ಹೇ…ಪ್ಲವವೇ,
ನಿನಗೇಕೆ ಸಂವತ್ಸರ
ಅರಸಿಯ ಪಟ್ಟವೇ..?
ಆ ನಿನ್ನ ಹಿರಿಯ ಅರಸಿ
ಶಾರ್ವರಿ ತೋರಿಸಿ
ಕೊಟ್ಟಿಹ,
ಕೊರೋನಾಸುರನ ಏಕೆ ವರಿಸಿ??
ಅವನು ನೀಡುತ್ತಿರುವುದೇನು?
ಕಾಟ ಉಪಟಳ
ಕಡಿಮೆ ಏನು?!
ಲಾಕ್ಡೌನ್ ಕಾಲೇ,
ಸೀಲ್ಡೌನ್ ಮಾಸೇ,
ಕ್ವಾರಂಟೈನ್ ಪಕ್ಷೇ,
‘ಮಾಸ್ಕ್’ ದಿನವೇ!
ನಿನ್ನ ಪಂಚಾಂಗ ಓದು
ನಡೆಸಲು ಸಹ
ಸ್ಯಾನಿಟೈಸರ್ ಬೇಕಿಹುದು!
ದುರ್ಗಿಯಾಗು ನೀ,
ಯುಗಾದಿ ಕಳೆಯಿತಲ್ಲ,
ಕೋಟಿ ಜನ ನಿನ್ನ
ದಾಸನಾಗಲು ಕಾದಿಹರಲ್ಲ!
-ಸಾವಿತ್ರಿ ಶ್ಯಾನುಭಾಗ್
ಚೆನ್ನಾಗಿದೆ
ವಾವ್ ಸೊಗಸಾದ ಕವನ ದುಷ್ಟಧಮನಿಯಾದ ದೇವಿಗೊಂದು ಸರ್ವರಕ್ಷಣೆಗಾಗಿ ವಿನಂತಿ.ಅಭಿನಂದನೆಗಳು ಗೆಳತಿ.
dhanyavadagalu
ಪ್ಲವ, ದುರ್ಗಿಯಾಗಿ ಕರೋನಾವನ್ನು ದಮನಿಸಲಿ ಎಂಬ ನಿಮ್ಮ ಸದಾಶಯ ನೆರವೇರುವಂತಾಗಲಿ. ಸದಭಿರುಚಿಯ ಕವನ.
ಕೊರೋನ ಕವನ ಚೆನ್ನಾಗಿದೆ!
ಅರ್ಥಪೂರ್ಣವಾದ ಕವನ