Category: ಲಹರಿ

6

ಸಾವೆಂಬ ಸೂತಕ

Share Button

ಎಲ್ಲ ದಾರ್ಶನಿಕರೂ ರಹಸ್ಯದರ್ಶಿಗಳೂ ಅನುಭಾವಿಗಳೂ ಪುನರ್ಜನ್ಮವನ್ನು ಕುರಿತು ಸಕಾರಾತ್ಮಕವಾಗಿದ್ದಾರೆ. ಏಕೆಂದರೆ ಅವರಿಗದು ಅನುಭವವೇದ್ಯ. ಪುನರ್ಜನ್ಮವೆಂದರೆ ನಾವು ಮನುಷ್ಯರಾಗಿಯೋ ಪಶುಪಕ್ಷಿಗಳಾಗಿಯೋ ಮತ್ತೆ ಜನಿಸುತ್ತೇವೆಂದಲ್ಲ! ಇದಕಾವ ಸಾಕ್ಷಿ, ಪುರಾವೆಗಳೂ ಇಲ್ಲ!! ನಿನ್ನೆ ನಾನು ಜೀವಿಸಿದ್ದೆ. ಹಾಗಾಗಿ ಇಂದು ಎಂಬುದು ನನಗೆ ಪುನರ್ಜನ್ಮ ಅಷ್ಟೇ. ನಾಳೆ ಎಂಬುದು ನನ್ನ ಪಾಲಿಗೆ ಸಿಕ್ಕರೆ...

5

ಒಂದು ಓದಿನ ಖುಷಿಗೆ 

Share Button

ಓದು ಒಂದು ಅದ್ಭುತ ಭಾವ. ಅಕ್ಷರಗಳ ಜೊತೆ ಮನಸ್ಸಿನ ಸಂಗತಿ ಅರಿವಿನಾಳದಲ್ಲಿ ಕುಳಿತು ಮಾತನಾಡುವ ಸಹಜತೆ. ಒಂದು ಓದಿನ ಧನ್ಯತೆ ಸಿಗುವುದು ವಿಷಯದ ಅಂತರ್ಗತ ನಿಲುವುಗಳಲ್ಲಿ. ಓದಿನ ಸಾಲಿನ ಪೂರ್ಣತೆ ಇರುವುದು ವಿಷಯ ನಿರೂಪಣೆ ಮತ್ತು ಪ್ರಭುದ್ಧತೆಯ ಅಂತಃಕರಣದಲ್ಲಿ. ವಿಚಾರ ವಿಮರ್ಶೆಯ ಜೊತೆಗೆ ವಿನೀತ ಭಾವವನ್ನು ಇಟ್ಟುಕೊಳ್ಳುವುದು...

4

ಬರಿ ನಿಮಿತ್ತವೋ ನೀನು

Share Button

ನನ್ನದಿದು ನಾ ಬರೆದೆ ಎನುವ ಅಮಲೇರಿದರೆಪಾತಾಳದೊಳು ಬಿದ್ದೆ ನೀ ಮೇರುವಿನಿಂದನಿನದಲ್ಲ ಪದಪುಂಜ ಯಾರದೋ ಕರುಣೆ ಅದುಬರಿ ನಿಮಿತ್ತವೋ ನೀನು – ಮುದ್ದುರಾಮ ಕವಿ ಕೆ ಸಿ ಶಿವಪ್ಪನವರು ಈ ನಾಲ್ಕು ಸಾಲುಗಳಲ್ಲಿ ಬರೆಹಗಾರರ ಅಹಮಿಗೆ ಕನ್ನಡಿ ಹಿಡಿದಿದ್ದಾರೆ. ಬರೆಯುವವರಿಗೆ ಅದೇನೋ ಗರ್ವ. ಇದು ನಾನು ಬರೆದದ್ದು, ನನ್ನದು...

