Author: Vijaya Subrahmanya
ನೆಚ್ಚಿನ ಕನ್ನಡ
ಕನ್ನಡವ ಕೊಲ್ಲದಿರು ಓ ಪುಟ್ಟ ತಮ್ಮ| ಇಂಗ್ಲಿಷನ್ನೆ ನೆಚ್ಚದಿರು ಓ ಚಿನ್ನ ರನ್ನ|| ದಾರಿಯಲಿ ಬೀದಿಯಲಿ ಪೇಟೆಯಲಿ| ಆಡು-ಮಾತಾಡು ಕನ್ನಡದ ಸೊಲ್ಲು|| ಕನ್ನಡವ ನೆಚ್ಚಿ ಮೇಲ್ಮೆಗೈದಿಹರು| ಕನ್ನಡಕೆ ಹೋರಾಡಿ ಮಡಿದಂತ ವೀರರು|| ಲೋಕಮಾನ್ಯರು ಅವರೆ ನಮ್ಮ ಪೂರ್ವಜರು| ಸವಿಗನ್ನಡಕಾಗಿ ಪ್ರಾಣ ತೆತ್ತವರು|| ಕನ್ನಡವೆ ಪ್ರಾಣ, ಕನ್ನಡವೆ ಮಾನ|...
ನನ್ನ ಪ್ರಥಮ ವಿಮಾನ ಯಾನ…
ಬಾನಂಗಳದಲ್ಲಿ ಹಾರಾಡುವ ವಿಮಾನವನ್ನು ಚಿಕ್ಕಂದಿನಲ್ಲೇ ಮನೆಯಂಗಳದಲ್ಲಿ ನಿಂತು ನೋಡುವಾಗೆಲ್ಲ ನನ್ನ ಮನದೊಳಗೆ ನಾನೂ ವಿಮಾನಯಾನ ಮಾಡಬೇಕೆಂಬ ಅಭಿಲಾಶೆ ಬೇರೂರಿತ್ತು.ಆ ಸನ್ನಿವೇಶ ಎಂದಿಗೆ ಬರುತ್ತೋ ಕಾಯುವಿಕೆ ಮನದಮೂಲೆಯಲ್ಲಿ ತಣ್ಣಗೆ ಕುಳಿತಿತ್ತು.ಕಾಲ ಸಾಗಿತ್ತು.ಮೂಲೆಯಲ್ಲಿ ತಣ್ಣಗಿದ್ದ ಆ ಸನ್ನಿವೇಶ ಹೀಗೊಂದು ದಿನ ಗರಿಕೆದರಿ ಎದ್ದಿತು!.ಹೈದ್ರಾಬಾದ್‌ಗೆ ನಾಲ್ಕು ದಿನಗಳ ಪ್ರವಾಸವನ್ನು ನಿಗದಿಪಡಿಸಿದ ನನ್ನ...
ಯುಗಾದಿಯ ದ್ವಿಪಾತ್ರ
ಯುಗದ ಆದಿಯೇ ಯುಗಾದಿ.ಅರ್ಥಾತ್ ಸಂವತ್ಸರದ ಆರಂಭ.ಋತುರಾಜ ವಸಂತನ ಶುಭಾಗಮನ ದಿನ.ಯುಗಾದಿಯನ್ನು ಹಬ್ಬವನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿ-ಪರಂಪರೆಯ ಕೊಡುಗೆ. ಯುಗಾದಿಯ ವೈಶಿಷ್ಟ್ಯಃ– ಒಂದು ಕುಟುಂಬದಲ್ಲಿ ಒಂದು ಶಿಶುವಿನ ಜನನವಾದಾಗ ಮನೆಮಂದಿಗೆ ಹೇಗೆ ಹರ್ಷೋಲ್ಲಾಸವಾಗುವುದೋ ಅಂತೆಯೇ ನೂತನ ಸಂವತ್ಸರದ ಆಗಮನದ ವೇಳೆಯೂ ಸಡಗರ ಸಂಭ್ರಮ ಪಡುವುದು ರೂಢಿ. ಯುಗಾದಿಯಲ್ಲಿ ಎರಡು...
