ಪ್ರವಾಸ

ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-9

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ದಿನ 6 : ಡಿಸ್ನಿ ಲ್ಯಾಂಡ್. 

ಮಾರನೆಯ ದಿನ ಯಥಾ ಪ್ರಕಾರ ಬೆಳಗಿನ ದಿನ ನಿತ್ಯದ ಕಾರ್ಯಕ್ರಮ ಮುಗಿಸಿ 9 ಗಂಟೆಗೆ ಸರಿಯಾಗಿ ಬಸ್ ಬಳಿ ಬಂದೆವು.  ಈ ದಿನ ನಮ್ಮ ಭೇಟಿ  ಡಿಸ್ನಿ ಲ್ಯಾಂಡ್.  ನಮಗೆ ಪ್ರವಾಸ ಆಯೋಜಕ ಕಂಪನಿ ಕೊಟ್ಟ ಪ್ರಾಥಮಿಕ ಮಾಹಿತಿ ಪ್ರಕಾರ ಇದು ಐಚ್ಚಿಕ ಕಾರ್ಯಕ್ರಮ ವಾಗಿದ್ದು,ಇದರ ಪ್ರವೇಶ ಶುಲ್ಕ ಮತ್ತು  ಇತರೆ ಖರ್ಚುಗಳನ್ನು ಪ್ರತ್ಯೇಕವಾಗಿ ಕೊಡಬೇಕೆಂದು ತಿಳಿಸಿದ್ದರು. ಆದರೆ ಹಾಗೇನು ಮಾಡಲಿಲ್ಲ., ನಮ್ಮ ಗೈಡ್ ಎಲ್ಲರಿಗೂ ಪ್ರವೇಶದ ಟಿಕೆಟ್ ಗಳನ್ನು ಪಡೆದು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿ ಒಳಗೆ ಕಳುಹಿಸಿದರು. ಬಸ್ ನಿಲ್ದಾಣದಿಂದ ಸುಮಾರು ದೂರ ಇದ್ದು ಅಲ್ಲಲ್ಲೇ ಚಲಿಸುವ ಕಾಲು ದಾರಿ (ಮೂವಿ೦ಗ್ ವಾಕ್ ವೇ, ಅಥವ ಟ್ರಾವಲೇಟರ್)  ವ್ಯವಸ್ಥೆ ಇದ್ದಿದರಿಂದ ನಮ್ಮ ನಡೆಯುವ ಶ್ರಮ ಸ್ವಲ್ಪ ಕಡಿಮೆ ಆಯಿತು. ನಮ್ಮ ಗೈಡ್ ನಮಗೆಲ್ಲ ಡಿಸ್ನಿಲ್ಯಾಂಡ್ ಪ್ಯಾರಿಸ್ ಎನ್ನುವ ಆಪನ್ನು ಡೌನ್ಲೋಡ್ ಮಾಡಿಕೊಳ್ಳಲು ತಿಳಿಸಿದ್ದು, ಅದರಲ್ಲಿ ಎಲ್ಲೆಲ್ಲಿ ಏನೇನು ಇದೆ ಎನ್ನುವ ಮಾಹಿತಿ ಇರುವುದಾಗಿಯೂ, ಮತ್ತು ಒಳಗಡೆ ಇರುವ ಎಲ್ಲ ಮನೋರಂಜನೆಯ ಆಟಗಳು, ಕಾರ್ಯಕ್ರಮಗಳು ಎಲ್ಲಾ ಉಚಿತ  ಎಂದು ತಿಳಿಸಿ, ನಮಗೆಲ್ಲರಿಗೂ ಮಧ್ಯಾಹ್ನದ ಊಟಕ್ಕೆ, ಊಟದ ಪ್ಯಾಕೆಟ್ ಗಳನ್ನು ಕೊಟ್ಟರು. ಅಮೆರಿಕಾ ದಿ೦ದ ಹೊರಗೆ,  ಇಡೀ ಪ್ರಪಂಚದಲ್ಲೇ ಜಪಾನ್ ನಲ್ಲಿರುವ ಡಿಸ್ನಿ ಲ್ಯಾಂಡ್ ಬಿಟ್ಟರೆ ಇದೇ ದೊಡ್ಡದು. ಸುಮಾರು 2100  ಹೆಕ್ಡೇರ್ಗಳಷ್ಟು ಪ್ರದೇಶದಲ್ಲಿ ಹರಡಿದೆ.. ಡಿಸ್ನಿಲ್ಯಾಂಡ್ ಪ್ಯಾರಿಸ್ –  ಪ್ಯಾರಿಸ್ ನಗರದಿ೦ದ ಸುಮಾರು 32 ಕಿಲೋಮೀಟರ್ ಪೂರ್ವಕ್ಕೆ ಇರುವ ಈ ಥೀಮ್ ಪಾರ್ಕ್ 1992 ರಲ್ಲಿ ಪ್ರಾರಂಭವಾಗಿದೆ. ಈ ಕೇಂದ್ರದಲ್ಲಿ ಎರಡು ಥೀಮ್ ಪಾರ್ಕ್ ಒಂದು  ಅಮ್ಯೂಸ್ಮೆ೦ಟ್ಪಾರ್ಕ್, ಇನ್ನೊಂದು ಡಿಸ್ನಿ ಸ್ಟುಡಿಯೋ,    ಏಳು ಹೋಟೆಲ್, ಎರಡು ಕನ್ವೆನ್ಷನ್ ಸೆಂಟರ್  ಒಂದು ಗಾಲ್ಫ್ ಮೈದಾನ ಇದ್ದು, 17000 ಉದ್ಯೋಗಿಗಳು ಕಾರ್ಯನಿರತರಾಗಿದ್ದಾರೆ. 

