ಶಾಂತಿದೂತ ಗೌತಮಬುದ್ಧ
ಆಸೆಯೇ ದುಃಖದ ಮೂಲವೆಂದು ನುಡಿದನು ಸಿದ್ಧಾರ್ಥ
ಶಾಶ್ವತ ನೆಮ್ಮದಿಗಾಗಿ ಅರಮನೆಯನು ತೊರೆದನು ಸಿದ್ಧಾರ್ಥ।।
ಕಾಡುಮೇಡುಗಳ ಅಲೆದರೂ ನಿರ್ಮಲ ಪ್ರೀತಿ ದೊರೆಯಲಿಲ್ಲ
ಜಗದ ವ್ಯಾಧಿಗಳಿಗೆ ಔಷದಿ ಅರಸುತ ಹೋದನು ಸಿದ್ಧಾರ್ಥ ।।
ಜನನ ಮರಣಗಳ ನಡುವಿನ ಕೃತಕ ಸುಖದ ಪೊರೆ ಕಳಚ ಹೊರಟನು,
ಗಯಾದ ಭೋಧಿ ವೃಕ್ಷದಡಿಯಲಿ ಗೌತಮ ಬುದ್ಧನಾದನು ಸಿದ್ಧಾರ್ಥ ।।
ಪಿಟಿಕಗಳ ಮೂಲಕ ಜನತೆಗೆ ಉಪದೇಶ ಮಾಡಲು ಶಿಷ್ಯರನು ಕಳಿಸಿದನು,
ಬದುಕಲಿ ಆರ್ಯಸತ್ಯಗಳು ಮೋಕ್ಷದ ಮಾರ್ಗಗಳೆಂದನು ಸಿದ್ಧಾರ್ಥ ।।
ಲೋಕಕೆ ಮಹಾಪರಿನಿರ್ವಾಣವ ಪ್ರತಿಬಿಂಬಿಸಿದನು ಶಾಂತಿಧೂತ,
ಬಿಜಲಿಯ ಪದಗಳ ಲಾಲಿತ್ಯದೊಳಗೆಅಜರಾಮರನಾದನು ಸಿದ್ದಾರ್ಥ।।
-ಈರಪ್ಪ ಬಿಜಲಿ
ತಮವನ್ನು ದೂರವಾಗಿಸುವಂತಹವು ಗೌತಮನ ತತ್ವಗಳು.
ಬುದ್ದನ ಕವನ ಮನ ಹಿಡಿಸಿತು.ಸುಫರ್ ಧನ್ಯವಾದಗಳು
ಸಕಾಲಿಕ ಗಝಲ್ ತುಂಬಾ ಇಷ್ಟವಾಯಿತು.