ಯುಗಾದಿಯ ವಿಶೇಷತೆಗಳು
ಯುಗಾದಿ ಎಂದರೆ ಸೃಷ್ಟಿಯ ಆರಂಭ,ಯುಗಾರಂಭ. ಇಲ್ಲಿ ಹೊಸ ವರ್ಷಾರಂಭ ಎಂಬುದೇ ಅರ್‍ಥೈಕೆ. ನಮ್ಮ ಧಾರ್ಮಿಕ ಪದ್ಧತಿ(ಪಂಚಾಂಗ) ಪ್ರಕಾರ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂಬೆರಡು ಆಚರಣೆಗಳು.ವಸಂತ ಋತುವಿನಲ್ಲಿ ಬರುವ ಈ ಹಬ್ಬಗಳಿಗೆ ಮದುಮಗಳಿನ ಮೆರುಗು!. ಚಿಗುರೆಲೆ ಫಲಪುಷ್ಪ ಬಿಡುವ ಕಾಲ!!. ಕೋಗಿಲೆ ಗಾನ!!!. ಇವುಗಳೆಲ್ಲ ಕಾಲ ವಿಶೇಷತೆಗಳು. ‘ಯುಗ-ಯುಗಾದಿ...
ಮಹಿಳೆಯ ಕೌಟುಂಬಿಕ ಬಾಂಧವ್ಯ ಹಾಗೂ ಬದ್ಧತೆ
ಭಾರತೀಯ ಮಹಿಳೆಯ ಸಂಸ್ಕೃತಿ-ಸಂಸ್ಕಾರವು ವಿಶ್ವಮಾನ್ಯತೆ ಪಡೆದು ಆದರ್ಶವೂ ಆದರಣೀಯವೂ ಆಗಿದೆ.ಇಲ್ಲಿಯ ಮಹಿಳೆಯ ಕುಟುಂಬ ಬಾಂಧವ್ಯ ಬಲು ವಿಸ್ತಾರವಾದುದು.ಅದೊಂದು ರೀತಿಯ ವಿಶಾಲವಾದ ಆಲದ ಮರದಂತೆ!.ಒಬ್ಬ ಸ್ತ್ರೀ ಯಾ ನಾರಿ ತನ್ನ ಜನನದಿಂದ ಮೊದಲ್ಗೊಂಡು ಮರಣದ ತನಕ ಎರಡು ಕುಟುಂಬದ ಸದಸ್ಯಳಾಗಿ ಹಾದುಹೋಗುತ್ತಾಳೆ. ಹುಟ್ಟುಕುಟುಂಬ ಒಂದಾದರೆ; ಸೇರಿದ ಕುಟುಂಬ...
ದೀಪಾವಳಿಯಲ್ಲೂ ಗೋವಿಗೆ ಮಹತ್ವ
ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ, ನಶ್ವರದಿಂದ ಐಶ್ವರ್ಯದೆಡೆಗೆ ಕೊಂಡೊಯ್ಯುವ ಸಂಕೇತವೇ ದೀಪಾವಳಿ. ದೀಪ ಎಂದರೆ ಬೆಳಕು, ಜ್ಯೋತಿ. ದೀವಿಗೆ, ಹೀಗೆ ಬೆಳಕಿಗೆ ಹಲವಾರು ಪರ್ಯಾಯ ಪದಗಳಿದ್ದರೂ ಅಂತರಾರ್ಥ ನಮ್ಮ ಬಾಳು ಬೆಳಗ ಬೇಕು, ಪ್ರಜ್ವಲಿಸಬೇಕೆಂಬುದು. “ಎಣ್ಣೆ ಹೊಯ್ಯಮ್ಮ ದೀಪಕೆ” ಸೇಡಿಯಾಪು ಕೃಷ್ಣ ಭಟ್ಟರ ಕವನದ ಸಾಲು ಇಲ್ಲಿ...