ಒಳಗಡೆ ಹೋದಮೇಲೆ ಸ್ವಲ್ಪ ದೂರದಲ್ಲಿ ಜನ ಎಲ್ಲಾ ಗುಂಪು ಗುಂಪಾಗಿ ಸೇರಿ ಏನೋ ನಿರೀಕ್ಷಣೆಯಲ್ಲಿದ್ದರು. ವಿಚಾರಿಸಿದಾಗ ಸ್ವಲ್ಪ ಹೊತ್ತಿನಲ್ಲಿ ಡಿಸ್ನಿ ಲ್ಯಾಂಡ್ ನಲ್ಲಿ ಬರುವ ಎಲ್ಲಾ ಪಾತ್ರಗಳ ಪ್ರದರ್ಶನದ ಮೆರವಣಿಗೆ ಬರುವುದಾಗಿ ತಿಳಿಸಿದರು. ನಾವು ಸಹಾ ಎಲ್ಲರ ಜೊತೆ  ಉತ್ಸವ ನೋಡಲು ನಿ೦ತೆವು . ಸ್ವಲ್ಪ ಸಮಯದಲ್ಲೇ ಉತ್ಸವ ಪ್ರಾರಂಭವಾಯಿತು., ನಾವು ಟಿವಿಯಲ್ಲಿ  ಮಕ್ಕಳ ಸೀರಿಯಲ್ ಗಳಲ್ಲಿ ನೋಡಿದಂತಹ ಪಾತ್ರಗಳ ವೇಷಧಾರಿಗಳು, ಸಂಗೀತ ಮತ್ತು ನೃತ್ಯದೊಂದಿಗೆ ಅಲ್ಲಿ ನೆರೆದಿದ್ದ ಜನರನ್ನು ರಂಜಿಸುತ್ತಿದ್ದರು. ಅದನ್ನು ನೋಡಿ, ಉತ್ಸವದ ಪೂರ್ತಿ ವಿಡಿಯೋ ಮಾಡಿ, ನಂತರ  ಮು೦ದುವರೆದೆವು.  ಮಧ್ಯಾಹ್ನದ ಹೊತ್ತಿಗೆ ಉದ್ಯಾನದ೦ತೆ ಇದ್ದ ಜಾಗದಲ್ಲಿ ನೀರಿನ ವ್ಯವಸ್ಥೆಯೂ ಇದ್ದುದರಿ೦ದ ನಮ್ಮ ಊಟದ ಪೊಟ್ಟಣಗಳನ್ನು ಬಿಚ್ಚಿ ಖಾಲಿ ಮಾಡಿದೆವು.   ಕಡೇ ಪಕ್ಷ ಅದನ್ನು(ಊಟದ ಪ್ಯಾಕೆಟ್) ಹೊತ್ತು ಓಡಾಡುವುದು ತಪ್ಪಿತು.  ಕೈಯಲ್ಲಿದ್ದ ಊಟ ಹೊಟ್ಟೆ ಸೇರಿತು. ಕೈ ಹಗುರವಾಯಿತು, ಹೊಟ್ಟೆ ಭಾರವಾಯಿತು.   ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದವರು, ಯುವಕರು, ತಮಗಿಷ್ಟವಾದ ಕಡೆ ಮನರಂಜನೆ ಪಡೆದು, ಬಹಳಷ್ಟು ಐಟಂಗಳು ಇದ್ದರೂ ಕೂಡ, ಜನಸಂದಣಿಯಿಂದಾಗಿ, ಬಹಳಷ್ಟು ಸಮಯ ಸರತಿ ಸಾಲಿನಲ್ಲಿ ಕಳೆದು, ಒಂದೊಂದು ಕಡೆ ಸುಮಾರು ಒಂದೊ೦ದು ಗಂಟೆ ಸಮಯ ಬೇಕಾಗುತ್ತಿತ್ತು. ಬಹಳಷ್ಟು ಜನ ಒಂದು ಅಥವಾ ಎರಡು ಕಡೆ ಹೋಗಿ ಬಂದರು. ನಾವು ಮಧ್ಯದಲ್ಲಿ ಮರದ ಕೆಳಗೆ ನೆರಳಿನಲ್ಲಿ ಕುಳಿತು ಹೋಗಿ ಬರುವವರನ್ನು ನೋಡುತ್ತಾ ಕುಳಿತಿದ್ದೆವು.   