ಹಸಿರು ಜೀವದುಸಿರು.
ಜಗದ ಜೀವರಾಶಿಗಳ ಉಗಮಕ್ಕೆ
ಕಾರಣವಾಯಿತು ಜೀವಾಮೃತ ನೀರು
ಜೀವಿಗಳ ಅಳಿಯುವು ಉಳಿಯುವಿಕೆ
ಪ್ರಾಣವಾಯು ಆಯಿತು ಹಚ್ಚಹಸಿರು.
ಮನುಷ್ಯರ ಆಸೆಯ ಪೂರೈಸುವ ಪ್ರಕೃತಿ
ದಾನವರ ದುರಾಸೆಯಿಂದ ಆಗಿರುವುದು ವಿಕೃತಿ
ಜಗದೇವನ ಸುಂದರ ಕಲ್ಪನೆಯು ಈ ಸೃಷ್ಟಿಯ
ಹಾಳು ಮಾಡಿದರೆ ಕಳೆದುಕೊಳ್ಳುವರು ದೃಷ್ಟಿಯ.
ಭೂದೇವಿಯ ಹಸಿರುಡುಗೆಗಳೇ ಅರಣ್ಯಗಳು
ಭೂಮಿಜರಿಗೆ ಅರಣ್ಯಗಳೇ ಜೀವದುಸಿರುಗಳು
ಭೂದಾರ ಅವತಾರವೆತ್ತಿ ವಿಷ್ಣು ರಕ್ಷಿಸಿದ ಕ್ಷಿತಿಜ
ಭೂಮಾತೆಯ ಒಡಲ ವೃಕ್ಷಗಳ ರಕ್ಷಿಸು ಮನುಜ.
ಚಿಗುರುವ ಎಳೆಯ ಸಸಿಯನು ತುಳಿಯದಿರಿ
ಚಿಗುರೊಡೆದು ಮರವಾಗುವಂತೆ ಬೆಳೆಸಿರಿ
ಹಸಿರು ನಗು ಚೆಲ್ಲುವ ವೃಕ್ಷಗಳ ಕಡಿಯದಿರಿ
ಹಸಿರೇ ಜೀವದುಸಿರು ಎಂಬುದ ಮರೆಯದಿರಿ.
-ಶಿವಮೂರ್ತಿ.ಹೆಚ್. ದಾವಣಗೆರೆ.
ಸೊಗಸಾದ ಕವನ.
ಬ್ಯೂಟಿಫುಲ್
ಸರಳ ಸುಂದರ ಕವನ…ಸಾರ್ ಚೆನ್ನಾಗಿದೆ…
ಚಿಕ್ಕದೊಂದು ಕವಿತೆಯಲ್ಲಿ ಪ್ರಕೃತಿ ಪ್ರೀತಿ, ಮನುಷ್ಯನ ದುರಾಸೆ ಹಾಗೂ ಪ್ರಕೃತಿಗೆ ಹಾನಿಯಾಗದಂತೆ ನಡೆದುಕೊಳ್ಳಬೇಕಾದ ಪರಿಯನ್ನೂ ವಿವರಿಸಿರುವುದು ಸೊಗಸಾಗಿ ಮೂಡಿ ಬಂದಿದೆ.
ಜೀವಜಲ ಮತ್ತು ಪ್ರಾಣವಾಯುವಿಗೆ ಆಗುತ್ತಿರುವ ಹಾನಿಯ ಜೊತೆಗೆ ಅವುಗಳ ಸಂರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳುವ ಸುಂದರ ಕವನ.
ಅರ್ಥಗರ್ಭಿತವಾದ ಸುಂದರವಾದ ಕವನ