Author: Dr.Krishnaprabha M

17

ಬಸ್ ಪಯಣದ ಹಾದಿಗುಂಟ……

Share Button

ಕಳೆದ ಹದಿನೇಳು ವರ್ಷಗಳಿಂದಲೂ ಕಾರು ನನ್ನ ಸಂಗಾತಿ. ಎಲ್ಲಿಗೆ ಹೋಗಬೇಕೆಂದರೂ “ಎದ್ದೇಳು, ನಡಿ” ಅಂತ ನನಗೆ ನಾನೇ ಅಪ್ಪಣೆ ಕೊಡುವುದರ ಜೊತೆ ಕಾರಿಗೂ ಇಂಧನ ತುಂಬಿಸಿ “ಚಲ್ ಮೇರೀ ಗಾಡಿ” ಅನ್ನುತ್ತಾ ಪಯಣಿಸುವ ಅಭ್ಯಾಸ ರೂಢಿಯಾಗಿದೆ. ಹಾಗಂತ ಎಲ್ಲಿಗಾದರೂ ಹೋಗಬೇಕೆಂದರೆ ನನಗೆ ಕಾರೇ ಆಗಬೇಕೆಂದಿಲ್ಲ. ಆಗಾಗ ನಡೆದು...

16

ನೆನೆದವರು ಎದುರಲ್ಲಿ..

Share Button

ನೆನೆದವರು ಎದುರಲ್ಲಿ- ಇದೇನಿದು ತಪ್ಪಾಗಿ ಬರೆದೆ ಅಂದ್ಕೊಂಡ್ರಾ? ಛೇ ಛೇ …ನಾನು ಬರೆಯಹೊರಟಿರುವುದು ಇದೇ ವಿಷಯದ ಬಗ್ಗೆ. “ನೆನೆದವರ ಮನದಲ್ಲಿ” ಅನ್ನುವ ಪದಪುಂಜಕ್ಕೂ, ನಾನೀಗ ಬರೆಯಹೊರಟಿರುವ ನೆನೆದವರು ಎದುರಲ್ಲಿ ಅನ್ನುವುದಕ್ಕೂ ತುಸು ಸಾಮ್ಯತೆ ಇರುವುದಂತೂ ಸತ್ಯ. ನೆನೆದವರ ಮನದಲ್ಲಿ ಅನ್ನುವ ಮಾತನ್ನು ಭಗವಂತನ ಬಗ್ಗೆ ವಿವರಿಸುವಾಗ ಹೆಚ್ಚಾಗಿ...

38

ಕಿರಿದರೊಳ್ ಪಿರಿದರ್ಥಂ- “ಕರಿ” ಪದದ ಸುತ್ತ ಮುತ್ತ!

Share Button

ಕಿರಿದರೊಳ್ ಪಿರಿದರ್ಥಂ– ಕೆಲವೊಂದು ಪದಗಳೇ ಹಾಗೇ…ಎರಡು ಅಥವಾ ಮೂರು ಅಕ್ಷರದ ಪದ ಆದರೂ ವಿವಿಧ ಅರ್ಥಗಳು ಅದಕ್ಕೆ. ಈ ವಿವರಣೆಗೆ ಪೂರಕವಾಗಿ ನಾನು ತೆಗೆದುಕೊಂಡ ಪದ – “ಕರಿ“. ಯಾಕೋ ಒಂದು ದಿನ ಈ ಪದ ನನ್ನನ್ನು ಬಹುವಾಗಿ ಕಾಡಿತು. ಕೇವಲ ಎರಡಕ್ಷರದ ಪದ ಆದರೂ ಎಷ್ಟೆಲ್ಲಾ...

13

ಕನಸುಗಳ ಸುತ್ತೊಂದು ಗಿರಕಿ

Share Button

ಕನಸು ಕಾಣದವರು ಯಾರೂ ಇರಲಿಕ್ಕಿಲ್ಲ. ಸುಂದರ ಬದುಕಿನ ಭವ್ಯ ಭವಿತವ್ಯದ ಬಗ್ಗೆ ಕನಸು ಕಂಡು ಆ ಕನಸುಗಳನ್ನು ನನಸಾಗಿಸಲು ಪ್ರಯತ್ನಪಟ್ಟು ಯಶಸ್ಸು ಪಡೆದವರು ಹಲವರು. ಪ್ರಯತ್ನಪಡದೆ ಇದ್ದರೆ ಅದು ‘ತಿರುಕನ ಕನಸು’ ಅನ್ನಿಸಿಕೊಳ್ಳುವುದು. ಸುಪ್ತ ಮನಸ್ಸಿನಲ್ಲಿ ಬೀಡು ಬಿಟ್ಟಿರುವ ಯಾರಲ್ಲಿಯೂ ಹೇಳಿಕೊಳ್ಳಲಾಗದ ಅನುಭವಗಳು ಕೂಡಾ ಕನಸುಗಳಾಗಿ ಕಾಡುವುದುಂಟು....

15

ಜನರೇಕೆ ಹೀಗೆ?

