ಹೆಣ್ಣಿನ ಹಿರಿಮೆ

Share Button

ಹೆಣ್ಣೆಂದರೆ ಹುಣ್ಣಿಮೆ ಶಶಿಯು
ಹೂಕಂಡರೆ ಚಿಮ್ಮುವ ಖುಶಿಯು
ಪ್ರಕೃತಿಯ ಸೌಂಧರ್ಯ ರಾಶಿಯು
ವಿಕೃತಿಯ ಮರ್ಧಿಸುವ ಶಕ್ತಿಯು ।।
.
ಸಹನೆಯ ಶರಧಿಯಿವಳು
ಸುಸೇವೆಯ ವಾರಿಧಿಯಿವಳು
ಸೌಂಧರ್ಯದ ಶ್ರೀನಿಧಿಯಿವಳು
ಸ್ವರ ಲೋಕದ ಸನ್ನಿಧಿಯಿವಳು।।
.
ಹೆಣ್ಣಲ್ಲವೇ ಸೃಷ್ಟಿಯ ಮೂಲ
ಸ್ತ್ರೀಯಲ್ಲವೇ ದೃಷ್ಟಿಯ ಮೂಲ
ಹೆಣ್ಣಲ್ಲವೇ ನಮ್ಮ ಹಡೆದ ತಾಯಿ
ಓ ಸ್ತ್ರೀ ನೀನೆಷ್ಟು ತ್ಯಾಗಮಯಿ..! ।।
.
ಹೆಣ್ಣುಟ್ಟಲು ಮೂಗು ಮುರಿಯಬ್ಯಾಡ
ಜಗದುಟ್ಟಿಗೆ ಕಾರಣ ಅರಿಯೋ ಮೂಢ
ಹೆಣ್ಣಲ್ಲವೇ ಶಾಂತಿಯ ಸ್ವರೂಪ
ಸ್ತ್ರೀಯಲ್ಲವೇ  ಜ್ಯೋತಿಯ ರೂಪ।।
.
ಮನೆ ಬೆಳಗುವ ತಾರೆಯಿವಳು
ಮನ ಬೆಳಗುವ ನೀರೆಯಿವಳು
ಸಂಸಾರದ ರೂವಾರಿ ಯಿವಳು
ಸಂಸ್ಕಾರದ ಧಾರೆಯು ಯಿವಳು।।
.
ಸರ್ವರಂಗದಿ ದುಡಿಯುವ ಪಾತ್ರ
ಕಾಯಕ ನಿಷ್ಠಯೆ ಇವಳ ಸೂತ್ರ
ಹೆಣ್ಣಿನ ಹಿರಿಮೆ ಮೇರು ಪರ್ವತ
ಸ್ತ್ರೀ ಶಕ್ತಿಯ ತಿಳಿಯೋ ಸನ್ಮಿತ್ರ.! ।।
.
ಜಗಕೆಲ್ಲವೂ ಇವಳದೆ ಸ್ಪೂರ್ತಿ
ಮುಗಿಲಗಲವು ಇವಳದೆ ಕೀರ್ತಿ
ಇಳೆಯಲ್ಲಿಯೇ ನೀನೇ ಮಾನ್ಯ
ನೀನಿಲ್ಲದೇ ಈ ಜಗವೆ ಶೂನ್ಯ ।।
.
– ಈರಪ್ಪ ಬಿಜಲಿ

PC: ಸಾಂದರ್ಭಿಕ ಚಿತ್ರ, ಅಂತರ್ಜಾಲ ಕೃಪೆ

4 Responses

  1. Rahul says:

    Supper

  2. ನಯನ ಬಜಕೂಡ್ಲು says:

    ಆದರೆ ಈಗಲೂ ಬಹಳಷ್ಟು ಜನ ಹೆಣ್ಣು ತ್ಯಾಗಮಯಿ ಅನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ ಕಾರಣ ಗಂಡಿನ ನಾನೇ ಶ್ರೇಷ್ಠ ಅನ್ನುವ ಅಹಂ. ಎಷ್ಟೇ ಕಾಲ ಬದಲಾದರೂ, ಸತ್ಯ ಕಣ್ಣ ಮುಂದೆ ಇದ್ದರೂ ಈ ವಿಚಾರ ದಲ್ಲಿ ಬದಲಾವಣೆ ಆಗಲಾರದೇನೋ.

  3. Shankari Sharma says:

    ಹೆಣ್ಣಿನ ಸಾರ್ವಕಾಲಿಕ ಶ್ರೇಷ್ಠತೆಯ ಬಗ್ಗೆ ಮನದಟ್ಟು ಮಾಡಿರುವ ಸುಂದರ ಕವನ.

  4. R.A.Kumar says:

    ಹೆಣ್ಣಿನ ಬಗೆಗೆ ಒಂದು ಒಳ್ಳೆಯ ಕವನ ಮೇಡಂ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: