರ್ಟ್ ಕಾರ್ಡ್ ಮೂಲಕ ಓಟು ಹಾಕಿದವರಿಗೆ ಮೂರು ದಿನಗಳವರೆಗೆ ಆಸ್ಪತ್ರೆ, ಮೆಡಿಕಲ್ ಶಾಪ್, ಹೊಟೇಲ್, ಟಾಕೀಸ್, ಮಾಲ್, ಬಸ್ , ರೈಲು, ವಿಮಾನಗಳಲ್ಲಿ ಶೇಕಡಾ 5 ರಷ್ಟು ವಿಶೇಷ ರಿಯಾಯಿತಿ ನೀಡಬೇಕು.
10. ಸರ್ಕಾರದ ವಿವಿಧ ನೇಮಕಾತಿ ಅರ್ಜಿ, ಯೋಜನೆಗಳ ಲಾಭ ಪಡೆಯುವಾಗ ಸಲ್ಲಿಸುವ ಅರ್ಜಿಗಳ ಸಮಯದಲ್ಲಿ 18 ಮೇಲ್ಪಟ್ಟವರು ತಮ್ಮ ಓಟಿಂಗ್ ಸ್ಮಾರ್ಟ್ ಕಾರ್ಡ್ ಅನ್ನು ಕಡ್ಡಾಯವಾಗಿ ಸ್ಕ್ಯಾನ್ ಮಾಡಿಸಿ ಅದರ ಝೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು.
11. ಚುನಾವಣಾ ಅಭ್ಯರ್ಥಿಗಳಿಗೆ ಟಾರ್ಗೆಟ್ – ವಿಧಾನ ಸಭಾ, ಲೋಕಸಭಾ ಚುನಾವಣೆಯಲ್ಲಿ ನಿಲ್ಲುವ ವಿವಿಧ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರ ಮೂಲಕ ಆಯಾ ಮತಗಟ್ಟೆ ಕ್ಷೇತ್ರದಲ್ಲಿರುವವರ ಮನೆಮನೆಗೆ ತೆರಳಿ ಮತದಾರರ ಮನವೊಲಿಸಿ ಮತದಾನ ಕೇಂದ್ರಕ್ಕೆ ಬರುವಂತೆ ಮತಾಧಿಕಾರವನ್ನು ಚಲಾಯಿಸುವಂತೆ ಟಾರ್ಗೆಟ್ ನೀಡಬೇಕು. ಶೇಕಡಾ 50 ಕ್ಕಿಂತ ಕಡಿಮೆ ಮತದಾನವಾಗಿರುವ ಪ್ರದೇಶಗಳ ಮತದಾನವನ್ನು ಚುನಾವಣಾ ಫಲಿತಾಂಶಕ್ಕೆ ಪರಿಗಣನೆ ಮಾಡಬಾರದು. ಆಗ ಮಾತ್ರ ಚುನಾವಣಾ ಅಭ್ಯರ್ಥಿಗಳು ಮತದಾರರಿಗೆ ಮತದಾನಕ್ಕೆ ಹೆಚ್ಚು ಪ್ರೇರಣೆ ನೀಡಲು ಮುಂದಾಗುತ್ತಾರೆ.
12. ಮರು ಅಥವಾ ಉಪ ಚುನಾವಣೆ ನಿಷೇಧ – ದೇಶದಲ್ಲಿ ಒಂದು ಬಾರಿ ಮಾತ್ರ ಒಬ್ಬ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು. ಸೋತ ಅಭ್ಯರ್ಥಿಗಳು ಬೇಕಾದರೆ ಯಾವುದೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಗೆದ್ದಂತಹ ಅಭ್ಯರ್ಥಿಗಳಿಗೆ ಮರು ಅಥವಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು.
13. ಮತದಾನ ಮಾಡಿದವರಿಗೆ ಮಾತ್ರ ಪ್ರಶ್ನಿಸುವ ಅಧಿಕಾರ – ಚುನಾವಣೆಯಲ್ಲಿ ಮತದಾನ ಮಾಡಿರುವವರಿಗೆ ಮಾತ್ರ ಚುನಾಯಿತ ಜನಪ್ರತಿನಿಧಿಗಳ ಬಗ್ಗೆ, ಸರ್ಕಾರದ ವಿವಿಧ ಸೌಲಭ್ಯಗಳ ಬಗ್ಗೆ ಪ್ರಶ್ನಿಸುವ ಅಧಿಕಾರ ನೀಡಬೇಕು.
