ಗಜಲ್
ಹಣಕ್ಕಾಗಿ ಹೆಣಗಾಡಿ
ಹೆಣವಾಗುವೇಕೆ ಮನುಜ
ಹೆಣ್ಣಿಗಾಗಿ ತಿಣುಕಾಡಿ
ಕಣ್ಣ್ಮುಚ್ಚುವೇಕೆ ಮನುಜ.
ಮಣ್ಣಿಗಾಗಿ ಕಾದಾಡಿ
ಮಣ್ಣಾಗುವೇಕೆ ಮನುಜ
ಋಣವಿಲ್ಲದಕ್ಕೆ ಕಿತ್ತಾಡಿ
ಪ್ರಾಣಬಿಡುವೇಕೆ ಮನುಜ.
ಮೂರು ದಿನದ ಬಾಳಲ್ಲಿ ಹಾರಾಡಿ
ಬಾಳಲ್ಲಿ ಕಾಲಕಸವಾಗುವೇಕೆ ಮನುಜ
ನೂರಾರು ಸುಳ್ಳು ಭರವಸೆ ನೀಡಿ
ವಿಶ್ವಾಸ ದ್ರೋಹಿಯಾಗುವೇಕೆ ಮನುಜ.
ನಾನು ನನ್ನೆಂದು ಮೆರೆದಾಡಿ
ಏನಿಲ್ಲದಂತಾಗುವೇಕೆ ಮನುಜ
ನಶ್ವರದ ಬಾಳಿಗೆ ಪೇಚಾಡಿ
ಈಶ್ವರನ ಮರೆಯವೇಕೆ ಮನುಜ.
ತಿಳಿದು ಕೂಡ ತಪ್ಪು ಮಾಡಿ
ತಿಳಿಗೇಡಿಯಾಗುವೇಕೆ ಮನುಜ
ಶಿವನಾಡಿದ ಅನುಭವ ನುಡಿ
ಕಡೆಗಣಿಸಿ ಬಾಳುವೇಕೆ ಮನುಜ.
-ಶಿವಮೂರ್ತಿ.ಹೆಚ್, ದಾವಣಗೆರೆ.
Nice
ಸರಳ ಸುಂದರ ಕವನ ಚೆನ್ನಾಗಿದೆ ಸಾರ್
ಸದಾಶಯದ ಚಂದದ ಕವನ
ಬದುಕಿನ ನಶ್ವರತೆಯನ್ನು ಬಿಂಬಿಸುತ್ತಾ ನೀತಿ ಪಥದತ್ತ ದಾರಿ ತೋರುವ ಸುಂದರ ಕವನ