Author: Savitri Shyanbog, savitrigaitonde@gmail.com
ಕಾಲೇಜು ಮುಗಿಯುತ್ತಲೇ ಮದುವೆ ಗೊತ್ತಾದ ಕಾರಣ ನನ್ನ ಮದುವೆಗೆ ಕಾಲೇಜಿನ ಎಲ್ಲ ಗೆಳೆಯ ಗೆಳತಿಯರು ಆಗಮಿಸಿದ್ದರು.ಈಗ ಒಬ್ಬೊಬ್ಬರೇ ಮದುವೆಯಾಗಿ ಈ ಸದ್ಯ ಗೆಳೆಯನೊಬ್ಬನ ಮದುವೆ ಗೊತ್ತಾಯಿತು. ನಾನಾ ಕಾರಣಗಳಿಂದ ಒಂದೆರಡು ಗೆಳತಿಯರ ಮದುವೆಗಷ್ಟೇ ನನಗೂ ಹೋಗಲಾಯಿತು.ಈ ಮದುವೆಗಾದರೂ ಹೋಗೋಣ ಎಂದು ಉಳಿದ ಗೆಳತಿಯರನ್ನು ಕೇಳಿದರೆ ನಾದಿನಿ ಮನೆಯಲ್ಲಿ...
ಹೂವಿನ ಗಿಡ,ಹೂವು ಯಾರಿಗೆ ಇಷ್ಟವಿಲ್ಲ.ದೇವರ ಪೂಜೆಗೆ,ಮನೆಯ ಅಲಂಕಾರಕ್ಕೆ,ಹಬ್ಬದ ದಿನ ರಂಗೋಲಿ ಸಿಂಗರಿಸಲು,ಜಡೆಗೆ ಮುಡಿಯಲು, ಹೀಗೆ ನಾನಾ ಕಾರಣಗಳಿಗಾಗಿ ಹೂವುಬಳಕೆಯಾಗುತ್ತದೆ. ಹೂವಿಗೂ ಒಂದೊಂದು ತೃಪ್ತಿ, ತಾನು ದೇವರ ಪಾದ ಸೇರಿದೆ, ಹೆಣ್ಣಿನ ಮುಡಿಗೇರಿದೆ ಎಂಬ ಸಂತೋಷದಿಂದ ಅರಳಿ,ಸುವಾಸನೆಯೂ ಬೀರುವುದು.ಇಷ್ಟಲ್ಲದೇ ಗಿಡದಲ್ಲಿ ಉಳಿದರೂ,ಗಿಡಕ್ಕೆ ಇನ್ನೂ ಅಂದವನ್ನು ನೀಡುವುದು. ಹೂವನ್ನು ಬಿಡಿಯಾಗಿ,ಹಿಡಿಯಾಗಿ,ದಾರದಲ್ಲಿ...
ಹೇ…ಪ್ಲವವೇ, ನಿನಗೇಕೆ ಸಂವತ್ಸರ ಅರಸಿಯ ಪಟ್ಟವೇ..? ಆ ನಿನ್ನ ಹಿರಿಯ ಅರಸಿ ಶಾರ್ವರಿ ತೋರಿಸಿ ಕೊಟ್ಟಿಹ, ಕೊರೋನಾಸುರನ ಏಕೆ ವರಿಸಿ?? ಅವನು ನೀಡುತ್ತಿರುವುದೇನು? ಕಾಟ ಉಪಟಳ ಕಡಿಮೆ ಏನು?! ಲಾಕ್ಡೌನ್ ಕಾಲೇ, ಸೀಲ್ಡೌನ್ ಮಾಸೇ, ಕ್ವಾರಂಟೈನ್ ಪಕ್ಷೇ, ‘ಮಾಸ್ಕ್’ ದಿನವೇ! ನಿನ್ನ ಪಂಚಾಂಗ ಓದು ನಡೆಸಲು ಸಹ...
