ಪುಟ್ಟನ ಜಂಬೂಸವಾರಿ
ಆನೆ ಬಂತು ಆನೆ
ಭಾರಿ ಗಾತ್ರದ ಆನೆ
ದೊಡ್ಡಹೊಟ್ಟೆ ಆನೆ
ಸಣ್ಣ ಕಣ್ಣಿನ ಆನೆ ।।
ಉದ್ದನೆಯ ಸೊಂಡಿಲು
ಇರುವುದು ಒಂದೇ ಹಲ್ಲು
ಚೊಕ್ಕದಾದ ಚಿಕ್ಕ ಬಾಲ
ಮೊರದಂತೆ ಕಿವಿಯಗಲ।।
ಹಣ್ಣಂಗಡಿಗೆ ಬಂತು ಆನೆ
ಕಂಡಿತು ಅಲ್ಲಿ ಬಾಳೆಗೊನೆ
ಎರಡಣ್ಣು ಕೊಟ್ಟಮಾಲೀಕನೆ
ತಿಂದು ಹೊರಟಿತು ಸುಮ್ಮನೆ ।।
ಆನೆ ನೋಡಲು ಬಲು ಇಷ್ಟ
ಹತ್ತಿರ ಹೋಗಲು ತುಂಬಾ ಕಷ್ಟ
ನಮ್ಮ ಪುಟ್ಟನು ಬಹಳ ದಿಟ್ಟ
ಆನೆ ಸೊಂಡಿಲು ಮುಟ್ಟೆಬಿಟ್ಟ ।।
ಕಬ್ಬು ಕೊಬ್ಬರಿ ಅದಕೆ ಇಟ್ಟ
ದಕ್ಷಿಣೆ ಹುಂಡಿಕಾಸು ಕೊಟ್ಟ
ಆನೆಯ ಮೇಲೆ ಕುಳಿತೆ ಬಿಟ್ಟ
ಜಂಬೂಸವಾರಿ ಮಾಡಿದ ಪುಟ್ಟ ।।
-ಈರಪ್ಪ, ಬಿಜಲಿ
ಈ ಕವನ ಜಂಬೂ ಸವಾರಿ,
ಪ್ರೇರಣೆ ಸುತ್ತಾಡಲು ಮನ
ಬಣ್ಣದ ಕನಸಿನ ತೇರನ್ನೇರಿ. Nice
ದೊಡ್ಡ ಆನೆಗಾಗಿ ಪುಟ್ಟ ಸುಂದರ ಕವನ.