Monthly Archive: March 2016
ಮಾರ್ಚ್ 12, 2016 ರಂದು ನಾಗರಹೊಳೆ ಅರಣ್ಯ ವಲಯದ ಸಮೀಪದ ‘ಶೆಟ್ಟಿಹಳ್ಳಿ’ಯಲ್ಲಿರುವ ಗಿರಿಜಿನ ಪುನರ್ವಸತಿ ಕೆಂದ್ರದ ಆಶ್ರಮ ಶಾಲೆಯಲ್ಲಿ ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು’ ಅಯೋಜಿಸಲಾಗಿತ್ತು. ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯ, ಗಂಗೋತ್ರಿ ಘಟಕ, ಮೈಸೂರು...
ಸ್ಪರ್ಶ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡವನು ತುಂಬಾ ವರ್ಷಗಳ ನಂತರ ತನ್ನ ಹುಟ್ಟೂರಿಗೆ ಬಂದಿದ್ದ. ಅಜ್ಜನ ಕಾಲದ ಹಳೆಯ ಮನೆಯನ್ನು ಕಣ್ತುಂಬಿಕೊಳ್ಳುತ್ತ ಹಜಾರದ ಕಂಬದ ಮೇಲೆ ಕೈಯಿಟ್ಟ. ಬಾಲ್ಯದ ನೆನಪುಗಳು ಅವನ ಕೈಗಳನ್ನ ಸ್ಪರ್ಶಿಸಿದವು. ಕರೆದದ್ದು ಅಮ್ಮನನ್ನು ಆಡುತ್ತಿದ್ದ ಮಗು ಕಲ್ಲಿಗೆ ಕಾಲೆಡವಿ ಬಿದ್ದು ನೋವಿನಿಂದ ಅಮ್ಮ ಎಂದು...
ಎಲ್ಲ ಅಮವಾಸ್ಯೆಗಳಲ್ಲಿ ‘ಪದ್ಯವೊಂದಿರಲಿ ಬೆಳಕಿಗೆ’ ಅಂತ ಹೇಳುತ್ತಾ ತನ್ನ ಎಲ್ಲ ನೋವಿನ, ಸಂಕಟ, ಬೇಗುದಿಯ ಗಳಿಗೆಗಳಲ್ಲಿ ಕವಿತೆಯನ್ನು ಉಸಿರಾಡಿಕೊಂಡು, ಕವಿತೆಯನ್ನು ಬಗಲಲ್ಲಿಟ್ಟುಕೊಂಡು ಬದುಕುತ್ತಿರುವ ಹಾಗೂ ಜೀವಪರ ಕಾಳಜಿಗೆ ಮಿಡಿಯುವ, ವ್ಯವಸ್ಥೆಯ ಬಗೆಗಿನ ಕೋಪಕ್ಕೆ ತಣ್ಣಗಿನ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಜೊತೆಗೆ ಕವಿತೆಯನ್ನು ದೀಪದಂತೆ ಕಾಯ್ದಿಟ್ಟುಕೊಂಡು ಆರ್ಧ್ರಭಾವವನ್ನು ಸೂಸುವಂತೆ ಏಕಕಾಲದಲ್ಲಿ...
ಮಹಿಳೆಯರ ಹಣೆಗೆ ಶೋಭೆ ಕೊಡುವ ಕುಂಕುಮವನ್ನು ಅರಸಿನ ಪುಡಿ ಮತ್ತು ಸುಣ್ಣವನ್ನು ಸೇರಿಸಿ ತಯಾರಿಸುತ್ತಿದ್ದ ಕಾಲವೊಂದಿತ್ತು. ಬೊಟ್ಟಿಡುವ ಮೊದಲು ಜೇನುಮೇಣವನ್ನು ಲೇಪಿಸಿ, ತೋರುಬೆರಳಿನಲ್ಲಿ ಕುಂಕುಮವನ್ನು ದುಂಡಾಕಾರದಲ್ಲಿ ತೆಗೆದುಕೊಂಡು ನಮ್ಮಜ್ಜಿ ಕುಂಕುಮವಿಡುತ್ತಿದ್ದರು. ಇದರ ಮುಂದುವರಿದ ಅವಿಷ್ಕಾರವಾಗಿ ದ್ರವರೂಪದ ‘ಲಾಲುಗಂಧ’ ಬಂತು. ಅಪರೂಪಕ್ಕೆ ಎಲ್ಲಾದರು ಸಂಪ್ರದಾಯಸ್ಥರ ಮನೆಗಳಲ್ಲಿ ‘ಲಾಲುಗಂಧ’ ಈಗಲೂ...
ಹೊಸ ಅಲೆಯ ಬರಹಗಾರ್ತಿಯರಲ್ಲಿ ಅನುಪಮಾ ಪ್ರಸಾದ್ ಇತ್ತೀಚೆಗೆ ಕೇಳಿ ಬರುತ್ತಿರುವ ಹೆಸರು. ಶಿರಸಿ ಮೂಲದವರಾಗಿರುವ ಇವರು ಪ್ರಸ್ತುತ ಕಾಸರಗೋಡು ಸಮೀಪದ ಪೆರ್ಣೆಯಲ್ಲಿ ವಾಸವಾಗಿದ್ದಾರೆ. ‘ಚೇತನಾ’, ‘ಕರವೀರದ ಗಿಡ’, ‘ದೂರ ತೀರ’, ‘ಜೋಗತಿ ಜೋಳಿಗೆ’ ಇವರ ಕಥಾ ಸಂಕಲನಗಳು. ‘ಮನಸು ಮಾಯೆಯ ಹಿಂದೆ’ , ‘ಕೆನ್ನೀರು’ ಎಂಬ ರೇಡಿಯೋ...
