Category: ಚಾರ್ ಧಾಮ್ ಯಾತ್ರಾ 2016
ಗಂಗೋತ್ರಿಯೆಡೆಗೆ ಪಯಣ ಬೆಳಗ್ಗೆ (೧೫-೯-೨೦೧೬) ೫.೩೦ಕ್ಕೆ ಎದ್ದು, ತಯಾರಾಗಿ ೬.೩೦ಕ್ಕೆ ಕೌಸಲ್ಯಳಿಗೆ ವಿದಾಯ ಹೇಳಿ ಬಾರ್ಕೋಟ್ ಬಿಟ್ಟೆವು. . ಕೌಸಲ್ಯಳ ಕಣ್ಣು ನಮ್ಮ ಹಿಂದೆಯೇ ಸುತ್ತುತ್ತಿತ್ತು. ಅಡುಗೆಮನೆಯಲ್ಲಿ ಅಡುಗೆಮಾಡುವಾಗ ಯಾವ ಪಾತ್ರೆ ಉಪಯೋಗಿಸಿದ್ದೇವೆ, ಏನು ಮಾಡುತ್ತಿದ್ದೇವೆ ಎಂದು ಹದ್ದಿನ ಕಣ್ಣಿಂದ ನೋಡುತ್ತಿದ್ದರು. ನಾವು ಮಾಡಿದ ಅಡುಗೆಯಲ್ಲಿ ಪಾಲು...
ಜಾನಕಿಛಟ್ಟಿ ಬೆಳಗ್ಗೆ ( 14.09.16) 4.15 ಕ್ಕೆ ಎದ್ದು ತಯಾರಾದೆವು. 5.15 ಕ್ಕೆ ವಸತಿಗೃಹದ ಲೆಕ್ಕ ಚುಕ್ತಾಮಾಡಿ ಬಸ್ ಹತ್ತಿದೆವು. ಬಹುಶಃ ಎರಡು ಸಾವಿರ ರೂ. ಆದದ್ದೆಂದು ಕಾಣುತ್ತದೆ. ಜಾನಕಿಛಟ್ಟಿಗೆ ಹೋಗುವ ದಾರಿಯಲ್ಲಿ ನಸುಕಿನಲ್ಲೇ ಕುದುರೆಗಳು ಸಾಗುವುದು ಕಂಡಿತು. ಯಮುನೋತ್ರಿಗೆ ಭಕ್ತಾದಿಗಳನ್ನು ಕರೆದೊಯ್ಯಲು ಎಷ್ಟು ದೂರದಿಂದ ಪ್ರತಿದಿನ...
ಲಕ್ಷ್ಮಣ ಝೂಲಾ, ರಾಮಝೂಲಾ ಮಳೆಅಂಗಿ ಹಾಕಿಕೊಳ್ಳುತ್ತ ಮಳೆಯಲ್ಲೆ ನಡೆದೆವು. ಲಕ್ಷ್ಮಣಝೂಲಾ ಸೇತುವೆಯಲ್ಲಿ ದಾಟಿ ಮುಂದೆ ಹೋದೆವು. ಗೀತಭವನದಲ್ಲಿ ಕಾಲಾಕಂಬಳಿವಾಲಾ ಮಂದಿರ ನೋಡಿದೆವು. ಕಾಲಾಕಂಬಳಿವಾಲಾ ಅವರು ಕಪ್ಪುಕಂಬಳಿಯನ್ನು ದಾನ ಮಾಡುತ್ತಿದ್ದರಂತೆ. ಲಕ್ಷ್ಮೀನಾರಾಯಣ ದೇವಾಲಯವಿದೆ ಅಲ್ಲಿ. ಮುಂದೆ ರಾಮಝೂಲಾ ಸೇತುವೆ ದಾಟಿ ಮುಂದೆ ಸಾಗಿದಾಗ ಧಾರಾಕಾರ ಮಳೆ. ಸುಮಾರು ಎರಡುಕಿಮೀ....
ಲಾಖ್ ಮಂಡಲ್ ಎಂದು ಕರೆಯಲ್ಪಡುವ ದೇವಸ್ಥಾನಗಳ ಸಮುಚ್ಛಯವು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿದೆ. ಡೆಹ್ರಾಡೂನ್ ನಿಂದ ಮುಸ್ಸೋರಿ ಮಾರ್ಗವಾಗಿ ಯಮುನೋತ್ರಿಗೆ ಹೋಗುವಾಗ ಸುಮಾರು 35 ಕಿ.ಮಿ ದೂರದಲ್ಲಿ ಲಾಖ್ ಮಂಡಲ್ ಹಳ್ಳಿ ಸಿಗುತ್ತದೆ. ಈ ಹಳ್ಳಿಯ ದಾರಿಯುದ್ದಕ್ಕೂ ಯಮುನಾ ನದಿ ಹರಿಯುತ್ತಿರುತ್ತದೆ. ಹಿಮಾಲಯದ ಮಡಿಲಿನಲ್ಲಿರುವ ಅಪ್ಪಟ ಹಳ್ಳಿ...
ಹರಿದ್ವಾರದ ರಾಮಭವನ ರೈಲಿಳಿದು ಲಗೇಜು ಹೊತ್ತು ಅನತಿ ದೂರದಲ್ಲೇ ಇದ್ದ ರಾಮಭವನ ವಸತಿಗೃಹಕ್ಕೆ ಬಂದೆವು. ನಾವು ಸವಿತ, ನಾನು, ಹೇಮಮಾಲಾ ಮೂರು ಮಂದಿ ಒಂದು ಕೋಣೆಯಲ್ಲಿ. ಮೂರು ಮಂಚಗಳಿತ್ತು. ಎರಡು ದಿನದಿಂದ ಸ್ನಾನವಿಲ್ಲದೆ ಮೈ ತುರಿಕೆ . ತಣ್ಣೀರು ಸ್ನಾನವಾಗಿ ಮಲಗಿದಾಗ 12.45. ರಾಮಭವನದ ಹಿನ್ನೆಲೆ: ಪಂಡಿತ್...
