ಮಂಜುಮಾಮ
ಬಿರು ಬೇಸಗೆಯಲಿ ನೆಲ ಕಾದಹೆಂಚಿನಂತಾಗಿರಲು
ರವಿಯ ಪ್ರಖರ ಕಿರಣಗಳಿಗೆ ಮೈ ಮನಸ್ಸುಗಳು ಬೆಂದು ಬಸವಳಿದಿರಲು
ಬಾಯಿ ಒಣಗಿ ತುಟಿ ಬಿರಿದು ತಂಪಾದುದನು ಬೇಡಿರಲು
ಪುಟ್ಟ ಗಾಡಿಯ ತಳ್ಳಿಕೊಂಡು ಐಸ್ ಕ್ರೀಮ್ ಮಾರುವವ ಬಂದ
ಚಿಕ್ಕ ಗುಂಡನೆಯ ಗಾಲಿಯ ಮೇಲೆ ಖುಷಿಯ ಹೊತ್ತು ತಂದ
ಸಣ್ಣ ಛತ್ರಿಯ ಕೆಳಗೆ ಎಂತಹ ಮನಮೋಹಕ ದೃಶ್ಯ
ಶಂಖುವಿನಾಕಾರದ ಬಿಸ್ಕಿಟ್ ನಲಿ ಕ್ರೀಮ್ ಗುಡ್ಡೆ ಮಾಡುವ ವಿಷಯ
ವೆನಿಲ್ಲಾ ಸ್ಟ್ರಾಬೆರಿ, ಚಾಕೊಲೇಟ್ ಸ್ವಾದದ ಕೆನೆಭರಿತ ಐಸ್ ಬೇಕೇ
ಗುಳ್ಳೆ ಬರುವ ತಂಪಾದ ಬಣ್ಣ ಬಣ್ಣದ ಪಾನೀಯ ಸಾಕೇ
ಬಿಳಿ ಹಸಿರು ಕಿತ್ತಳೆ ಗುಲಾಬಿ ವರ್ಣಗಳ ಷರಭತ್ತು ಕೈ ಬೀಸಿ ಕರೆದಿದೆ
ಅಲ್ಲಿ ಸುತ್ತ ನೆರೆದ ಚಿಣ್ಣರ ಕೂಗು ಹರುಷ ಮುಗಿಲ ಮುಟ್ಟಿದೆ
ಪುಷ್ಪಗಳ ಹಾಸಿಗೆಯ ಮೇಲೆ ಸ್ವಾದಿಷ್ಟ ಸಿಹಿತಿನಿಸುಗಳ ಒಳಗೊಂಡ
ದೇವಲೋಕದ ರಥದಂತೆ ಗಾಡಿ ತೋರಿದೆ
ಗಂಧರ್ವ ಕುಮಾರನೇ ಸವಿ ಹಂಚಲು ಬಂದಂತೆ ಭಾಸವಾಗಿದೆ
ಜೇನುಗೂಡಿನಲಿ ಮುತ್ತಿದ ಜೇನ್ನೊಣಗಳಂತೆ ಮಕ್ಕಳು ತೋರಿಹರು
ಕಣ್ಮುಚ್ಚಿ ನೇವರಿಸುತಾ ಲೋಕವನ್ನೇ ಮರೆತಿಹರು
ಇಂಗ್ಲೀಷ್ ಮೂಲ – ರಶೆಲ್ ಫೀಲ್ಡ್
ಕನ್ನಡಕ್ಕೆ ಅನುವಾದ – ಕೆ.ಎಂ ಶರಣಬಸವೇಶ.
ಬಾಲ್ಯದ ನೆನಪು ತಂದ..ಅನುವಾದ ಕವನ..ಚೆನ್ನಾಗಿದೆ ಸಾರ್..ವಂದನೆಗಳು.
ಐಸ್ ಕ್ರೀಂನಷ್ಟೇ ಸವಿಯಾಗಿದೆ… ಅನುವಾದಿತ ಕವನ.
ವೀಣಾ ಎಂದು ಚಪ್ಪರಿಸುವಂತಿದೆ
ಈ ಕವನ
ಬಿರುಬಿಸಿಲಿನ ಶೆಖೆಗಾಲಕ್ಕೆ ತಂಪನೆರೆಯುವ ಚಂದದ ಅನುವಾದಿತ ಕನವ ಸೊಗಸಾಗಿದೆ.