‘ಚಿತ್ತಾರ’ e-ಪುಸ್ತಕ – ಜಯಶ್ರೀ ಬಿ.ಕದ್ರಿ
ಶ್ರೀಮತಿ ಜಯಶ್ರೀ ಬಿ, ಕದ್ರಿ ಅವರು ಇಂಗ್ಲಿಷ್ ನಲ್ಲಿ ಸ್ನಾತಕೊತ್ತರ ಪದವೀಧರೆಯಾಗಿದ್ದು, ಪ್ರಸ್ತುತ ಮೂಡಬಿದ್ರಿಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ವೈಚಾರಿಕ ಬರಹಗಳನ್ನು ಬರೆಯುವುದು ಇವರ ಹವ್ಯಾಸ. ಕರಾವಳಿಯ ಪ್ರಸಿದ್ಧ ದಿನಪತ್ರಿಕೆಯಾದ ‘ಉದಯವಾಣಿ’ಯಲ್ಲಿ ಇವರ ಹಲವಾರು ಬರಹಗಳು ಬೆಳಕು ಕಂಡಿವೆ.
ತನ್ನ ವೃತ್ತಿಜೀವನದ ಅವಿಭಾಜ್ಯ ಅಂಗವಾದ ಯುವ ಮನಸ್ಸುಗಳೊಡನೆ ಒಡನಾಟ ಮತ್ತು ಸಾಹಿತ್ಯದ ವಿವಿಧ ಮಜಲುಗಳ ಸಂಚಾರದಲ್ಲಿ ಲಭ್ಯವಾಗುವ ಅನುಭವ ಮತ್ತು ಅನುಭೂತಿಗಳನ್ನು ಹದವರಿತು ಬೆರೆಸಿ ಬರೆವ ಕಲೆ ಇವರಿಗೆ ಸಿದ್ದಿಸಿದೆ.
ನಮ್ಮ ಅಂತರ್ಜಾಲ ಪತ್ರಿಕೆ ‘ಸುರಹೊನ್ನೆ’ಯಲ್ಲಿ ಇವರ 20 ಕ್ಕೂ ಹೆಚ್ಚು ಲೇಖನಗಳು ಪ್ರಕಟವಾದ ಈ ಸಂದರ್ಭದಲ್ಲಿ, ಆ ಬರಹಗಳನ್ನು ಒಂದೇ ಸೂತ್ರದಲ್ಲಿ ಬಂಧಿಸುವ ಪ್ರಯತ್ನ ಇದು. ಹೀಗೆ ಮೂಡಿ ಬಂದಿದೆ ‘ಚಿತ್ತಾರ’ e-ಪುಸ್ತಕ.
ಇವರ ಲೇಖನಿಯಿಂದ ಇನ್ನಷ್ಟು ಬರಹಗಳು ಹರಿದು ಬರಲಿ ಎಂದು ಆಶಿಸುತ್ತೇವೆ.
.
– ಸಂಪಾದಕಿ
shubhashayagaLu
ಸುರಗಿ ಮತ್ತು ಬಿ. ಜಯಶ್ರೀ ಕದ್ರಿ ಯವರಿಗೆ ಅಭಿನಂದನೆಗಳು !
ಚಿತ್ತಾರ ನೋಡಿದೆ . ತುಂಬ ಖುಷಿ ಆಯ್ತು. ವಿರಾಮವಾಗಿ ಎಲ್ಲವನ್ನೂ ಓದುತ್ತೇನೆ . ಆಲ್ ದಿ ಬೆಸ್ಟ್ .
Congratulations. Mam…
Sangeeta raviraj