5 ದಳಗಳು!
1
ಯುದ್ದವಿರಾಮದಲಿ ನೆನಪಾಗದ ಸೈನಿಕನಿಗೆ
ಸತ್ತಮೇಲೆ ಹುತಾತ್ಮಪಟ್ಟ
ಲಕ್ಷಾಂತರ ಜನರ ಅಶ್ರುತರ್ಪಣ!
2
ಬೇಸಿಗೆ ಹಣ್ಣಗಳ ಕಾಲ
ಜೊತೆಗವನ ಗೆಳೆಯ
ಕಾಲರಾ!
3
ಮುಗಿಯುತ್ತಿರುವ ಇವತ್ತಿಗೆ ನಿನ್ನೆಯ ನೆನಪಿದೆ
ನಾಳೆಯ ಕನಸಿದೆ
ವಿಷಾದದ ಜೊತೆ ಕುತೂಹಲವಿದೆ!
4
ಮುಚ್ಚಿದ ಮನೆಯ ತೆರೆದ ಕಿಟಕಿಯೊಳು
ಗಾಳಿಯ ಹುಯಿಲು
ಬೀದಿಯಲಿ ಕ್ರಕೇಟ್ ಆಡುವ ಅನಾಥ ಮಕ್ಕಳು!
5
ಮುಗಿದ ಮೇಲೆ ಮಾತು ವಿದಾಯದ ಸರದಿ
ಯಾರು ಮೊದಲೆಂಬ ಮಾತಿಗೆ
ಮತ್ತೆ ಮಾತು ವಿವಾದ!
-ಕು.ಸ.ಮಧುಸೂದನ್