ಸಂಕ್ರಾಂತಿ
ಎಲ್ಲೆಲ್ಲೂ ಸಡಗರವೋ ಸಂಭ್ರಮ
ಮನೆಮನಗಳೆಲ್ಲಾ ಘಮ ಘಮ
ಬೇರೆ ಹಬ್ಬವಿಲ್ಲ ಸಂಕ್ರಾಂತಿಗೆ ಸಮ
ಅವಿಭಕ್ತ ಕುಟುಂಬದಿ ಬಂಧುಗಳ ಸಮಾಗಮ।।
ಸುಗ್ಗಿ ಕಾಲ ಹಿಗ್ಗನು ತಂದಿತು ನೋಡ
ಹುಗ್ಗಿ ತುಪ್ಪ,ಹೋಳಿಗೆ ಕಡುಬು ನೋಡ
ಭತ್ತದ ರಾಶಿಗೆ ಭಕ್ತಿಯ ಪೂಜೆ ಮಾಡಿ
ದವಸದಾನ್ಯಗಳ ಎಲ್ಲರಿಗು ಹಂಚಿಕೆಮಾಡಿ
ಬದುಕಿನ ಸಿಹಿಕಹಿ ನೆನಪುಗಳ ಸ್ಮರಿಸಿ
ಸವಿನೆನಪು ನೆನೆದು ಕಹಿ ನೆನಪು ತ್ಯಜಿಸಿ
ಎಳ್ಳು ಬೆಲ್ಲ ಅಚ್ಚನು ಸಂತಸದಿ ಬೆರೆಸಿ
ಬಂಧುಭಾಂದವರೆಲ್ಲ ಪರಸ್ಸರ ಸೇವಿಸಿ।।
ಅಜ್ಜಿಯು ಮಾಡಿದಳು ಕಡುಬಿನ ಹೂರಣ
ಅಪ್ಪನು ಹಾಕಿದ ಬಾಗಿಲಿಗೆ ತೋರಣ
ದೊಡ್ಡಮ್ಮಳು ಕರಿದ ಸಂಡಿಗೆ ಅಪ್ಪಳ
ಚಿಕ್ಕಮ್ಮನು ಹಾಕಿದಳು ಕುರ್ ಕುರ್ ಚಕ್ಕುಲಿ।।
ಅವಿಭಕ್ತ ಕುಟುಂಬದ ಅಕ್ಕರೆಯೇ
ಸಕ್ಕರೆಯ ಸಿಹಿ ಸಂಕ್ರಾಂತಿ
ಬಂಧುಬಳಗದ ಮಮತೆ ಕರುಣೆ
ಮನದಲ್ಲಿ ತುಂಬಿತು ಸಂಪ್ರೀತಿ।।
ಬದುಕಿನ ಕಹಿ ಘಟನೆ ಮರೆತು
ಎಲ್ಲರೊಳು ಒಂದಾಗಿ ಬೆರೆತು ಸಹಬಾಳ್ವೆಯ ತತ್ವವ ಕಲಿತು
ಬಾಳಲು ಸುಂದರ ಬದುಕು।।
-ಈರಪ್ಪ ಬಿಜಲಿ
ನನ್ನ ಕವನ ಪ್ರಕಟಿಸಿರುವ ಸುರಹೊನ್ನೆ ಸಾಮಾಜಿಕ ಜಾಲತಾಣಕ್ಕೆ ಹೃತ್ಪೂರ್ವಕವಾದ ಧನ್ಯವಾದಗಳುಸರ
ಸಕ್ಕರೆ ಸಿಹಿ ಕವನ ಬಾಯಲ್ಲಿ ನೀರೂರಿಸಿತು.
ಧನ್ಯವಾದಗಳುಸರ