ಭಾಗ್ಯದಾತೆ ಭರತ ಮಾತೆ
ಭಾಗ್ಯದಾತೆಯೆ ಭರತ ಮಾತೆಯೆ
ನಿನ್ನ ಚರಣಕೆ ನಮಿಸುವೆ
ಸೌಖ್ಯದಾತೆಯೆ ಜನ್ಮ ದಾತೆಯೆ
ನಿತ್ಯ ನಿನ್ನನು ಜಪಿಸುವೆ||ಪ||
ವೀರ ಶೂರರ ಧೀರ ಮಾತೆಯೆ
ವಿಶ್ವ ವಂದಿತೆ ಜನನಿಯೆ
ಸಾಧು ಸಜ್ಜನ ಪುರುಷರುದಿಸುತ
ಕೀರ್ತಿಬೆಳಗಿದ ಮಾತೆಯೆ||೧||
ಸರ್ವಧರ್ಮವು ಒಂದೆ ಎಂದಿಗು
ಅರಿತು ಬದುಕುವ ಭಾರತ
ಕರ್ಮನಿಷ್ಠೆಯ ಜಗಕೆ ಸಾರುವ
ಕರ್ಮಭೂಮಿಯು ಭಾರತ||೨||
ದಾಸ ಪಂಕ್ತಿಯ ಸ್ಪೂರ್ತಿ ಸೆಲೆಯು
ಮೂಲೆ ಮೂಲೆಗು ಹರಡಲಿ
ರಾಮ ಜನಿಸಿದ ಪುಣ್ಯನೆಲದಲಿ
ರಾಮ ರಾಜ್ಯವು ಮೆರೆಯಲಿ||೩||
ಅಣ್ಣ ಬಸಣ್ಣ ಬರೆದ ವಚನವು
ಲೋಕವೆಲ್ಲವು ಸ್ತುತಿಸಲಿ
ಗಡಿಯ ಕಾಯುವ ವೀರ ಕಲಿಗಳು
ವೈರಿ ನೆತ್ತರು ಹರಿಸಲಿ||
ವಿಜಯ ಸಾಧಿಸಿ ದೇಶಕೆ ಕೀರ್ತಿ
ತಂದು ತೋಷವ ಸವಿಯಲಿ
ಕೇಸರಿ ಬಿಳಿಯ ಹಸಿರು ಬಣ್ಣದ
ಧ್ವಜ ಹಾರಿಸಿ ವಂದಿಸಲಿ||
-ಈರಪ್ಪ ಬಿಜಲಿ
.
.
ಮನದಲ್ಲಿ ದೇಶ ಪ್ರೇಮವನ್ನು ಜಾಗೃತ ಗೊಳಿಸುವಂತಹ ಸಾಲುಗಳು. ಮೇರಾ ಭಾರತ್ ಮಹಾನ್.