Author: Irappa Bijali, irappambijalibnagar@gmail.com
ರನ್ನ ಚಿನ್ನದ ನಾಡು
ಕನ್ನಡ ನಾಡಿದು ಚಿನ್ನದ ಬೀಡಿದು ರನ್ನನು ಜನಿಸಿದ ಪುಣ್ಯನೆಲ| ಪೊನ್ನನು ಪಾಡಿದ ಜನ್ನನು ಪೊಗಳಿದ ಕನ್ನಡ ನಾಡಿನ ಪುಣ್ಯಜಲ||೧|| ತೆಂಗನು ಬೆಳೆಯುವ ಕಂಗನು ತೆಗೆಯುವ ರಂಗಲಿ ನಾಡಿದು ರಮಣಿಯವು| ಗಂಗೆಯ ರೂಪದಿ ತುಂಗೆಯು ಹರಿಯುವ ಸಂಗನ ಬಸವನ ತಾಣವಿದು ||೨|| ಕಲಿಯಲು ಸರಳವು ಸುಲಿದಾ ಹಣ್ಣಿದು ಕಲಿಗಳ...
ಭಾಗ್ಯದಾತೆ ಭರತ ಮಾತೆ
ಭಾಗ್ಯದಾತೆಯೆ ಭರತ ಮಾತೆಯೆ ನಿನ್ನ ಚರಣಕೆ ನಮಿಸುವೆ ಸೌಖ್ಯದಾತೆಯೆ ಜನ್ಮ ದಾತೆಯೆ ನಿತ್ಯ ನಿನ್ನನು ಜಪಿಸುವೆ||ಪ|| ವೀರ ಶೂರರ ಧೀರ ಮಾತೆಯೆ ವಿಶ್ವ ವಂದಿತೆ ಜನನಿಯೆ ಸಾಧು ಸಜ್ಜನ ಪುರುಷರುದಿಸುತ ಕೀರ್ತಿಬೆಳಗಿದ ಮಾತೆಯೆ||೧|| ಸರ್ವಧರ್ಮವು ಒಂದೆ ಎಂದಿಗು ಅರಿತು ಬದುಕುವ ಭಾರತ ಕರ್ಮನಿಷ್ಠೆಯ ಜಗಕೆ ಸಾರುವ ಕರ್ಮಭೂಮಿಯು...
ಶಾಂತಿದೂತ ಗೌತಮಬುದ್ಧ
ಆಸೆಯೇ ದುಃಖದ ಮೂಲವೆಂದು ನುಡಿದನು ಸಿದ್ಧಾರ್ಥ ಶಾಶ್ವತ ನೆಮ್ಮದಿಗಾಗಿ ಅರಮನೆಯನು ತೊರೆದನು ಸಿದ್ಧಾರ್ಥ।। ಕಾಡುಮೇಡುಗಳ ಅಲೆದರೂ ನಿರ್ಮಲ ಪ್ರೀತಿ ದೊರೆಯಲಿಲ್ಲ ಜಗದ ವ್ಯಾಧಿಗಳಿಗೆ ಔಷದಿ ಅರಸುತ ಹೋದನು ಸಿದ್ಧಾರ್ಥ ।। ಜನನ ಮರಣಗಳ ನಡುವಿನ ಕೃತಕ ಸುಖದ ಪೊರೆ ಕಳಚ ಹೊರಟನು, ಗಯಾದ ಭೋಧಿ ವೃಕ್ಷದಡಿಯಲಿ ಗೌತಮ ಬುದ್ಧನಾದನು...
ಹೆಣ್ಣಿನ ಹಿರಿಮೆ
ಹೆಣ್ಣೆಂದರೆ ಹುಣ್ಣಿಮೆ ಶಶಿಯು ಹೂಕಂಡರೆ ಚಿಮ್ಮುವ ಖುಶಿಯು ಪ್ರಕೃತಿಯ ಸೌಂಧರ್ಯ ರಾಶಿಯು ವಿಕೃತಿಯ ಮರ್ಧಿಸುವ ಶಕ್ತಿಯು ।। . ಸಹನೆಯ ಶರಧಿಯಿವಳು ಸುಸೇವೆಯ ವಾರಿಧಿಯಿವಳು ಸೌಂಧರ್ಯದ ಶ್ರೀನಿಧಿಯಿವಳು ಸ್ವರ ಲೋಕದ ಸನ್ನಿಧಿಯಿವಳು।। . ಹೆಣ್ಣಲ್ಲವೇ ಸೃಷ್ಟಿಯ ಮೂಲ ಸ್ತ್ರೀಯಲ್ಲವೇ ದೃಷ್ಟಿಯ ಮೂಲ ಹೆಣ್ಣಲ್ಲವೇ ನಮ್ಮ ಹಡೆದ ತಾಯಿ...
ಪುಟ್ಟನ ಜಂಬೂಸವಾರಿ
ಆನೆ ಬಂತು ಆನೆ ಭಾರಿ ಗಾತ್ರದ ಆನೆ ದೊಡ್ಡಹೊಟ್ಟೆ ಆನೆ ಸಣ್ಣ ಕಣ್ಣಿನ ಆನೆ ।। ಉದ್ದನೆಯ ಸೊಂಡಿಲು ಇರುವುದು ಒಂದೇ ಹಲ್ಲು ಚೊಕ್ಕದಾದ ಚಿಕ್ಕ ಬಾಲ ಮೊರದಂತೆ ಕಿವಿಯಗಲ।। ಹಣ್ಣಂಗಡಿಗೆ ಬಂತು ಆನೆ ಕಂಡಿತು ಅಲ್ಲಿ ಬಾಳೆಗೊನೆ ಎರಡಣ್ಣು ಕೊಟ್ಟಮಾಲೀಕನೆ ತಿಂದು ಹೊರಟಿತು ಸುಮ್ಮನೆ ।।...
ಗಜಲ್ : ರಥಸಪ್ತಮಿ
‘ ರಥಸಪ್ತಮಿಲಿ ಅಶ್ವರಥವೇರಿದ ಭಾಸ್ಕರ ಬಾನಿನಲ್ಲಿ ಪಥವ ಬದಲಿಸಿದ ಭಾಸ್ಕರ।। ಜೀವರಾಶಿಗಳಲಿ ನವಚೈತನ್ಯ ತುಂಬಿದನು ಧರಣಿಯಲಿ ನವ ಪ್ರಭೆ ಚೆಲ್ಲಿದ ಭಾಸ್ಕರ।। ಬಾಳ ಕಷ್ಟಗಳು ಮಂಜಿನ ಹನಿಯಂತೆ ಕರಗಿದವು ನೊಂದ ಮನಗಳಲಿ ನಗುವ ಮೂಡಿಸಿದ ಭಾಸ್ಕರ ।। ರತ್ನದಂತ ಹೊನ್ನರಥದಲಿ ಬಂದನು ನೇಸರ ಸೃಷ್ಟಿಯ ರಹಸ್ಯಗಳನ್ನು ಭೇದಿಸಿದ...
ನಿಮ್ಮ ಅನಿಸಿಕೆಗಳು…