Monthly Archive: September 2017
ಇಂಜಿನಿಯರ್ ಎಂದರೆ ಹೇಗಿರಬೇಕು ಎಂಬ ಪ್ರಶ್ನೆಗೆ ‘ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ’ ನಂತಿರಬೇಕು ಎಂದು ಪ್ರಪಂಚವೇ ಕೊಂಡಾಡಿದ ಭಾರತದ ಅದ್ವಿತೀಯ ಮೇಧಾವಿ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು (ಸರ್. ಎಮ್. ವಿ) ಹುಟ್ಟಿದುದು 15 ಸೆಪ್ಟೆಂಬರ್ 1860 ರಂದು. ಅವರ ನೆನಪಿಗಾಗಿ 15 ಸೆಪ್ಟೆಂಬರ್ ಅನ್ನು ‘ಇಂಜಿನಿಯರ್ ಗಳ ದಿನ’...
ಬೆಂಗಳೂರಿನ ಮಲ್ಲೇಶ್ವರಂನ ತಿರುವುಗಳಲ್ಲಿ ನಡೆಯುತ್ತಾ ವಾಪಸು ಮೆಟ್ರೋ ನಿಲ್ದಾಣಕ್ಕೆ ಬಂದಾಗ ಯಾವತ್ತೂ ಸುಸ್ತೆನಿಸಿದ ನೆನಪಿಲ್ಲ. ಲೆಕ್ಕ ಹಾಕಿ ನೋಡಿದರೆ ಎನಿಲ್ಲವೆಂದರೂ ಒಟ್ಟು ಮೂರೂಮುಕ್ಕಾಲು ಕಿಲೋಮೀಟರ್ ಸುತ್ತು ಹೊಡೆದಿದ್ದರೂ ಸುಸ್ತೇ ಆಗಿಲ್ಲವಲ್ಲಾ ಎಂದು ಅಚ್ಚರಿಪಡುತ್ತೇನೆ. ಅಲ್ಲಿನ ಬೀದಿಗಳ ಗಮ್ಮತ್ತು ಸವಿಯುತ್ತಿದ್ದರೆ ಅದು ಆಯಾಸದ ನೆನಪು ಕೂಡಾ ಬರಗೊಡುವುದಿಲ್ಲ. ಹಳೆ...
ಕೈಗೆಟುಕುವ ದರದಲ್ಲಿ ವರ್ಷಪೂರ್ತಿ ಲಭ್ಯವಿರುವ, ಬಹಳ ಪೋಷಕಾಂಶಗಳನ್ನು ಹೊಂದಿರುವ ದ್ವಿದಳ ಧಾನ್ಯ ‘ಹುರುಳಿಕಾಳು’. ಮೂಲತ: ಜಾನುವಾರುಗಳಿಗೆ ಆಹಾರವಾಗಿ ಬಳಸಲಾಗುತ್ತಿದ್ದುದರಿಂದ ಈ ಧಾನ್ಯವು ತನ್ನ ಸಹವರ್ತಿಗಳಾದ ಉದ್ದು ಮತ್ತು ಹೆಸರುಕಾಳುಗಳಷ್ಟು ಆಹಾರ ವೈವಿಧ್ಯಗಳಲ್ಲಿ ಸ್ಥಾನ ಗಳಿಸಿಲ್ಲ. ಆದರೆ ಇತ್ತೀಚೆಗೆ, ಜನರಲ್ಲಿ ಹೆಚ್ಚುತ್ತಿರುವ ಅಧಿಕ ರಕ್ತದೊತ್ತಡ, ಕೊಲೆಸ್ಟೆರಾಲ್ ಹೆಚ್ಚಳ, ಕಿಡ್ನಿ...
