ಗುರುವೇ ನಿನಗಿದೋ ಪ್ರಣಾಮಗಳು..
ಅಕ್ಷರ ಕಲಿಸಿ
ಅರಿವನು ಮೂಡಿಸಿ
ಅಂಜಿಕೆ ತೊಡೆದ
ಓ ಗುರುವೇ
ನಿನಗಿದೋ ಎನ್ನಯ ವಂದನೆಯು
ಅಕ್ಷರ ಪಥದಲಿ ಮುನ್ನಡೆಸಿ
ಅರಿಯದೆ ಮಾಡಿದ ತಪ್ಪನು ಮನ್ನಿಸಿ
ಅರಿವಿನ ದೀಪವ ಬೆಳಗುತಲಿ
ಅರಳಿಸಿದೇ ನೀ ಜೀವನ ಜ್ಯೋತಿ.
ಅಕ್ಕರೆಯಿಂದಲೆ ಅಹಮನು ಕಿತ್ತು
ಅಜ್ಞಾನದ ಕೊಡಕೆ ಜ್ಞಾನ್ನವನೀಯಲು
ಅಷ್ಟಿಷ್ಟಲ್ಲ ನೀ ಬಂದ ಕಷ್ಟಗಳು
ಅದಕಲ್ಲವೇ ನೀ ಎಂದೂ ಸಹನಾಮೂರ್ತಿ.
ಅಂಜದೆ ಅಳುಕದೆ ಮುನ್ನಡೆಯೆಂದು
ಅರಿವಿನ ಪಥವನು ಕರುಣಿಸಿದೆಯಂದು
ಆಗಿದೆ ಅದುವೇ ಜೀವನಕಾಧಾರವು ಇಂದು
ಅರಿವೆಂದರೆ ನೀನೇ ಗುರುವೇ ನಿನಗಿದೋ
ಎನ್ನಯ ಕೋಟಿ ಪ್ರಣಾಮಗಳು..
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
-ಅನ್ನಪೂರ್ಣ,ಬೆಜಪ್ಪೆ.