ಕೊರೊನಮ್ಮ ನಿನ್ನ ಮಹಿಮೆ ಅಪಾರ. ನಿನ್ನಯ ಮೇಲಿನ ಭಕುತಿಯಿಂದ 3 ಮೀಟರ್ ಅಂತರ ಕಾಪಾಡಿಕೊಂಡೇ ನಿನ್ನ ನಮಿಸಲು ತಯಾರಾಗಿಹರು. ನಿನ್ನ ಈ ನಿಯಮ ಮೀರಿ ಪೂಜಿಸದೇ ಬಂದಿಹ ನಿನ್ನ ಭಕುತರಿಗೆ ನೀನು ನೀಡುವ ಮಹಾನ್ ಶಿಕ್ಷೆಗೆ ಹೆದರಿಹರು. ಜಾತಿ,ಮತ,ಭಾಷೆಗಳ ಬೇಧವ ಮರೆತು ಜನಸಾಗರವಿಂದು ಒಂದಾಗಿಹುದು. ಕರೆಯದೇ ಬಾರದ...
ಪುಸ್ತಕ : ತೆರೆದಂತೆ ಹಾದಿ ಲೇಖಕರು: ಜಯಶ್ರೀ ಕದ್ರಿ ಪ್ರಕಾಶನ:ಕೃತಿ ಆಶಯ ಪಬ್ಲಿಕೇಶನ್ ಬೆಲೆ:150 ಸುಧಾ ಮೂರ್ತಿಯವರ ‘ಯಶಸ್ವಿ’ ಕಾದಂಬರಿ ಮತ್ತು ಮಿಷನ್ ಮಂಗಲ್ ಸಿನಿಮಾ ನೋಡಿದೆ. ಅದರಲ್ಲೇನು ವಿಶೇಷ, ಸಾಮ್ಯತೆ ಎಂದು ಕೇಳುವೀರೇನೋ? ನನಗೆ ಮಹಿಳೆಯರು ತಮ್ಮ ಕಾರ್ಯಕ್ಷೇತ್ರದಲ್ಲಿ, ಅಲ್ಲದೇ ಹೌಸ್ ವೈಫ್ ಆದರೂ ಮನೆಯಲ್ಲಿ ಮಾಡುವ...
ಕೊರೊನಾ ರಜೆಯಲ್ಲಿ ಸಮಯದ ಸದುಪಯೋಗಕ್ಕೆಂದು ಈ ಹಿಂದೆ ಪೇರಿಸಿಟ್ಟ ಪುಸ್ತಕಗಳನ್ನು ಓದುವ ಸಮಯ.ಹಾಗೆ ಕೈಗೆತ್ತಿಕೊಂಡ ಪುಸ್ತಕಗಳಲ್ಲಿ ಯಾವುದನ್ನು ಓದಲಿ ಎಂಬ ಗೊಂದಲದ ನಡುವೆ ಚಂದದ ಮುಖಪುಟ ಹೊಂದಿರುವ ಪುಸ್ತಕವೊಂದ ಕೈಗೆತ್ತಿಕೊಂಡೆ.ಪುಸ್ತಕದ ಹೊದಿಕೆ ನೋಡಿ ನಿರ್ಧರಿಸಬಾರದಾದರೂ ಅದ್ಯಾಕೋ ಓದೋಣವೆಂದು ಮುಖಪುಟದಲ್ಲಿರುವ ಹುಡುಗಿ ಈ ಪುಸ್ತಕವನ್ನೇ ಓದು ಎಂದು ಹೇಳಿದಂತಾಯಿತು....
‘ಫೆರಾರಿ ಮಾರಿದ ಫಕೀರ'(Monk who sold his Ferrari) ಎಂಬ ರೋಬಿನ್ ಶರ್ಮಾರವರ ಪುಸ್ತಕದಲ್ಲಿ ಏನನ್ನಾದರೂ ಸಾಧಿಸಲು ಇಪ್ಪತ್ತೊಂದು ದಿನ ಪ್ರಯತ್ನ ಪಟ್ಟರೆ ಮಾರನೇ ದಿನ ಪ್ರಯತ್ನ ಪಡದೇ ಆ ಕೆಲಸವನ್ನು ನಾವು ಮಾಡುತ್ತೇವೆ, ಎಂಬುದನ್ನು ಎತ್ತಿ ತೋರಿಸಿದ್ದಾರೆ. ಹೌದು,ನಮಗೀಗ ಕೊರೊನಾ ರಜೆಯೆನ್ನಬೇಕೋ, ಲಾಕ್ ಡೌನ್ ಎನ್ನಬೇಕೋ ದೊರೆತಿದೆ. ಕೆಲವರಿಗೆ ಮನೆಯವರೊಂದಿಗೆ ಕಾಲ...
ನಿಮ್ಮ ಅನಿಸಿಕೆಗಳು…