ಬಾಗಿಲು ಕಿಟಕಿಗಳ ಕೊರೆದು ಬಂಡೆಗಳ ನಡುವೆಯೂ ಬೀದಿಯಾಗಿಸುವುದ ಕಂಡು ಬೆಚ್ಚಿ ಬಿದ್ದಿರಬಹುದು ಬದಿಗೆ ಸರಿದಿರಬಹುದು ಬಣ್ಣಬಣ್ಣದ ಬದುಕಿದು ಬಿಳಿಕರಿಯ ಗೋಡೆಯಡಿ ಬೆಡಗು ಬಿನ್ನಾಣಗಳೆಡೆ ಬೆರಗುಗೊಂಡು ಮತ್ತೆ ಬೇಸತ್ತು ಕೊರಗಿರಬಹುದು ಬರಸಿಡಿಲಿಗೆ ಅಂಜಿರಬಹುದು ಬೆದರಿ ಬೆವೆತಿರಬಹುದು ಭಯದಿ ನಡುಗಿರಬಹುದು ಬಿರುಗಾಳಿಗೆ ಭೀತವಾಗಿರಬಹುದು ಬಾಯಿಬರದದಕೆ ಹೇಳಲು ಬಾಗಲಾಗದು ಹೋಗಲಾಗದು ಬೇಸರ...
ಕಿರಿದರಲ್ಲಿ ಹಿರಿದಾದ ಅರ್ಥ ಹೊಳೆಯುವ ಸಣ್ಣ ಕತೆಗಳಿಗೆ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಕಾದಂಬರಿಯ ಝಲಕು, ಕವಿತೆಯ ಲಾಸ್ಯ, ಲಯ ಎರಡನ್ನೂ ಏಕಕಾಲದಲ್ಲಿ ಒಳಗೊಳ್ಳಬಹುದಾದ ಅನಂತ ಸಾಧ್ಯತೆಗಳುಳ್ಳ ಕಲಾಪ್ರಕಾರವೇ ಸಣ್ಣಕತೆ. ಸಣ್ಣಕತೆಗಳನ್ನು ಓದಲು ಹೆಚ್ಚು ಸಮಯ ಬೇಡದಿರುವ ಕಾರಣ, ಅಂತೆಯೇ ಕವಿತೆಯಷ್ಟು ಅರ್ಥೈಸಿಕೊಳ್ಳಲು ಕ್ಲಿಷ್ಟತೆ ಇರದ ಕಾರಣ, ಅವುಗಳು...
ಕಣ್ಣು ತೆರೆಯಿತೊಂದು ಹಗಲು ಬಣ್ಣ ಬಳಿದ ಹೊನ್ನ ಮುಗಿಲು ರವಿಯು ಬರುವ ಹಾದಿಯಲ್ಲಿ ಇಬ್ಬನಿ ಮಿನುಗಿತು ಎಲೆಎಲೆಯಲ್ಲಿ ಇರುಳಿನೊಡೆಯ ಚಂದಿರಗೆ ವಿಶ್ರಾಂತಿ ನೀಡಲು ಬಂದ ಭಾಸ್ಕರ ಕವಿದ ಕತ್ತಲೆಗೆ ಮುಕ್ತಿ ಹಾಡಿ ಬೆಳಕಿನೊಸಗೆ ತಂದ ನೇಸರ ಮುದುಡಿದ ತಾವರೆಯು ನಕ್ಕಿತು ಅಲೆಗಳಿಗೆ ಹೊಂಬಣ್ಣ ಬಳಿಯಿತು ಮರಗಿಡಗಳ...
ಪ್ರತಿವರ್ಷದಂತೆ ಈ ಬಾರಿಯೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಗಣೇಶನ ಹಬ್ಬವನ್ನು ಎಲ್ಲೆಡೆ ವಿವಿಧ ರೀತಿಯಲ್ಲಿ ಆಚರಿಸಲಾಯಿತು. ದೇವಾಲಯಗಳಲ್ಲಿ ಹೋಮ ಹವನಗಳು, ಮನೆಗಳಲ್ಲಿ ಗಣಪತಿಯನ್ನು ಮೂರ್ತಿಯನ್ನು ಕೂರಿಸಿ, ಪೂಜಿಸಿ, ವಿವಿಧ ನೈವೇದ್ಯಗಳನ್ನು ಸಮರ್ಪಿಸಿ ಸಂಭ್ರಮಿಸಿದ್ದಾಯಿತು. ಸಾಮೂಹಿಕವಾಗಿ ಬಡಾವಣೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ ಈ ಹಬ್ಬವನ್ನು ಆಚರಿಸುವಾಗ ಗಣೇಶನ...