9

ಅಧಿಕ ವರ್ಷ- ಒಂದು ಪಕ್ಷಿನೋಟ

Share Button

‘ಕೆಲವಂ ಬಲ್ಲವರಿಂದ ಕಲ್ತು’ ಅನ್ನುವ ಮಾತಿನಂತೆ ಕೆಲವೊಂದು ವಿಷಯಗಳನ್ನು ನಾವು ಕೇಳಿ ತಿಳಿದಿರುತ್ತೇವೆ. ಇನ್ನು ಕೆಲವನ್ನು ಓದಿ ತಿಳಿದಿರುತ್ತೇವೆ. ನಮ್ಮ ಮನಸ್ಸಿಗೆ ಸರಿ ಅನ್ನಿಸಿದ ವಿಷಯದ ಬಗ್ಗೆ/ಸಂಶಯವಿಲ್ಲದ ವಿಷಯಗಳ ಜಾಸ್ತಿ ಕೆದಕಲು ಹೋಗುವುದಿಲ್ಲ, ಜಾಸ್ತಿ ಯೋಚನೆಯೂ ಮಾಡುವುದಿಲ್ಲ. ಆದರೆ ಸಂಶಯವಿರುವ ವಿಷಯಗಳಾದರೆ ಆ ವಿಷಯದ ಬಗ್ಗೆ ಇನ್ನೂ...

6

ಎಲ್ಲಿಗೆ ಈ ಪಯಣ..

Share Button

ಅಜ್ಜೀ ಅಜ್ಜೀ ಎಲ್ಲಿಗೆ ಹೋಗ್ತಾ ಇದ್ದೀಯಾ?ಬೆಳಗಾಗೆದ್ದು ನಾನು ಎಲ್ಲಿಗೆ ಹೋಗ್ತೀನಿ ಹೇಳು, ಯೋಗ ಕ್ಲಾಸಿಗೆ ಅಲ್ವೇನೋ ಪುಟ್ಟಾ, ನೀನೂ ಬರ‍್ತೀಯಾ? ಬರ‍್ತೀನಿ ಅಜ್ಜಿ, ಹೇಗೂ, ಇವತ್ತು ಗಣಪತಿ ಮೆರವಣಿಗೆ ಅಂತ ಶಾಲೆಗೆ ರಜಾ ಕೊಟ್ಟಿದ್ದಾರೆ. ನನಗೊಂದು ಯೋಗ ಮ್ಯಾಟ್ ಕೊಡ್ತೀಯಾ?ಆಯ್ತು ಪುಟ್ಟಾ, ಬಾ ಯೋಗಕೇಂದ್ರಕ್ಕೆ ಹೋಗೋಣ.ಅಜ್ಜೀ, ನಿಮ್ಮ...

9

ದೂರುವ ಮುನ್ನ ದಾಟಿದರೆ ಚೆನ್ನ!

Share Button

ಜೀವನವು ಹೇಗೆ ಯಾವುದೇ ವ್ಯಾಖ್ಯಾನಕ್ಕೆ ನಿಲುಕುವುದಿಲ್ಲವೋ ಹಾಗೆಯೇ ಜೀವನದಲ್ಲಿ ಬಂದು ಹೋಗುವ ಸ್ನೇಹ, ಪ್ರೀತಿ, ಬಾಂಧವ್ಯ ಮೊದಲಾದ ಮನುಷ್ಯ ಸಂಬಂಧಗಳು. ಇದು ಹೀಗೆಯೇ, ಇದು ಇಂಥದೇ ಎಂದು ಹೇಳಿ ಗೆರೆ ಕೊರೆದ ತಕ್ಷಣ ಅದನ್ನು ಮೀರಿ ಬೆಳೆಯುವ ಲಕ್ಷಣ ಇಂಥವುಗಳದು. ಪೂರ್ವಗ್ರಹಿಕೆ ಮತ್ತು ತಪ್ಪುಗ್ರಹಿಕೆಗಳಿಲ್ಲದೇ ಜೀವಿಸುವುದೇ ಬಹು...

9

ಒಂದು ಹಗ್ಗಕ್ಕೆ ಎರಡು ಲಾರಿ !

