ಉಚಿತ ವೈದ್ಯಕೀಯ ತಪಾಸಣಾ ಶಿಬಿರ – ನಾಗರಹೊಳೆ ಅರಣ್ಯ ವಲಯ
ಮಾರ್ಚ್ 12, 2016 ರಂದು ನಾಗರಹೊಳೆ ಅರಣ್ಯ ವಲಯದ ಸಮೀಪದ ‘ಶೆಟ್ಟಿಹಳ್ಳಿ’ಯಲ್ಲಿರುವ ಗಿರಿಜಿನ ಪುನರ್ವಸತಿ ಕೆಂದ್ರದ ಆಶ್ರಮ ಶಾಲೆಯಲ್ಲಿ ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು’ ಅಯೋಜಿಸಲಾಗಿತ್ತು.
ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯ, ಗಂಗೋತ್ರಿ ಘಟಕ, ಮೈಸೂರು ಮತ್ತು ಕರ್ನಾಟಕ ಅರಣ್ಯ ಇಲಾಖೆ ಇವರ ಸಹಯೋಗದೊಂದಿಗೆ ಮೈಸೂರು ಜಿಲ್ಲಾ ಕುಟುಂಬ ವೈದ್ಯರ ಸಂಘ (ನೋಂ) ಮೈಸೂರು ಇವರು ತಮ್ಮ ತಂಡದೊಂದಿಗೆ, ನಾಗರಹೊಳೆ ಅರಣ್ಯ ವಲಯದ ಸಿಬ್ಬಂದಿ ವರ್ಗ ಮತ್ತು ಸುತ್ತುಮುಮುತ್ತಲಿನಗ್ರಾಮಸ್ಥರ ಅನುಕೂಲಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುನ್ನೂರಕ್ಕೂ ಮಿಕ್ಕಿ ಗ್ರಾಮೀಣ ಜನರು ಶಿಬಿರಕ್ಕೆ ಆಗಮಿಸಿ, ಉಚಿತ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಕಾರ್ಯಕ್ರಮವನ್ನು ಸಾರ್ಥಕಗೊಳಿಸಿದರು.
ಇದೇ ತಂಡವು, ಮಾರ್ಚ್ 13, 2016 ರಂದು ನಾಗರಹೊಳೆ ಅರಣ್ಯ ವಲಯದ ನಾಗಪುರದಲ್ಲಿರುವ ಗಿರಿಜನ ಅಶ್ರಮ ಶಾಲೆಯಲ್ಲಿಯೂ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಿತ್ತು. ಇಲ್ಲಿಯೂ ಕಾರ್ಯಕ್ರಮವು ಯಶಸ್ವಿಯಾಗಿ ಪೂರ್ಣಗೊಂಡು ಬಹಳಷ್ಟು ಮಂದಿ ಶಿಬಿರದ ಸದುಪಯೋಗ ಪಡೆದರು. ಶಿಬಿರದಲ್ಲಿ ಕುಟುಂಬ ವೈದ್ಯರು, ನೇತ್ರ ತಜ್ಞರು, ಸ್ತ್ರೀ ತಜ್ಞರು ಹಾಗೂ ಮೂಳೆ ತಜ್ಞರು ಸೇವೆ ಸಲ್ಲಿಸಿದ್ದರು. ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಇ.ಸಿ.ಜಿ. ಪರೀಕ್ಷೆಗಳ ಸೌಲಭ್ಯಗಳನ್ನೂ ಕಲ್ಪಿಸಲಾಗಿತ್ತು.
ಸದುದ್ದೇಶವೊಂದಕ್ಕೆ, ಸಂಸ್ಥೆಯಿಂದ ಸಹಕಾರ ಮತ್ತು ಸಮಾನ ಮನಸ್ಕರ ಪ್ರೋತ್ಸಾಹ ದೊರೆತು, ಸಂಬಂಧಿಸಿದ ಎಲ್ಲರೂ ಶ್ರದ್ಧೆ ಮತ್ತು ತಂಡಸ್ಫೂರ್ತಿಯಿಂದ ದುಡಿದಾಗ ಒಂದು ಉತ್ತಮವಾದ ಸಮಾಜಮುಖಿ ಕೆಲಸ ನಡೆಯಬಲ್ಲುದು ಎಂಬುದಕ್ಕೆ ಈ ಶಿಬಿರ ಸಾಕ್ಷಿಯಾಯಿತು.
ಸಂಸ್ಥೆಯ ಪ್ರತಿನಿಧಿಯಾಗಿ ಮತ್ತು ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯ, ಗಂಗೋತ್ರಿ ಘಟಕದ ಸದಸ್ಯೆಯಾಗಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ‘ಅಳಿಲುಸೇವೆ’ ಮಾಡಿದ ಸಡಗರ ನನಗಾಯಿತು. ಶಿಬಿರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅನಂತ ನಮನಗಳು.
– ಹೇಮಮಾಲಾ.ಬಿ
Great job
Great gud job
ಇ೦ತಹ ಹತ್ತು ಹಲವು ಸಾಮಾಜಿಕ ಕೆಲಸಗಳು ನಿಮ್ಮಿಂದ ಯಶಸ್ವಿಯಾಗಿ ನಡೆಯಲಿ ಎ೦ದು ನಮ್ಮ ಹಾರೈಕೆ