ಗಜಲ್ : ರಥಸಪ್ತಮಿ
‘
ರಥಸಪ್ತಮಿಲಿ ಅಶ್ವರಥವೇರಿದ ಭಾಸ್ಕರ
ಬಾನಿನಲ್ಲಿ ಪಥವ ಬದಲಿಸಿದ ಭಾಸ್ಕರ।।
ಜೀವರಾಶಿಗಳಲಿ ನವಚೈತನ್ಯ ತುಂಬಿದನು
ಧರಣಿಯಲಿ ನವ ಪ್ರಭೆ ಚೆಲ್ಲಿದ ಭಾಸ್ಕರ।।
ಬಾಳ ಕಷ್ಟಗಳು ಮಂಜಿನ ಹನಿಯಂತೆ ಕರಗಿದವು
ನೊಂದ ಮನಗಳಲಿ ನಗುವ ಮೂಡಿಸಿದ ಭಾಸ್ಕರ ।।
ರತ್ನದಂತ ಹೊನ್ನರಥದಲಿ ಬಂದನು ನೇಸರ
ಸೃಷ್ಟಿಯ ರಹಸ್ಯಗಳನ್ನು ಭೇದಿಸಿದ ಭಾಸ್ಕರ।।
ದಿಟವಾಗಿ ದಿವಾಕರನೇ ನಮ್ಮ ಜೀವನನಾಡಿ
ನಿತ್ಯ ಪ್ರಭಾಕರನ ಪೂಜಿಸೆಂದು ಬಿಜಲಿ ನುಡಿದ ಭಾಸ್ಕರ।।
– ಈರಪ್ಪ ಬಿಜಲಿ, ಕೊಪ್ಪಳ
ನನ್ನ ಗಜಲ್ ಪ್ರಕಟ ಮಾಡಿದ ಸುರಹೊನ್ನೆ ಸಾಮಾಜಿಕ ಜಾಲತಾಣಕ್ಕೆ ಹೃತ್ಪೂರ್ವಕವಾದ ಧನ್ಯವಾದಗಳುಸರ/ಮೇಡಮ್
Tumba chendada gazal
ಒಟ್ಟಲ್ಲಿ ನಮ್ ಭಾಸ್ಕರ ಗ್ಲುಕೋಸ್ ಇದ್ದಂಗೆ ಅಂತೀರಿ, ಅಲ್ವೇನ್ರಿ ಸರ…..
ಚೆನ್ನಾಗಿದೆ ಗಝಲ್
ಭಾಸ್ಕರಗೆ ಗಝಲ್ ಸ್ವಾಗತ.. ಚೆನ್ನಾಗಿದೆ.