ಬೆಳಕು-ಬಳ್ಳಿ

ಏಳನೇ ಋತು

Share Button

ಸೂರ್ಯೋದಯ..
ಒಂದು ಪ್ರಾಕೃತಿಕ ಪ್ರಸವವೇದನೆ
ಸೂರ್ಯಾಸ್ತಮಯ..
ನಾಳೆಯ ಉದಯಕ್ಕಾಗಿ ಪರಿತಪಿಸುವ ಶೋಧನೆ

ಉದಯಾಸ್ತಮಯಗಳ ಲೀಲಗಳು
ಜ್ವಲನ–ಅಜ್ವಲನ ದಹನಕೇಳಿಯ ಕೀಲಿಗಳು
ಕಾಲಗತಿಗಳ ಕಲಕಲ ಚಲನಗಳೆಲ್ಲ
ಕಾರ್ಯ–ಕಾರಕ ಸಂಬಂಧಗಳ ಬಿಂಬ–ಪ್ರತಿಬಿಂಬಗಳು

ಕತ್ತಲೆಗೆ ಕುಣಿತದ ಆತುರ ಹೆಚ್ಚು
ಬೆಳಕನ್ನು ನುಂಗಿದ್ದೇನೆಂದು ತಲ್ಲಣದಿಂದ ರಂಗೇರುತ್ತದೆ

ನಿಶಾಂತ ಸಂಕೇತಸ್ಥಳ ಸಾಕ್ಷಿಯಾಗಿ
ತಿಮಿರದ ಹೊಟ್ಟೆಯನ್ನು ಸೀಳಿ ಬಂದ ಕಿರಣಗಳ ಕಥೆಯನ್ನು
ಎಂದೆಂದಿಗೂ ವರ್ತಮಾನ ಹೊಸದಾಗಿ ಹೇಳುತ್ತದೆ

ಎಲೆ ಉದುರುವ ಕಾಲ ಅಶಾಶ್ವತ
ಕಾಲವೇ ವಸಂತಗಳನ್ನು ವಾಗ್ದಾನ ಮಾಡುತ್ತದೆ
ಸ್ವಲ್ಪ ನೀರು… ಸ್ವಲ್ಪ ಬೆಂಕಿ ಜೊತೆಗಿರಬೇಕು

ಕಲ್ಲು ಕಲ್ಲು ಒರೆಯುವ ಘರ್ಷಣೆಯಲ್ಲಿ
ಬೆಂಕಿಯನ್ನು ಮುಚ್ಚಿಟ್ಟಿರುವ ಪ್ರಕೃತಿಯೇ
ಬಿದ್ದ ಬೀಜಗಳಲ್ಲಿ ಕಲ್ಲುಗೋಡೆಗಳನ್ನು ಸೀಳಿ ಕೊಂಡು ಮೊಳೆಯುವ
ಜೀವಲಕ್ಷಣವನ್ನು ಅಡಗಿಸಿಕೊಂಡಿದೆ

ನದಿಗೆ ನಡೆಯುವುದೊಂದೇ ಗೊತ್ತು
ನೇರವಾಗಿಯೇ ಆಗಲಿ… ಇಲ್ಲದಿದ್ದರೆ
ಅಡ್ಡಿಗಳನ್ನು ಮೀರಿ ಅಂಕುಡೊಂಕಾಗಿ ಸಾಗುತ್ತಲೇ ಆಗಲಿ

ಎಷ್ಟು ದೌಡಾಯಿಸುವ ನದಿಯಾದರೂ
ಅನಿವಾರ್ಯತೆಯ ಅಣೆಕಟ್ಟು ಎದುರಾದಾಗ
ಗತಿಯನ್ನು ಶ್ರುತಿಗೊಳಿಸಬೇಕು
ಗಮನಾನಂತರದ ಗಾಯಗಳಿಗೆ ವಿಶ್ರಾಂತಿ ಕೊಡಬೇಕು

ಪ್ರಳಯದ ಘೋರ ರೋದನವಾಗಿ ಎದುರೇಳುವಾಗ
ಬೀಗ ಹಾಕಿದ ಬಾಗಿಲುಗಳು ವಿಶಾಲವಾಗಿ ತೆರೆಯುತ್ತವೆ
ರುವುಡಿ ರುವುಡಿಯಾಗಿ ಉಕ್ಕಿ ಹರಿಯುವ ನದಿ
ಬೀಡುಭೂಮಿಗಳನ್ನು ಬೀಜಭೂಮಿಗಳಾಗಿ ರೂಪಾಂತರಿಸುತ್ತದೆ

ಅಲೆಗಳು ಎಗಸಲಾಗದೆ ಅಲಸಿದಾಗ
ಕನಸು ಕಾಣುವ ಕಣ್ಣುಗಳು ಕಲತ ನಿದ್ರೆಯಲ್ಲಿ ಜೋಗುವಾಗ
ನವವಸಂತಗಳು ನಯಾಗರ ಜಲಪಾತಗಳಾಗಿ ತುಳುಕುವಾಗ
ಋತುಗಳೆಲ್ಲ ಘನೀಭವಿಸಿದ ಸ್ಮೃತಿಗಳಾಗುವಾಗ

ಕ್ಷಣಕಾಲದ ಸಮಯ
ಸಂಯಮನ ರಾಗವನ್ನು ಆಲಾಪಿಸಬೇಕು

ಗಾಯಗೊಂಡು ರಕ್ತಸ್ರಾವವಾದ ಕಾಲ
ಸಾವಿರ ಬಾಹುಗಳಿಂದ ಬೇಡಿಕೆ ಸಲ್ಲಿಸುವ
ಏಳನೇ ಋತುವಿಗಾಗಿ ಕಾಯಬೇಕು.

ತೆಲುಗು ಮೂಲ : ಗಾಜೋಜು ನಾಗಭೂಷಣಂ
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್

5 Comments on “ಏಳನೇ ಋತು

  1. ಪಂಚಭೂತಗಳನ್ನು ವರ್ಣಿಸುತ್ತಾ ಸಾಗುವ ಚಂದದ ಅನುವಾದಿತ ಕವನದ ಏಳನೇ ಋತುವಿನ ಕಲ್ಪನೆ ಸೊಗಸಾಗಿದೆ.

  2. ಕವಿತೆಯ ವಸ್ತುವೇ ಆಕರ್ಷಕ ಮತ್ತು ಚಿರಪರಿಚಿತವಾದರೂ
    ಅಭಿವ್ಯಕ್ತಿಸಿದ ರೀತಿ ನೂತನವಾಗಿದೆ.

    ಕವಿಯ ಕಣ್ಣು ಏನೆಲ್ಲವನೂ ಧರಿಸಿ ದೃಷ್ಟಿಸಿದೆ! ಸೋಜಿಗವಿದು.

    ಪ್ರಾಕೃತಿಕ ಪ್ರಸವವೇದನೆ ! ವ್ಹಾಹ್!!‌ ಎಂಥ ವ್ಯಾಖ್ಯಾನ !!! ನಾನಿನ್ನೂ ಅರಗಿಸಿಕೊಳ್ಳುತ್ತಿರುವೆ.

    ಕವಿತೆಯನು ಓದುವಷ್ಟೂ ಸಲ ಹೊಸ ಅರ್ಥ ಸ್ಫುರಿಸಿ, ಸಂಗತವಾಗುವುದೇ ಇದರ ಸಂಗತಿ.

    ಸೂಪರ್‌ ಸರ್‌, ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *