ಅವಳು
ಮನದಾಳದ ಬಯಕೆಗಳೆಲ್ಲ
ಬೂದಿ ಮುಚ್ಚಿದ ಕೆಂಡದಂತೆ
ತನ್ನೊಳಗೊಳಗೆ ಸುಡುತ್ತಿದ್ದರು
ಮುಗುಳ್ನಗಯೊಂದಿಗೆ ಸಾಗುವಳು.
ತನ್ನಿಚ್ಚೆಯಂತೇನು ನಡೆಯದಿದ್ದರು
ಸಂಸಾರ ನೊಗವ ಹೊತ್ತುಕೊಂಡು
ತನ್ನವರಿಗಾಗಿ ಗಾಣದ ಎತ್ತಿನಂತೆಯೇ
ಹಗಲಿರುಳೆನ್ನದೆ ದುಡಿಯುವಳು.
ಯಾರಲ್ಲೂ ಏನ್ನನ್ನು ಬೇಡದೆ
ಇರುವುದರಲ್ಲಿಯೇ ಅರಿತು
ನಿಸ್ವಾರ್ಥಿಯಾಗಿ ಜಗದೊಳಗೆ
ಬಾಳಿಗೆ ಜ್ಯೋತಿಯಾಗಿರುವಳು.
ನಿತ್ಯ ನೂರಾರು ಜಂಜಾಟಗಳಿಗಂಜದೆ
ಸತ್ಯ ಧರ್ಮ ನ್ಯಾಯ ಮಾರ್ಗ ಬಿಡದೇ
ಕಷ್ಟ ಕಾರ್ಪಣ್ಯದ ಮುಳ್ಳಿನ ಬೇಲಿಯಲ್ಲಿ
ಅರಳಿ ನಗುತಿರುವ ಗುಲಾಬಿ ಹೂವಿವಳು.
ಹುಟ್ಟಿ ಬೆಳೆದ ತವರೂರು ಮನೆಗೂ
ಕರಿಮಣಿ ಮಾಲೀಕನ ವಂಶಕ್ಕೂ
ಯಾವುದೇ ಕಳಂಕವೂ ಬಾರದಂತೆ
ಜೀವನದುದ್ದಕ್ಕೂ ಜೀವವೇ ತೇಯ್ದವಳು.
–ಶಿವಮೂರ್ತಿ.ಹೆಚ್. ದಾವಣಗೆರೆ.
ಸರಳ ಸುಂದರ.. ಕವನ ಸಾರ್..ಸೊಗಸಾಗಿ ದೆ..
ಧನ್ಯವಾದಗಳು ಮೇಡಂ…
ಮನೆ, ಮನದೊಡತಿಗೆ ನೀಡಿದ ಗೌರವದ ಕಾಣಿಕೆಯಾಗಿ ಹೊರಹೊಮ್ಮಿರುವ ಸೊಗಸಾದ ಕವನ.
ಧನ್ಯವಾದಗಳು ಮೇಡಂ…
Very nice
ಧನ್ಯವಾದಗಳು ಮೇಡಂ
ಅರ್ಥಪೂರ್ಣವಾದ ಹೆಣ್ಣಿನ ಬದುಕಿನ ಚಿತ್ರಣ
ವಂದನೆಗಳು
ಧನ್ಯವಾದಗಳು ಮೇಡಂ
ಸೊಗಸಾದ ರಚನೆ ಸರ್
ಧನ್ಯವಾದಗಳು ಮೇಡಂ
ಚಂದ ಕವಿತೆ
ಧನ್ಯವಾದಗಳು ಮೇಡಂ
ಹೆಣ್ಣಿನ ಸಹಜ ಗುಣಗಳನ್ನು ಯಥಾವತ್ತಾಗಿ ಚಿತ್ರಿಸಿದ ಸುಂದರ ಕವನ.
ಧನ್ಯವಾದಗಳು ಹಿರಿಯರೇ