ಸಂಜೆಯಾಗುತ್ತಿದ್ದಂತೆ ನಿಧಾನವಾಗಿ ಹೊರಗೆ ಹೋಗುವ ದಾರಿಯನ್ನು ಹುಡುಕುತ್ತಾ ಹೊರಟೆವು.  ಕೊನೆಯಲ್ಲಿ ಒಂದು ಅಂಗಡಿ ತರಹದ ಮಳಿಗೆ ಇದ್ದದ್ದು  ಕಂಡು  ಅಲ್ಲಿ ಶಾಪಿ೦ಗ್ಮಾಡಲು ಹೋಗಿ ಮೊಮ್ಮಕ್ಕಳಿಗೆ  ಡಿಸ್ನಿ ಲ್ಯಾ೦ಡ್ ಪ್ಯಾರಿಸ್ ಎ೦ದು ಬರೆದ ಎರಡು ಟೀ ಶರ್ಟ್ಖರೀದಿ ಮಾಡಿ ಹೊರಗೆ ಬಂದು ಕುಳಿತು ಕೊ೦ಡೆವು.  ಆಗಲೇ ನಮ್ಮ ಗೈಡ್ ಕಾಯುತ್ತಿದ್ದರು.  ಎಲ್ಲರೂ ಬರುವವರೆಗೂ ಅಲ್ಲೇ ಕಾಯಬೇಕಾಗಿತ್ತು.  ಆ ಸಮಯದಲ್ಲಿ ಒಬ್ಬ ಕಲಾವಿದ ಏನೇನೋ ಬಣ್ಣದ ಪುಡಿಗಳನ್ನು ಮಿಶ್ರಣ ಮಾಡಿ ಕಲರಿಂಗ್ ಪೇಂಟಿಂಗ್ ತರಹ ಬಟ್ಟೆ ಮೇಲೆ ಮಾಡುತ್ತಿದ್ದ.  ಅವನ ಕಲೆಗೆ ಕೌಶಲ್ಯಕ್ಕೆ ತಲೆದೂಗಿ  ಮುಂದೆ ಹೊರಟೆವು.  ಬಸ್ನಲ್ಲಿ ಕುಳಿತು ನಮ್ಮ ವಾಸ್ತವ್ಯದ ಹೋಟೆಲ್ ಕಡೆಗೆ ಹೊರಟೆವು. .  ಅದಕ್ಕೂ ಮುಂಚೆ ದಾರಿಯಲ್ಲಿ ಭಾರತೀಯ  ರೆಸ್ಟೋರೆ೦ಟ್ನಲ್ಲಿ ರಾತ್ರಿಯ ಊಟ ಮುಗಿಸಿ,  ಜಂಗಲ್ ಹೋಟೆಲಿಗೆ ವಾಪಸ್.  . 

 ಇಲ್ಲಿಗೆ ಫ್ರಾನ್ಸ್ –  ಪ್ಯಾರಿಸ್ ನ ಎರಡು ದಿನದ ಪ್ರವಾಸ ಮುಕ್ತಾಯವಾಯಿತು. 

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44575

ಟಿ.ವಿ.ಬಿ.ರಾಜನ್ , ಬೆಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *