ಕರಗದ ಆಶಾವಾದ
ಕಣ್ಣ ತುಂಬಿದ ಕನಸು
ಕಣ್ಣೀರಿನ ಹನಿಯಾಗಿ ಜಾರಿ ಹೋಗದಿರಲಿ
ದುಃಖ ಭರಿತ ಮನಸ್ಸಲ್ಲಿ
ಭರವಸೆಗಳು ಬತ್ತಿ ಒಣಗದಿರಲಿ
ಭಾರವಾದ ಹೃದಯದಲಿ
ನಾಳೆಗಳೆಂಬ ಮಿಡಿತಗಳು ನಿಲ್ಲದಿರಲಿ
ಮೇಲೇಳಲಾಗದ ಹೆಜ್ಜೆಗಳಲಿ
ಬದುಕೆಂಬ ತಾಳ ತಪ್ಪದಿರಲಿ
ಎಲ್ಲರ ಬಾಳಲ್ಲಿ
ಕವಿದ ಮೋಡಗಳು ಕರಗುವವು
ಬದಲಾವಣೆಯ ವರ್ಷ
ಮೈ ಮನಗಳಲಿ ತುಂಬುವುದು
ಮತ್ತೆ ತುಟಿ ಕಚ್ಚಿ ಬದುಕುವ ಛಲ
ಸಕಲ ಅವಯವಗಳಲಿ ಆವರಿಸುವುದು
-ಶರಣಬಸವೇಶ ಕೆ. ಎಂ
ಎಲ್ಲ ನೆಲೆಯಮೂಲ ಹೃದಯ ದಲ್ಲಿ ..ಮೂಡಿಸುವ ಸಕಾರಾತ್ಮಕ ಮಿಡಿತ..ಅರ್ಥ ಪೂರ್ಣ ವಾದ ಸಂದೇಶ ಹೊತ್ತ .ಕವಿತೆ…ಚೆನ್ನಾಗಿದೆ ಸಾರ್
ಕನಸುಗಳೆಂಬ ಜಾದೂಗಾರ ನಮ್ಮ ಬದುಕನ್ನ ವರ್ಣಮಯ ಮಾಡುವುದರಲ್ಲಿ ಸಂದೇಹವೇ ಇಲ್ಲ
ಚೆಂದದ ಕವಿತೆ
ಸುಂದರ ಕವನ. ಆಶಾವಾದ ವಿದೆ ಕವಿತೆಯಲ್ಲಿ
ಸಕಾರಾತ್ಮಕ ಭಾವವನ್ನು ಹುಟ್ಟುಹಾಕಬಲ್ಲ ಸಮರ್ಥ ಕವನ!
ಧನ್ಯವಾದಗಳು ನಾಗರತ್ನ ಮೇಡಂ, ಗಾಯತ್ರಿ ಮೇಡಂ, ನಯನ ಮೇಡಂ ಹಾಗೂ ಶಂಕರಿ ಶರ್ಮ ಮೇಡಂ ಅವರಿಗೆ
ಸಕಾರಾತ್ಮಕ ಪದ್ಯ ಚೆನ್ನಾಗಿ ಮೂಡಿಬಂದಿದೆ