Daily Archive: July 8, 2014
ಎಳೆಕಿರಣಗಳ ಎಡತಾಕಿಸಿಕೊಂಡ ತೆಂಗಿನ ಗರಿಗಳಿಗೆ ಎಲ್ಲಿಲ್ಲದ ಉತ್ಸಾಹ. ಬೆಳಗಾಯಿತೆಂದರೆ ನಾನಾ ಹಕ್ಕಿಗಳು, ತರೇವಾರಿ ಕೂಗಿನೊಂದಿಗೆ ತನ್ನ ಗರಿಗಳ ಮೇಲೆ ಕುಳಿತು ಬೆಳಗನ್ನು ಆಸ್ವಾದಿಸುವ ಸಮಯಕ್ಕೆ ಕಾಯುತ್ತಿರುತ್ತದೆ ಈ ತೆಂಗಿನ ಮರ. ಹಳ್ಳಿ ಗುಡಿಸಲುಗಳಲ್ಲಿ ಏನಿಲ್ಲವೆಂದರು ಅಂಗಳದಂಚಿಗೆ ಒಂದೆರಡು ತೆಂಗಿನಮರಗಳು ಸಾಮಾನ್ಯ. ಗೂನಡ್ಕದಲ್ಲಿರುವ ಸುಬ್ಬಪ್ಪಜ್ಜನ ಗುಡಿಸಲು ಇದಕ್ಕೆ ಹೊರತಾಗಿಲ್ಲ....
ಮಡಿಕೇರಿಯಿಂದ ಸು ಮಾರು 40 ಕಿ.ಮೀ ದೂರದ ನಾಪೋಕ್ಲು ಎಂಬಲ್ಲಿ, ತಡಿಯಾಂಡ್ ಮೋಳ್ ಬೆಟ್ಟದ ತಪ್ಪಲಲ್ಲಿ ಇರುವ ಈ ‘ನಾಲ್ಕುನಾಡು ಅರಮನೆ’ ಎರಡು ಶತಮಾನಗಳಷ್ಟು ಹಳೆಯದು. ದೊಡ್ಡವೀರರಾಜನ ಕಾಲದಲ್ಲಿ ಕಟ್ಟಲಾಯಿತು ಎಂದು ಇತಿಹಾಸ ಹೇಳುತ್ತದೆ. ಈ ಅರಮನೆಯಲ್ಲಿ ಒಂದು ವಿಶಿಷ್ಟವಾದ ‘ಕಿಂಡಿ’ ಇದೆ. ಈ ಕಿಟಿಕಿಯ ಮೂಲಕ...
ರೈತ ಹೊಲಕ್ಕೆ ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲ. ಬೆಳೆದ ಬೆಲೆಗೆ ನ್ಯಾಯವಾದ ದರ ಸಿಗುವುದಿಲ್ಲ. ಅಂತರ್ಜಲವಿಲ್ಲ, ನೆಲ ವಿಷವಾಗುತ್ತಿದೆ..ತರಕಾರಿ ದರ ಏರುತ್ತಿವೆ. ಆದರೆ ಬೆಳೆದವನಿಗೆ ಕಿಮ್ಮತ್ತಿಲ್ಲ.ಮಾರುಕಟ್ಟೆಗೆ ಹೋದರೆ ಮಧ್ಯವರ್ತಿಗಳು ಸುಲೀತಾರೆ.ಅಧಿಕಾರಿಗಳಿಗೆ ರಾಜಕೀಯ ನಾಯಕರ ಓಲೈಕೆ ಸಾಕು.ನಿಂತ ಬೆಳೆ ಕೊಯ್ಯಲು ಕಾರ್ಮಿಕರು ಸಿಗುವುದಿಲ್ಲ. ಸಾವಯವ ಗೊತ್ತಿಲ್ಲ. ಕೈಯಲ್ಲಿ ಕಾಸಿಲ್ಲ. ಕೂಲಿ ಕೊಡಲಾಗುವುದಿಲ್ಲ,...
ನಿಮ್ಮ ಅನಿಸಿಕೆಗಳು…