ಕವಿತೆಯೆಂದರೇನು ?
ಮಣ್ಣಿನ ಕಣ ನೋಡಿ ಆ ಜಾಗದ
ಸಮಸ್ತ ಕಥೆ ಹೇಳುವ ಶಕ್ತಿ
ವನಸುಮದ ಸೌಂದರ್ಯವ
ಸ್ವರ್ಗ ಸಮಾನವಾಗಿಸುವ ಭಕ್ತಿ
ಅನಂತತೆಯನ್ನು ಅಂಗೈಯಲ್ಲಿ
ಹಿಡಿಯುವ ಅನುಭೂತಿ
ಜನಮಾನಸದಲಿ ಅಮರತ್ವವ
ಪಡೆಯಲು ಭಗವಂತ ನೀಡಿದ ಯುಕ್ತಿ
ವಾಸ್ತವತೆಯ ಅಶ್ವವೇರಿ ಕಲ್ಪನಾ ಲೋಕದಲಿ
ವಿಹರಿಸಲು ಪಡೆದ ರಹದಾರಿ
ಸಾಲುಗಳ ಪದ ಪುಂಜಗಳ ಬೆನ್ನೇರಿ
ಬಂದ ಬತ್ತದ ಭಾವನೆಗಳ ಝರಿ
ಒಮ್ಮೊಮ್ಮೆ ಕಣ್ಣ ಒದ್ದೆಯಾಗಿಸಿ
ಮಗದೊಮ್ಮೆ ನಗುವ ತುಂಬಿಸಿ
ತಿಳಿದರೂ ತಿಳಿಯದೆ ನುಡಿದರೂ ನುಡಿಯದೆ
ಕೇಳಿದರೂ ಕೇಳದೆ ಹಾಡಿದರೂ ಹಾಡದ
ಭಾವಸಂಗಮದ ಗಣ ಮಾತ್ರೆಗಳ ಜೋಡಿಸುವ ಪರಿ
ದೈವಕೃಪೆಯ ಅಕ್ಷರಗಳಲಿ ಮೆರವಣಿಗೆ ಹೊರಟಿರುವ ಬಾನ್ಸುರಿ
ನೊಂದ ಹೃದಯಗಳ ಸಂತೈಸುವ
ನೀತಿ ಸೂಕ್ತಿಗಳ ಸಂತೃಪ್ತ ಕನಸುಗಳ ಗಿರಿ
ಎಡತಾಕುವ ಶಬ್ದಗಳಲಿ ಬದುಕು ತಿರುಳಿನ ಸತ್ವವಿದೆ
ಮೂಡಿಬರುವ ಬರಹಗಳಲಿ ಕರುಳಿನ ನಂಟಿದೆ
ಮಿಡಿಯುವ ಮನಸ್ಸುಗಳಿಗೆ ಸ್ಪೂರ್ತಿಯ ಸೆಲೆಯಿದೆ
ದುಡಿಯುವ ಕೈಗಳಿಗೆ ಬಲ ತುಂಬುವ ಮೂಲ ಮಂತ್ರವಿದೆ
(ವಿಲಿಯಂ ಬ್ಲೇಕ್ ಅವರ What is poetry ? ಬರಹದ ಸ್ಪೂರ್ತಿಯಿಂದ ಬರೆದಿದ್ದು)
– ಕೆ.ಎಂ ಶರಣಬಸವೇಶ
ಕವಿತೆ ಎಂದರೇನು..ಪ್ರಶ್ನೆ ಕೇಳುತ್ತಾ…ಅದರ ಒಳ ಹೂರಣವನ್ನುಅನಾವರಣ ಗೊಳಸಿರುವ ರೀತಿ.. ಚೆನ್ನಾಗಿ ಮೂಡಿಬಂದಿದೆ..ಸ್ಫೂರ್ತಿ.. ಯಾವ.
..ಕಡೆಯಿಂದ ಬಂದರೇನು..
ಧನ್ಯವಾದಗಳು ನಾಗರತ್ನ ಮೇಡಂ
ಅನಂತತೆಯನ್ನು ಅಂಗೃಯಲ್ಲಿ ಹಿಡಿಯುವ ಅನುಭೂತಿ, ಸೊಗಸಾದ ಉಪಮೆಗಳೊಂದಿಗೆ ಕವಿತೆಯನ್ನು ವಿವರಿಸಿರುವ ಪರಿ ಸುಂದರವಾಗಿ ಮೂಡಿಬಂದಿದೆ.
ಪದ್ಮಾಆನಂದ್ ಮೇಡಂ ಗೆ ಧನ್ಯವಾದಗಳು
ಕವಿತೆಯ ಅರ್ಥವನ್ನು ಅರುಹುವ ಸಾಲುಗಳು ಬಹಳ ಚಂದ.ಕವಿತೆಯ ಅರ್ಥವನ್ನು ಅರುಹುವ ಸಾಲುಗಳು ಬಹಳ ಚಂದ.
ಧನ್ಯವಾದಗಳು ನಯನ ಬಜಕೂಡ್ಲು ಮೇಡಂ
Poetry means
Spontaneous overflow of powerful feelings
Or
Emotions recollected in tranquility
By William Wordsworth
ಕವಿತೆಯ ಚಂದದ ಅನಾವರಣ
ಹೌದು ಮೇಡಂ….. ಧನ್ಯವಾದಗಳು ಗಾಯತ್ರಿ ಮೇಡಂ ಗೆ
ಕವನದ ಅದ್ಭುತ ಶಕ್ತಿಯನ್ನು ಕವನ ರೂಪದಲ್ಲೇ ಪ್ರಸ್ತುತ ಪಡಿಸಿದ ಪರಿ ಅನೂಹ್ಯ!
ಧನ್ಯವಾದಗಳು ಶಂಕರಿ ಶರ್ಮ ಮೇಡಂ ಗೆ