ನಾಲ್ಕುನಾಡು ಅರಮನೆ..ಕಿಂಡಿ
ಮಡಿಕೇರಿಯಿಂದ ಸು ಮಾರು 40 ಕಿ.ಮೀ ದೂರದ ನಾಪೋಕ್ಲು ಎಂಬಲ್ಲಿ, ತಡಿಯಾಂಡ್ ಮೋಳ್ ಬೆಟ್ಟದ ತಪ್ಪಲಲ್ಲಿ ಇರುವ ಈ ‘ನಾಲ್ಕುನಾಡು ಅರಮನೆ’ ಎರಡು ಶತಮಾನಗಳಷ್ಟು ಹಳೆಯದು. ದೊಡ್ಡವೀರರಾಜನ ಕಾಲದಲ್ಲಿ ಕಟ್ಟಲಾಯಿತು ಎಂದು ಇತಿಹಾಸ ಹೇಳುತ್ತದೆ.
ಈ ಅರಮನೆಯಲ್ಲಿ ಒಂದು ವಿಶಿಷ್ಟವಾದ ‘ಕಿಂಡಿ’ ಇದೆ. ಈ ಕಿಟಿಕಿಯ ಮೂಲಕ ಕೋವಿಯಿಟ್ಟರೆ ಅರಮನೆಯ ಅಂಗಳದಲ್ಲಿ ನಿಂತವರಿಗೆ ನೇರ ಗುರಿಯಿಡಬಹುದು. ಹೊರಗೆ ನಿಂತವರಿಗೆ ಈ ಕಿಟಿಕಿಯ ಸುಳಿವು ಸಿಗುವುದಿಲ್ಲ. ಸೂಪರ್ ಸ್ವರಕ್ಷಣೋಪಾಯ!
ಯಾವಾಗಲೂ ವಿಷೇಷವಾದ ಮಾಹಿತಿಯನ್ನು ಹಾಕುತ್ತಿರುತ್ತೀರಾ ಮೇಡಂ! ಚೆನ್ನಾಗಿದೆ.. !!