ಅಂಜಿಕೆಗಳಿರದೇ ಅತ್ತರೂ ಬಿಡದೇ ಅಮಿತೋತ್ಸಾಹದಿ ಅನುದಿನ ಖುಷಿಯಲಿ ಕಲಿಸುವ ಗುರುವಿಗೆ ನಮನ ಅರಿವೆ ಇಲ್ಲದಾಗ ಅಕ್ಷರರಥವೇರಿಸಿ ಅರಿವು ಮೂಡಿಸಿ ಅನ್ನದ ಹಾದಿಯನು ತೋರಿದ ಗುರುವೇ ನಮನ ಆರಕ್ಕೇರಿಸುತಲೇ ಅಲ್ಲಿಂದಿಳಿಯದಿರು ಅರಮನೆ ಕನಸಿನಲಿ ಅಲುಗಾಡದೆ ನಡೆದು ಗೆಲ್ಲೆಂದ ಗುರುವಿಗೆ ನಮನ ಅಂಗಳದಲ್ಲೋಡಿಸಿ ಅಂಕಣಗಳನ್ನಡಿಸಿ ಅದೆಷ್ಟೆಷ್ಟೋ ಆಡಿಸಿ ಅಂತಿಮ ಮೆಟ್ಟಲೇರಿಸಿ...
ಅಕ್ಷರ ಕಲಿಸಿ ಅರಿವನು ಮೂಡಿಸಿ ಅಂಜಿಕೆ ತೊಡೆದ ಓ ಗುರುವೇ ನಿನಗಿದೋ ಎನ್ನಯ ವಂದನೆಯು ಅಕ್ಷರ ಪಥದಲಿ ಮುನ್ನಡೆಸಿ ಅರಿಯದೆ ಮಾಡಿದ ತಪ್ಪನು ಮನ್ನಿಸಿ ಅರಿವಿನ ದೀಪವ ಬೆಳಗುತಲಿ ಅರಳಿಸಿದೇ ನೀ ಜೀವನ ಜ್ಯೋತಿ. ಅಕ್ಕರೆಯಿಂದಲೆ ಅಹಮನು ಕಿತ್ತು ಅಜ್ಞಾನದ ಕೊಡಕೆ ಜ್ಞಾನ್ನವನೀಯಲು ಅಷ್ಟಿಷ್ಟಲ್ಲ ನೀ ಬಂದ...
ಭಾನುವಾರ (03/09/2017) ಸಂಜೆ, ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಕುಮಾರಿ ಅಪೂರ್ವ ಅವರ ಭರತನಾಟ್ಯ ರಂಗಪ್ರವೇಶವು ಬಹಳ ಸೊಗಸಾಗಿ ನೆರವೇರಿತು. ಈಕೆ ಮೈಸೂರಿನ ನೃತ್ಯಗಿರಿ ಸಂಸ್ಥೆಯ ಖ್ಯಾತ ವಿದುಷಿ ಕೃಪಾ ಫಡ್ಕೆ ಅವರ ಶಿಷ್ಯೆ. ನಮ್ಮ ಸ್ನೇಹಿತರಾದ ಪೂರ್ಣಿಮಾ ಮತ್ತು ಸುರೇಶ್ ಅವರ ಪುತ್ರಿ. ಚಂದನ ವಾಹಿನಿಯ...
ನಿಮ್ಮ ಅನಿಸಿಕೆಗಳು…