ಅಮರ ಯೋಧನ ಅಮ್ಮನ ಅಳಲು..
ಓ…ನನ್ನ ಚಿಗುರಳಿದ ಚೇತನ
ಬೇಡವೆಂದರೂ ಮರೆಯುವುದಿಲ್ಲ ,ನಿನ್ನ
ಅಮರವೀರ ಕಥನ|
ಕಟುಕನ ವಾಮಮಾರ್ಗಕೆ ಬಲಿಯಾಗಿ
ತಾಯ್ನೆಲದಲ್ಲಿ ಹೊನ್ನಕ್ಷರದಿ ಬರೆಸಿ ಮರೆಯಾದ
ಯೋಧ ನೀನೇ ಧನ್ಯ|
ಕಂದಾ ಭೂದೇವಿಮಡಿಲಲ್ಲಿ ಮಲಗಿದಾಗ
ದಣಿವರಿದ ನಿನ್ನ ದುಡಿಮೆಗೆ ತಾಯಾಗಿ
ಹಾಡಿದಳಲ್ಲ ಚಿರನಿದ್ರೆಗೆ ರಾಗ|
ನನ್ನಲ್ಲಿ ಪಿಸುಗುಟ್ಟುತ್ತಿದೆ ನಿನ್ನ
ಬಿಸಿಯುಸಿರು ಕಲುಕುತ್ತಿದೆ ಗರ್ಭಾಶಯವ
ಮುಲುಕುತ್ತಿದೆ ನರನಾಡಿ ಬಿಗಿತ|
ಆ ಕಟುಕನ ಮೋಸವಂಚನೆ ಬೆನ್ನಟ್ಟದೆ
ಬಿಡಲಾರದು ಆತನ ವಂಶ ಸುಟ್ಟು
ಬಿಡುವುದದು ಹೆಡತಲೆಯ ಮೃತ್ಯು ಬೇಗ||
-ವಿಜಯಾಸುಬ್ರಹ್ಮಣ್ಯ,ಕುಂಬಳೆ
ಆ ಹೆತ್ತೊಡಲ ಸಂಕಟ ಅವಳು ಬದುಕಿರುವಷ್ಟು ದಿನವೂ ಶಾಶ್ವತ
Jai Hind