ನೆಚ್ಚಿನ ಕನ್ನಡ
ಕನ್ನಡವ ಕೊಲ್ಲದಿರು ಓ ಪುಟ್ಟ ತಮ್ಮ|
ಇಂಗ್ಲಿಷನ್ನೆ ನೆಚ್ಚದಿರು ಓ ಚಿನ್ನ ರನ್ನ||
ದಾರಿಯಲಿ ಬೀದಿಯಲಿ ಪೇಟೆಯಲಿ|
ಆಡು-ಮಾತಾಡು ಕನ್ನಡದ ಸೊಲ್ಲು||
ಕನ್ನಡವ ನೆಚ್ಚಿ ಮೇಲ್ಮೆಗೈದಿಹರು|
ಕನ್ನಡಕೆ ಹೋರಾಡಿ ಮಡಿದಂತ ವೀರರು||
ಲೋಕಮಾನ್ಯರು ಅವರೆ ನಮ್ಮ ಪೂರ್ವಜರು|
ಸವಿಗನ್ನಡಕಾಗಿ ಪ್ರಾಣ ತೆತ್ತವರು||
ಕನ್ನಡವೆ ಪ್ರಾಣ, ಕನ್ನಡವೆ ಮಾನ|
ಕನ್ನಡವೆ ನಮ್ಮ ಕುಲಸಂಪನ್ನ||
ಕನ್ನಡದ ಉತ್ಸವವು ನವಂಬರಿಗೆ|
ಆಚರಣೆ ಎಂದೆಂದು ಮನದ ಒಳ-ಹೊರಗೆ||
– ವಿಜಯಾಸುಬ್ರಹ್ಮಣ್ಯ,ಕುಂಬಳೆ.
ಚೆನ್ನಾಗಿದೆ. ಸಂದರ್ಭೋಚಿತವಾಗಿದೆ
ಧರೆಯ ಮೇಗಡೆ ಎಮ್ಮಯ ಕನ್ನಡ ಮೆರೆಯಲಿ
ಧನ್ಯವಾದಗಳು ಹೇಮಮಾಲಾ ಅವರಿಗೆ ಹಾಗೂ ಓದಿ ಮೆಚ್ಚಿದವರಿಗೆ