ಒಂದು ದಿನವೂ ಕತ್ತಿ ಹಿಡಿಯಲಿಲ್ಲ ಕವಚ ತೊಡಲಿಲ್ಲ ರಥವನೇರಲಿಲ್ಲ ಬಿಲ್ಲುಬಾಣಗಳನೆಸೆಯಲಿಲ್ಲ ಭರ್ಜಿಗಳ ಬೀಸಲಿಲ್ಲ ಯುದ್ದೋನ್ಮಾಧಿ ರಣಕೇಕೆ ಹಾಕಲಿಲ್ಲ! ಸುಮ್ಮನೇ! ಮುಗುಳ್ನಗುತ್ತ ಮಾತಾಡುತ್ತ ಕರುಣೆ ತುಂಬಿದ ಕಣ್ಣುಗಳಿಂದ ಶತ್ರುವ ನೋಡುತ್ತಲೇ ಗೆದ್ದುಬಿಟ್ಟೆ! ಹಾಗೆ ಗೆದ್ದದ್ದನ್ನು ಯಾವುದೇ ಆಸೆಯಿರದೆ ನಮ್ಮ ಕೈಗಿಟ್ಟು ನಡೆದುಬಿಟ್ಟೆ! ಮಾಡಿದರೆ ಯುದ್ದ ಮಾಡಬೇಕು ನಿನ್ನ...
ಸಂಗೀತ ,ಶಿಲ್ಪಕಲೆ ಹಾಗು ಸಾಮರಸ್ಯ ಭಾವನೆಗಳ ತವರೂರಾದ “ನನ್ನ ಕುಂದಗೋಳ “ಕುರಿತು ಬರೆಯಲು ಹೆಮ್ಮೆ ಅನ್ನಿಸುತ್ತದೆ . ಪೂರ್ವದಲ್ಲಿ ಜಮಖಂಡಿ ಸಂಸ್ಥಾನಕ್ಕೆ ಒಳಪಟ್ಟ ಕುಂದಗೋಳವು ಈ ಕೆಳಗಿನ ಸಂಗತಿಗಳಿಗೆ ಪ್ರಸಿದ್ಧವಾಗಿದೆ. ಸಂಗೀತ :– ಗಾನ ಗಂಧರ್ವ, ಸವಾಯಿ ಗಂಧರ್ವರು(ಮೂಲ ಹೆಸರು -ರಾಮಭಾವೂ ಕುಂದಗೋಳಕರ ) ಜನಿಸಿದ...
ಮೈಸೂರು ಕಡೆ ಜನರು ಹೇಳುವ ಮಾತಿನಂತೆ ” ಶಿವರಾತ್ರಿಗೆ ಚಳಿ ಶಿವ ಶಿವಾ ಅಂತ ಹೊರಟು ಹೋಗ್ತದೆೆ”. ಆದರೆ ಇನ್ನೂ ಫೆಬ್ರವರಿ ಕೊನೆಯ ವಾರದಲ್ಲಿಯೇ ಚಳಿ ಹೊರಟು ಹೋಗಿ, ಉರಿಬಿಸಿಲಿನ ಝಳ ಆರಂಭವಾಗಿದೆ ಎಂದು ಅನುಭವವೇದ್ಯವಾಯಿತು. ಸಾಮಾನ್ಯವಾಗಿ ಬೇಸಗೆಯಲ್ಲಿ, ಮನೆಯೊಳಗೆಯೇ ಇದ್ದು, ಲಭ್ಯವಿದ್ದಂತೆ ಫ್ಯಾನ್ ಅಥವಾ...
ಮನಸಲೆ ಮನಸಾಗುವೆ ನಾನು, ಹೇಳು ನೀ ಹೇಗಳಿಸುವೆ ನೀನು ? ಕನಸಲಿ ಕನಸ ಕದಿವೆನಿನ್ನು, ಕಾಣದೆ ಹೇಗಿರುವೆ ನೀನು ? ಹೃದಯದ ಬಡಿತಕು ತಪ್ಪಿಸುವೆ, ಲಯಬದ್ದ ನಿಯಮ ಕಾಡುವೆ ಪ್ರೀತಿಯ ಸೂರಗಲ, ಮೀರಿದರು ಸಂಯಮ || ಮನಸಲೆ || ತಪ್ಪೇನು ನನ್ನದೀ ಎದೆಯ, ಗಡಿಯಾರ ಸರಕು ಅಡವಿಟ್ಟು...
ಸ್ನಾನ ಮಾಡಿ ಬಂದ ಮಗರಾಯ ‘ ನನ್ನ ಸೋಪ್ ಮುಗಿದಿದೆ..ಇನ್ನೊಂದು ತನ್ನಿ’ ಎಂದ. ಸುಮ್ಮನೆ ನಮ್ಮ ಬಾತ್ ರೂಮ್ ನತ್ತ ಕಣ್ಣು ಹಾಯಿಸಿದೆ. ಮೂರು ಸಾಬೂನು ಪೆಟ್ಟಿಗೆಗಳಲ್ಲಿ ಈಗಾಗಲೇ ಬಳಸುತ್ತಿದ್ದ ಮೂರು ಸೋಪುಗಳು ಇದ್ದುವು. ಒಂದರಲ್ಲಿ ಪತಂಜಲಿ ಸಂಸ್ಥೆಯ ಉತ್ಪನ್ನ ‘ಹಳದಿ -ಚಂದನ’ ಸೋಪು, ಇನ್ನೊಂದರಲ್ಲಿ ನಾನು...
ನಿಮ್ಮ ಅನಿಸಿಕೆಗಳು…