14. ಮುಂಗಡ ಮತದಾನ ಬುಕ್ಕಿಂಗ್ – ಚುನಾವಣಾ ಆಯೋಗವು ಮತದಾರರಿಗೆ ಚುನಾವಣಾ ಮತದಾನ ದಿನದಂದು ತಮಗೆ ಸೂಕ್ತವೆನಿಸಿದ ಸಮಯದಲ್ಲಿ ಮತದಾನ ಮಾಡಲು ಮುಂಗಡವಾಗಿ ಬುಕ್ಕಿಂಗ್ ಮಾಡುವ ಅವಕಾಶ ಒದಗಿಸಬೇಕು.
15. ಸೂಕ್ತ ವ್ಯವಸ್ಥೆಗಳು – ಮತದಾನ ಕೇಂದ್ರಕ್ಕೆ ಬರುವ ಮತದಾರರಿಗೆ ಕುಡಿಯುವ ನೀರಿನ, ಲಘು ಉಪಹಾರದ, ಮನರಂಜನೆಗೆ ಟಿವಿ, ವೈಫೈ ಸೌಲಭ್ಯ, ಫ್ಯಾನ್, ನೆರಳಿನ ವ್ಯವಸ್ಥೆ, ವೃದ್ಧರು , ವಿಕಲಚೇತನರಿಗೆ ವಾಹನಗಳ ವ್ಯವಸ್ಥೆ ಮಾಡಬೇಕು.
ನಮ್ಮ ಈ ಸಲಹೆಗಳನ್ನು ಮುಂದಿನ ಚುನಾವಣೆಗಳ ಸಂದರ್ಭದಲ್ಲಿ ಚುನಾವಣಾ ಆಯೋಗ ಕಾರ್ಯಗತಗೊಳಿಸಿದ್ದರೆ ನೂರಕ್ಕೆ ನೂರರಷ್ಟು ಮತದಾನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನಮ್ಮ ಅನಿಸಿಕೆಯಾಗಿದೆ.
–ಶಿವಮೂರ್ತಿ.ಹೆಚ್. ದಾವಣಗೆರೆ.
ಸಮಯೋಚಿತ ಸರ್, ಲೇಖನವನ್ನು ಅನುವಾದಿಸಿ, ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೂ
ಭಾರತ ಚುನಾವಣಾ ಆಯೋಗದ ಇಮೇಲಿಗೂ ಕಳಿಸಿಕೊಡಬಹುದೆಂಬುದು ನನ್ನ ಅನಿಸಿಕೆ.
ಪ್ರಯತ್ನ ನಡೆಯುತ್ತಿರಬೇಕು. ಸುಧಾರಣೆಗೂ ಬದಲಾವಣೆಗೂ. ಅಭಿನಂದನೆ ಮತ್ತು ಧನ್ಯವಾದಗಳು
ಕಳಿಸುವ ವಿಧಾನ ತಿಳಿಸಿ ಸರ್
ಸಮಯೋಚಿತ ವಾದಂತಹ ಲೇಖನಕೊಟ್ಟಿದಕ್ಕೆ…ವಂದನೆಗಳು ಸಾರ್.
ಧನ್ಯವಾದಗಳು ಮೇಡಂ
ಬಹಳ ಒಳ್ಳೆಯ ಸಲಹೆಗಳನ್ನು ನೀಡಿದ್ದೀರಿ….ಅವುಗಳನ್ನು ಅಳವಡಿಸುವುದು ಮಾತ್ರ ಯಾವಾಗ ಎಂದು ಕಾದು ನೋಡಬೇಕು ಅಷ್ಟೆ!
ಧನ್ಯವಾದಗಳು ಮೇಡಂ
ಎಲ್ಲವನ್ನೂ ಅಳವಡಿಸಲಾಗದಿದ್ದರೂ ಕೆಲವೊಂದನ್ನಾದರೂ ಅಳವಡಿಸಿದಲ್ಲಿ ಮತದಾನದ ಶೇಕಡಾವಾರು ಹೆಚ್ಚಾಗಬಹುದು.
ನಿಜ ಮೇಡಂ