ಕೈಬೀಸಿ ಕರೆಯುವ ಹಿಮಾಲಯ ಅಗಾಧವಾದ ಹಿಮಾಲಯದ ತಪ್ಪಲಲ್ಲಿ ನೋಡಿ ಮುಗಿಯದಷ್ಟು ಸ್ಥಳಗಳಿವೆ. ಜೀವನದಲ್ಲಿ ಒಮ್ಮೆಯಾದರೂ ಚಾರ್‌ಧಾಮ (ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿ) ಯಾತ್ರೆ ಮಾಡಬೇಕೆಂಬುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಅಂತೆಯೇ ನನಗೂ ಆ ಕನಸಿತ್ತು. ಕನಸಿಗೆ ಪುಷ್ಟಿ ನೀಡುವಂತೆ 2016 ಮೇ ತಿಂಗಳಲ್ಲಿ ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ...
ಹರಿದ್ವಾರದಲ್ಲಿ ಒಂದು ಸುತ್ತು ಹಾಕಿದರೆ ಅಡಿಗಡಿಗೂ ಮಂದಿರಗಳೇ ಕಾಣಸಿಗುತ್ತವೆ. 23 ಸೆಪ್ಟೆಂಬರ್ 2016 ರಂದು ಅಲ್ಲಿ ಸುತ್ತಾಡುತ್ತಾ, ‘ರಾಮ ಮಂದಿರ’ಕ್ಕೆ ಹೋಗಿದ್ದೆವು. ಮಂದಿರದ ಆವರಣದಲ್ಲಿ ರುದ್ರಾಕ್ಷಿ ಮರವಿತ್ತು. ಮರದಲ್ಲಿ ರುದ್ರಾಕ್ಷಿಯ ಎಳೆ ಕಾಯಿಗಳಿದ್ದುವು . ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಪೂಜನೀಯ ಸ್ಥಾನವಿದೆ, ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ....
ಸಿಖ್ ಸಮುದಾಯದವರ ಗುರುದ್ವಾರದಲ್ಲಿ ‘ಲಂಗರ್’ ಎಂಬ ಹೆಸರಿನ ದಾಸೋಹ ಪದ್ಧತಿಯಿದೆ. ಇದು ದಾನಿಗಳ ಧನಸಹಾಯ ಮತ್ತು ಸ್ವಯಂಸೇವಕರ ಶ್ರಮದಿಂದ ನಡೆಯುವ ದಾಸೋಹ. ಲಂಗರ್ ನಲ್ಲಿ ಅಡುಗೆ ತಯಾರಿಸುವುದು, ಊಟ ಬಡಿಸುವುದು, ತಟ್ಟೆ ತೊಳೆಯುವುದು …ಇತ್ಯಾದಿ ಎಲ್ಲಾ ಕೆಲಸಗಳನ್ನು ಸ್ವಯಂಸೇವಕರೇ ಮಾಡುತ್ತಾರೆ. ಇವರುಗಳು ತಮ್ಮ ವೈಯುಕ್ತಿಕ ಜೀವನದಲ್ಲಿ ಉತ್ತಮ...
ಯಮುನಾ ನದಿಯ ಉಗಮ ಸ್ಥಾನವಾದ ಯಮುನೋತ್ರಿಯು ಹಿಮಾಲಯದ ಮಡಿಲಿನಲ್ಲಿರುವ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿದೆ. ಸಮುದ್ರ ಮಟ್ಟದಿಂದ 10797 ಅಡಿ ಎತ್ತರದಲ್ಲಿರುವ ಯಮುನೋತ್ರಿಯನ್ನು ತಲಪಲು ‘ಜಾನಕಿಚಟ್ಟಿ’ ಎಂಬಲ್ಲಿಂದ ಸುಮಾರು 6.5 ಕಿ.ಮೀ ಏರುದಾರಿಯಲ್ಲಿ ಚಾರಣ ಮಾಡಬೇಕು. ನಡೆಯಲು ಕಷ್ಟವಾಗುವವರಿಗೆ ಕುದುರೆ ಸವಾರಿ, ಡೋಲಿ ಮತ್ತು ಕಂಡಿ...
ಕೇದಾರನಾಥ ದೇವಾಲಯದ ಗರ್ಭಗುಡಿಗೆ ಸಮಾನಾಂತರವಾಗಿ ಸುಮಾರು 20 ಅಡಿ ಹಿಂದೆ, ದೊಡ್ಡದಾದ ಬಂಡೆಯೊಂದು ಕಾಣಿಸುತ್ತದೆ. ಪ್ರಕೃತಿಯಲ್ಲಿ ಧಾರಾಳವಾಗಿ ಕಾಣಸಿಗುವ ಬಂಡೆಯಲ್ಲಿ ಏನು ವಿಶೇಷ ಎನ್ನುತ್ತೀರಾ? ಆ ಬಂಡೆ ಇರುವ ಜಾಗ, ಅದು ಅಲ್ಲಿಗೆ ಉರುಳುತ್ತಾ ಬಂದ ಪರಿ ಮತ್ತು ಬಹುಶ: ಬಂದು ತಲಪಿದ ಸಮಯ ಆಸ್ತಿಕರ ಮನಸ್ಸಿನಲ್ಲಿ ಅದಕ್ಕೆ ದೈವಿಕ...
ನಿಮ್ಮ ಅನಿಸಿಕೆಗಳು…