ನವರಾತ್ರಿಯ ನವ ದಿನಗಳ ವಿಶೇಷತೆ
ಅಶ್ವೀಜ ಶುದ್ಧ ಪ್ರತಿಪದೆ ದಿನದಿಂದ ನವಮಿ ಪರ್ಯಂತ ನವರಾತ್ರಿ ದಿನಗಳ ಉಪಾಸನಾ ಉತ್ಸವ. ಒಂಭತ್ತು ದಿನಗಳಲ್ಲಿ ದುರ್ಗೆಯ ನವರೂಪವನ್ನು ಪೂಜಿಸಿ ದಶಮಿಯಂದು ಪುಸ್ತಕ ಪೂಜೆ ಮಾಡಿ ಉದ್ಯಾಪನಾ ಕಾರ್ಯ ಮಾಡುವುದು ನಮ್ಮ ಸಂಸ್ಕೃತಿ.ಆ ಒಂಬತ್ತು ದಿನಗಳವಿಶೇಷ ಹೇಗೆ?. ಪಾಡ್ಯದಂದು ಯೋಗನಿದ್ರಾದುರ್ಗಾ,ಬಿದಿಗೆಯಂದು ದೇವಜಾತಾದುರ್ಗಾ,ತದಿಗೆಯ ದಿನ ಮಹಿಷಮರ್ಧಿನಿ ದುರ್ಗಾ,ಚೌತಿಯಂದು ಶೈಲಜಾದುರ್ಗಾ,...
ವಿಭೂತಿ ಮಾಡುವ ವಿಧಾನ
ದೇವಸ್ಥಾನಗಳಲ್ಲಿ, ಹಾಗೂ ಹಿಂದುಗಳಲ್ಲಿ ಕೆಲವು ವರ್ಗದವರು ಹಣೆಗೆ ಬಳಿಯಲು ವಿಭೂತಿ ಉಪಯೋಗವಿದೆ. ಆದರೆ ಅದು ಸಾವಯವ ರೀತಿಯಲ್ಲಿ,ಪರಿಶುದ್ಧವಾಗಿ ಆದರೆ ಅದರ ಮಹತ್ವ ಹೆಚ್ಚು ಎಂಬುದು, ನಮ್ಮಹಿರಿಯರ ಉಪದೇಶ, ನನ್ನ ತಂದೆಯವರಿಂದ (ಶಂಭುಭಟ್ಟ,ನಿಡುಗಳ,ಶಂಕರಮೂಲೆ) ತಿಳಿದುಕೊಂಡ ವಿಚಾರ, ಅವರು ಮಾಡುವುದನ್ನು ಗಮನಿಸಿದ್ದೇನೆ.ಇದೀಗ ನಿಮ್ಮ ಮುಂದೆ ವಿಭೂತಿ ತಯಾರಿಯ ಕ್ರಮ. ವಿಭೂತಿಗೆ...
ಶುದ್ಧ ಕುಂಕುಮ ಮಾಡುವ ಕ್ರಮ
ತುಂಬಾ ಜನ ಅಕ್ಕ-ತಂಗಿಯರು ಕುಂಕುಮ ಮಾಡುವ ರೀತಿ ಹೇಗೆಂದು ಕೇಳುತ್ತಿದ್ದರು. ಹಾಗಾಗಿ ನನಗೆ ತಿಳಿದ ಕ್ರಮವನ್ನು ಅಪೇಕ್ಷಿತರಿಗಾಗಿ ಬರೆಯುತ್ತಾ ಇದ್ದೇನೆ.. ಬೇಕಾಗುವ ಸಾಮಗ್ರಿಗಳು: ಒಳ್ಳೆ ಜಾತಿಯ ಅರಿಶಿನ ಕೋಡು ಒಂದು ಕಿಲೊ {ನಮ್ಮ ತೋಟಲ್ಲಿ ಬೆಳೆಸಿದ್ದಾದರೆ ಆ ಕುಂಕುಮ ಎಲರ್ಜಿಯಾಗದು. ಇಲ್ಲದಿದ್ದಲ್ಲಿ ಕೆಲವು ಜನಕ್ಕೆ ಕುಂಕುಮ ಎಲರ್ಜಾಗುವುದಿದೆ}...
ನಿಮ್ಮ ಅನಿಸಿಕೆಗಳು…