Share Button

ವಿನಾಕಾರಣ ನಾವು ಆಸ್ಪತ್ರೆಗಾಗಲೀ, ಸ್ಮಶಾನಕ್ಕಾಗಲೀ ಹೋಗಲಾರೆವು. ಏನಾದರೊಂದು ಹಿನ್ನೆಲೆ ಮತ್ತು ಕಾರಣಗಳಿಲ್ಲದೇ ಸುಖಾ ಸುಮ್ಮನೆ ಒಂದು ರೌಂಡು ಆಸ್ಪತ್ರೆಗೆ ಹೋಗಿ ಅಡ್ಡಾಡಿ ಬರೋಣ ಎಂದು ಹೋದವರಿಲ್ಲ. ತೀರಾ ಅಪರೂಪ. ಇನ್ನು ಸ್ಮಶಾನಕ್ಕೆ ವಾಯುವಿಹಾರಾರ್ಥ ಹೋಗಿ ಬಂದವರನ್ನು ಕೇಳಿಯೇ ಇಲ್ಲ! ಅಂದರೆ ಬದುಕಿನ ನಶ್ವರತೆ ಮತ್ತು ನೋವುಗಳನ್ನು ನಾವಾಗಿಯೇ...

5

ದುಃಖೋಪನಿಷತ್ತು !

Share Button

ದುಃಖ ಯಾರಿಗಿಲ್ಲ? ಯಾರಿಗೆ ಗೊತ್ತಿಲ್ಲ? ಸುಖದ ಮಹತ್ವ ಗೊತ್ತಾಗುವುದೇ ದುಃಖದಲ್ಲಿ! ನಾನಾ ಕಾರಣಗಳಿಂದ ದುಃಖಿಗಳಾದವರೇ ಲೋಕದಲ್ಲಿ ಹೆಚ್ಚು. ಕೆಲವೊಮ್ಮೆ ವಿನಾ ಕಾರಣ! ಇದೇ ನನ್ನ ಸಬ್ಜೆಕ್ಟು. ‘ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎಂದಿದ್ದಾರೆ ಅಲ್ಲಮಪ್ರಭು. ಹಾಗೆಯೇ ‘ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ಸಿದ್ಧತೆ ನೋಡಾ’ ಎಂದೂ ಬದಲಿಸಿಕೊಳ್ಳಬಹುದು!...

6

90ರ ಸಂಭ್ರಮದಲ್ಲಿ ಮೈಸೂರು ಆಕಾಶವಾಣಿ

Share Button

“ಬಹುಜನ ಹಿತಾಯ… ಬಹುಜನ ಸುಖಾಯ…” ಎಂಬ ದಿವ್ಯ ವಾಕ್ಯವನ್ನಿಟ್ಟುಕೊಂಡು ಬಹಳಷ್ಟು ವರ್ಷಗಳಿಂದ ಮೈಸೂರು ಆಕಾಶವಾಣಿಯು ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮಗಳ ಮಹಾಪೂರವೇ ಕೇಳುಗರಿಗೆ ತಲುಪುತ್ತಿದೆ. ಆದರೆ ಈಗ ವಿಭಿನ್ನ ರೀತಿಯ ಕಾರ್ಯಕ್ರಮದ ಸುಗ್ಗಿ ಮೈಸೂರು ಆಕಾಶವಾಣಿಯಲ್ಲಿ ಶುರುವಾಗಿದೆ. ಇದು ಮೈಸೂರು ಆಕಾಶವಾಣಿ...

6

ಸೈಕಲ್ ಪ್ರಪಂಚ

Share Button

ಸೈಕಲ್ ಅನಾದಿ ಕಾಲದಿಂದಲು ಇರುವ ಒಂದು ಸಾಧನ. ಇದು ಬಡವರ ಬಂಧು, ಮಧ್ಯಮ ವರ್ಗದವರಿಗೆ ಸಾರಿಗೆ ಮಾಧ್ಯಮ ಹಾಗೂ ಶ್ರೀಮಂತರಿಗೆ ಹವ್ಯಾಸ. ಸೈಕಲ್‌ನ್ನು ಯಾಕೆ ಮತ್ತೆ ವಿಶ್ವದಾದ್ಯಂತ ಪುನಃ ಕೋಟಿಗಟ್ಟಲೆ ಜನ ಉಪಯೋಗಿಸಲು ಪ್ರಾರಂಭಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ, ಇದು ಪರಿಸರ ಸ್ನೇಹಿ, ಸರ್ವರಿಗೂ ಸಿಲುಕುವ ಅಂಥಹ...

Follow

Get every new post on this blog delivered to your Inbox.

Join other followers: