Author: K M Sharanabasavesha
ಮುದ್ದು ಕಂದ
ಬೆಣ್ಣೆ ಮುದ್ದೆಯಂತಹ ದೇಹಗಾಜಿನಂತಹ ಕಣ್ಣುಗಳು ಗುಲಾಬಿ ದಳಗಳಂತಹ ಕೆನ್ನೆಗಳುಹೊರಟು ನಿಂತ ಅಪ್ಪನ ತಡೆದು ನಿಲ್ಲಿಸುವ ನೋಟಗಳು ಕಾಲವೇ ನೀ ಮೆಲ್ಲಗೆ ಹರಿಯುತ್ತಿರುಸರಿದು ಹೋಗದಿರಲಿ ಈ ಕ್ಷಣಗಳುಜಾರಿ ಸಾಗದಿರಲಿ ಈ ದೃಶ್ಯಗಳು ಕುಲಾವಿ ಕಟ್ಟಿದ ಸುಂದರ ಕುಸುಮವಿಂದು ತಲೆ ಎತ್ತಿ ನಿಂತಿದೆಹಣೆಯ ಮಧ್ಯೆ ಹೊರಬಂದ ಕೂದಲಿನ ಹೊದಿಕೆ ಕಳೆಗಟ್ಟಿದೆ...
ಕನ್ನಡ ಪದಗಳು
ಮನದಲ್ಲಿ ಮೂಡಿ ಬಂದ ಚಿಂತನೆಕರಗಿ ಹೋಗದಿರಲಿ ಹೇಳುವ ದಾರಿಗಾಣದೆಕೊರಗಿ ಸಾಯದಿರಲಿ ಕನ್ನಡವೊಂದು ಅದ್ಭುತ ಆಟವುಆಡುವ ಛಲವಿರಬೇಕುಕಟ್ಟುವ ಲಯವಿರಬೇಕು ಪಳ್ಳನೆ ಮಿಂಚಿನಂತೆಕಂಡು ಬಂದ ಭಾವನೆಗೆಪದಗಳ ಹೊಸೆಯಬೇಕುಸಂಬಂಧ ಬೆಸೆಯಬೇಕು ಬಳಸಿದ ನುಡಿಗಳಲ್ಲಿ ಸ್ಪಷ್ಟತೆ ತರಬೇಕುಗಳಿಸಿದ ಆಲೋಚನೆಗಳಲ್ಲಿ ನೈಜತೆ ಕಾಣಬೇಕು ಶಿಲ್ಪಿಯ ಕುಸುರಿ ಕೆತ್ತನೆಯಂತೆಜೀವಕಳೆ ತುಂಬಿದ ಮೂರ್ತಿಯಂತೆ ಎಂದೂ ಕೇಳದ ಭೃಂಗದ...
ಕಾಳಿಂಗ ಮರ್ದನ
ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ ಪಡೆದಿಹುದು ಸರೀಸೃಪದ ವಿಷವು ಪ್ರೀತಿ ವಾತ್ಸಲ್ಯಗಳ ಅಸ್ವಸ್ಥತೆಗೆ ಕಾರಣವಾಗಿಹುದುಇದ ಕಂಡ ಸಾತ್ವಿಕ ಗುಣಗಳೆಂಬ ಕೃಷ್ಣ ಜಾಗೃತನಾಗಿಹನು ಯೋಗವೆಂಬ ಕದಂಬ ವೃಕ್ಷದಿಂದ ನದಿಗೆ ಜಿಗಿದಿಹನುಪ್ರಾಣಾಯಾಮ ಧ್ಯಾನವೆಂಬ ಪುಟ್ಟ...
”ಸತ್ಯಂ ಶಿವಂ ಸುಂದರಂ”
ಹಂಬಲಿಸಿ ತಂದ ಹೊಸ ವಾಹನದ ಸಂತಸ ಉಳಿಯುವುದು ಅದು ಮಾಸಲಾಗುವ ತನಕಹಪಹಪಿಸಿ ಕಟ್ಟಿಸಿದ ಮನೆಯ ಖುಷಿ ಇರುವುದು ಅದಕ್ಕಿಂತ ದೊಡ್ಡ ಮನೆ ನೋಡುವ ತನಕ ಅಂಗಡಿ ಅಂಗಡಿ ತಿರುಗಿ ತಂದ ಹೊಸ ವಿನ್ಯಾಸದ ಅಂಗಿಯ ಮೇಲಿನ ಅಕ್ಕರೆ ಒಂದೆರಡು ಬಾರಿ ಉಡುವ ತನಕಇಷ್ಟಪಟ್ಟು ಸವಿಯಲು ಮಾಡಿಸಿಕೊಂಡ ಪಂಚ...
ಸತ್ತು ಬದುಕುವ ಪರಿ…….
ಪ್ರಾಣ ಪಕ್ಷಿ ದೇಹವೆಂಬ ಪಂಜರವ ಬಿಟ್ಟು ಹಾರಿಮೃತ್ಯು ಚುಂಬನದಿಂದ ನಿನಗೆ ಹೆಣವೆಂಬ ಹೊಸ ಹೆಸರು ಬಂದಿರಲು ಹಸಿದ ಹೊಟ್ಟೆಯಲಿ ಸಂಕಟ ತುಂಬಿಕೊಂಡು ಕಣ್ಣೀರು ಸುರಿಸಿದ ಬಂಧುಗಳೆಲ್ಲಾಅಂತ್ಯಸಂಸ್ಕಾರದ ತಯಾರಿಯಲ್ಲಿ ತೊಡಗಿರಲು ಹಚ್ಚಿದ ಊದುಬತ್ತಿಯ ಸುವಾಸನೆ ವಿಚಿತ್ರ ಅನುಭೂತಿ ತರುತಿರಲುಹಾಕಿದ ಹಾರಗಳು ಭಾರವೆಂದು ಹೇಳಲು ಬಾಯೆಲ್ಲಿ ? ಕೂತು ಕಿರಿ...
ಹದಿಹರೆಯಕ್ಕೆ ಕಾಲಿಟ್ಟಾಗ…..
ಎಷ್ಟೊಂದು ಮುಗ್ದತೆ ಇದೆ ಮೊಗದಲ್ಲಿಅಷ್ಟೊಂದು ನಿಸ್ವಾರ್ಥ ಭಾವವಿದೆ ಆ ನಗೆಯಲ್ಲಿ ಅಮ್ಮನ ಕಾಡಿ ಬೇಡಿ ಜಾತ್ರೆಯಲಿ ತಂದ ಮಣಿಸರಅಕ್ಕನಿಗೆ ಗೊತ್ತಾಗದಂತೆ ಕದ್ದು ಬಳೆದುಕೊಂಡ ತುಟಿಯ ಬಣ್ಣ ಮಾಮ ಕೊಡಿಸಿದ ಜರತಾರಿ ಲಂಗಈ ಕಿವಿಯಿಂದ ಆ ಕಿವಿಯವರೆಗೆ ದೊಡ್ಡಮ್ಮ ಮುಡಿಸಿದ ಕನಕಾಂಬರಿ ಮಾಲೆ ಸೇರಿದ ಬಂಧು ಬಳಗವೆಲ್ಲಾ ಎನ್ನ...
ಸೃಷ್ಟಿಯ ದೈವಿಕ ಕ್ಷಣ
ಒಂಭತ್ತು ತಿಂಗಳ ಹಿಂದೆ ಅಂಕುರವಾದ ಮುದ್ದು ಸಸಿಯಿಂದು ಪ್ರಪಂಚಕೆ ಸೇರುತಿದೆನವಿರಾದ ಈ ಕುಸುಮವನ್ನು ಬಹು ಜತನದಿಂದ ಸ್ವಾಗತಿಸುತ್ತಿದೆ ವೈದ್ಯ ಲೋಕದ ಜೀವ ಅಮ್ಮನ ಕರುಳಿಂದ ಬೇರ್ಪಡಿಸಿದ ಡಾಕ್ಟರಮ್ಮಳ ಹೊಡೆಯಲು ಪುಟ್ಟ ಮುಷ್ಟಿ ಕಟ್ಟಿದೆಒಲವು ತುಂಬಿದ ಕಂಗಳ ನೋಡಿ ಹಾಗೇ ನಿದ್ದೆಗೆ ಜಾರಿದೆ ತೆಳು ಗುಲಾಬಿ ಬಣ್ಣದ ತ್ಚಚೆಯಲ್ಲಿ...
ಅರೆರೆ ಅರಗಿಳಿ…
ಹಾರುವ ಹೂವೊಂದು ಮರದ ಮೇಲೆ ಕುಳಿತಿದೆಸಿಹಿಯಾದ ಹಣ್ಣು ಸವಿಯಲು ಅರಗಿಳಿಯು ಕಾಯುತ್ತಿದೆ ಬಾಗಿದ ಕೊಕ್ಕು ಅತ್ತಿತ್ತ ಹೊರಳುವ ಗುಲಗಂಜಿಯಂತ ಕಣ್ಣುಗಳುಕತ್ತು ಅಲ್ಲಾಡಿಸಿದಾಗ ಮೇಲೆದ್ದು ಕೂರುವ ಕೆಂಪನೆಯ ಜುಟ್ಟಿನ ಭಾಗಗಳು ಕಡು ನೀಲಿ ಬಣ್ಣದ ಪುಕ್ಕಗಳು ಹಳದಿ ವರ್ಣದ ಮೈಗೆ ಮೆರಗು ನೀಡಿವೆಚೂಪಾದ ಉಗುರುಗಳು ಕಾಂಡಕ್ಕೆ ಚುಚ್ಚಿ ಬಳಸಿ...
ನಿಮ್ಮ ಅನಿಸಿಕೆಗಳು…