ಕ್ಯಾಲೆಂಡರ್
ಬರುತಿದೆ ನವ ವರುಷ
ತರುತಿದೆ ಭಾವ ಹರುಷ
ಕೋರುತಿದೆ ಸಹಬಾಳ್ವೆಗೆ ಸೂತ್ರ
ಸಾರುತಿದೆ ವಿಶ್ವಶಾಂತಿಯ ಮಂತ್ರ.
ಜನವರಿಯು ಸಂಕ್ರಾಂತಿ ಸಡಗರವು
ಫೆಬ್ರವರಿಯು ಶಿವರಾತ್ರಿಯ ಸಂಭ್ರಮವು
ಮಾರ್ಚಿನಲ್ಲಿ ಯುಗಾದಿ ಚೈತ್ರ ಸಿಂಚನ
ಏಪ್ರಿಲ್ನಲ್ಲಿ ಬಾಳ ತಿರುವಿನ ಪರೀಕ್ಷೆಗಳ ಕದನ.
ಮೇನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಫಲಿತಾಂಶವು
ಜೂನ್ನಲ್ಲಿ ಶಾಲೆಗಳ ಆರಂಭ ತಳಿರು ತೋರಣವು
ಜುಲೈನಲ್ಲಿ ಕಾರ್ಗಿಲ್ ಕಲಿಗಳ ವಿಜಯೋತ್ಸವ
ಆಗಸ್ಟ್ನಲ್ಲಿ ಭಾರತಾಂಬೆಯ ಸ್ವಾತಂತ್ರ್ಯೋತ್ಸವ.
ಸೆಪ್ಟೆಂಬರ್ನಲ್ಲಿ ಗುರುಗಳ ಸ್ಮರಿಸುವ ಭಾಗ್ಯವು
ಅಕ್ಟೋಬರ್ನಲ್ಲಿ ಗಾಂಧೀಜಿಯ ನೆನೆವ ಯೋಗವು
ನವೆಂಬರ್ನಲ್ಲಿ ಮಕ್ಕಳ ಪ್ರೀತಿಯ ಚಾಚಾರ ನೆನಪು
ಡಿಸೆಂಬರ್ನಲ್ಲಿ ಕ್ರಿಸ್ಮಸ್ ಸಡಗರದ ಹೊಳಪು.
ಹನ್ನೆರಡು ತಿಂಗಳುಗಳ ಮಜದ ಬೆರಗುಗಳು
ಐವತ್ತೆರಡು ವಾರಗಳ ರಜದ ಸೊಬಗುಗಳು
ಮೂನ್ನರೈವತ್ತೈದು ದಿನಗಳ ನಿತ್ಯ ಆಟಪಾಠವು
ಎಂಟ್ಸಾವಿರ ಏಳ್ನೂರವತ್ತು ಗಂಟೆಗಳ ಅನುಭವವು.
ವರುಷಕ್ಕೆ ಗೋಡೆ ಕ್ಯಾಲೆಂಡರ್ ಬದಲಾವಣೆ
ಹರುಷಕ್ಕೆ ಅಡೆತಡೆಗಳ ನಿತ್ಯ ಹಲವು ಬವಣೆ
ಪ್ರತಿಕ್ಷಣನು ಆನಂದಿಸುವ ಮನೋಭಾವನೆಯು
ಪರಮಾತ್ಮನ ಈ ನಾಟಕದಿ ನಮ್ಮದಿಲ್ಲಿ ನಟನೆಯು.
–ಶಿವಮೂರ್ತಿ.ಹೆಚ್, ದಾವಣಗೆರೆ.
ವರುಷದಲ್ಲಿ ಬರುವ ತಿಂಗಳಲ್ಲಿ ನ ವಿಶೇಷತೆಗಳನ್ನು ಹೇಳುತ್ತಾ ನಾವೆಲ್ಲರೂ ಭಗವಂತನ ಕೈನ ಪಾತ್ರ ಧಾರಿಗಳಷ್ಟೇ ಸೂತ್ರ ಅವನ ಕೈಯಲ್ಲಿ ಎಂಬ ಸತ್ಯವನ್ನು ಪ್ರತಿಪಾದಿಸುವ ಕವನ..ಸರಳವಾಗಿದ್ದು.. ಉತ್ತಮ ಸಂದೇಶ ಹೊತ್ತು ಬಂದಿದೆ ಸಾರ್
ಸೂಪರ್ ಸರ್. ಪ್ರತೀ ತಿಂಗಳ ವಿಶೇಷತೆಯನ್ನು ವಿವರಿಸಿರುವುದು ಮೆರುಗು ತಂದಿದೆ ಕವನಕ್ಕೆ.
ಎಲ್ಲಾ ತಿಂಗಳುಗಳ ವಿಶೇಷತೆಗಳನ್ನು ಹೊತ್ತ ಕವನ ವಿಶೇಷವಾಗಿದೆ!
ಚಂದದ ವಿವರಣೆಗಳೊಂದಿಗೆ ಪ್ರತೀ ತಿಂಗಳ ಸಂಭ್ರಮಾಚರಣೆಯನ್ನು ಗುರುತಿಸುವ ಕವಿತೆ.