Share Button

ತುರ್ತಾಗಿ ವೈದ್ಯರನ್ನು ಭೇಟಿಯಾಗಬೇಕಿತ್ತು. ಸಾಯಂಕಾಲ ಐದು ಘಂಟೆಗೆ ಭೇಟಿಯ ಸಮಯ ನಿಗದಿಯಾಗಿದ್ದರೂ, ಸಂಜೆ ಏಳು ಘಂಟೆಯವರೆಗೂ ನನ್ನ ಸರದಿ ಬಂದಿರಲಿಲ್ಲ. ನನ್ನಂತೆ ಹಲವರು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಅತ್ತ ಇತ್ತ ನೋಡುವುದು, ನಮ್ಮ ಹೆಸರೆಲ್ಲಾದರೂ ಕರೆಯಬಹುದಾ ಅಂತ ಕಿವಿ ಆಗಾಗ ನೆಟ್ಟಗೆ ಮಾಡುತ್ತಾ ಸಮಯ ಸಾಗುತ್ತಿತ್ತು. ಒಮ್ಮೆಲೇ ...

12

ಅಂತಃಪ್ರಜ್ಞೆ‍(Intuition)

Share Button

“ನಿನ್ನ ಬಗ್ಗೆಯೇ ಮಾತನಾಡುತ್ತಿದ್ದೆವು. ಅಷ್ಟರಲ್ಲಿ ನೀನೇ ಬಂದು ಬಿಟ್ಟೆ. ನಿನಗೆ ನೂರು ವರ್ಷ ಆಯುಷ್ಯ ನೋಡು” ಅಂತ ಅನ್ನುತ್ತಾ ಒಬ್ಬ ಸಂತಸ ವ್ಯಕ್ತಪಡಿಸುತ್ತಿದ್ದರೆ, ಇನ್ನೊಬ್ಬ “ನೋಡೋ, ನೆನೆದವರ ಮನದಲ್ಲಿ… ಧುತ್ತನೆಂದು ಪ್ರತ್ಯಕ್ಷ ಆಗಿ ಬಿಟ್ಟನಲ್ಲಾ” ಅನ್ನುತ್ತಿದ್ದುದನ್ನು ಕೇಳಿ ಒಳಗೊಳಗೆ ಖುಷಿ ಆದರೂ “ಇನ್ನು ನೂರು ವರ್ಷ ಬದುಕುವುದು...

29

ಮಾಸ್ಕಿನ ಹಿಂದೆ!……

Share Button

ಈ ಕೊರೋನಾ ವಿಶ್ವವ್ಯಾಪಿಯಾಗಿ ತನ್ನ ಕಬಂಧಬಾಹುಗಳನ್ನು ಚಾಚಿ, ಇಡಿಯ ವಿಶ್ವವನ್ನೇ ತನ್ನ ತೆಕ್ಕೆಗೆ ಸೆಳೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ದೈನಂದಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ, ಲೆಕ್ಕವಿಲ್ಲದಷ್ಟು ಜನರ ಪ್ರಾಣವನ್ನು ಕಸಿದ ಈ ಮಹಾಮಾರಿಯ ಆಟೋಪವೇನು ಕಡಿಮೆಯೇ? ಬರೆದಷ್ಟೂ ಮುಗಿಯದು! ಕಣ್ಣಿಗೆ ಕಾಣಿಸದ ವೈರಸ್ ತನ್ನ ಲೀಲಾಸಾಮ್ರಾಜ್ಯ ವಿಸ್ತರಿಸಿದ್ದಕ್ಕೆ ಸಾಕ್ಷೀಭೂತರಾಗಿ...

20

ಇದು ಬೆಲ್ಲದಾ ಲೋಕವೇ….!

Share Button

“ಲೇ, ಇವಳೇ… ಮನೆಗೆ ಯಾರು ಬಂದರು ಅಂತ ನೋಡೇ…..ಬಾಯಾರಿಕೆ ತೆಗೆದುಕೊಂಡು ಬಾ” ಅಂತ ಮನೆಯ ಯಜಮಾನನ ಮಾತು ಕಿವಿಗೆ ಬಿದ್ದ ಕೂಡಲೇ ನೀರಿನ ಚೊಂಬು ಮತ್ತು ಬೆಲ್ಲದ ತುಂಡುಗಳಿರುವ ಪುಟ್ಟ ತಟ್ಟೆಯ ಜೊತೆ ಬರುವ ಮನೆಯಾಕೆ ಬೆಲ್ಲ ಹಾಗೂ ನೀರನ್ನು ನೀಡಿ, ಬಂದವರ ಕಾಲಿಗೆ ನಮಸ್ಕರಿಸಿ “ಹೇಗಿದ್ದೀರಿ?...

26

ನೆನಪಿನ ಬಾವಿಯಿಂದ ಬಾವಿಯ ಬಗ್ಗೆ….

Share Button

‘ಸುರಹೊನ್ನೆ’ಯಲ್ಲಿ, ಬಾವಿಯ ಬಗ್ಗೆ ಇರುವ ನೆನಪುಗಳನ್ನು ಹಂಚಿಕೊಳ್ಳಬಹುದು ಅನ್ನುವ ಥೀಮ್ ನೀಡಿದಾಗ ಆ ಬಗ್ಗೆ ಬರೆಯದೇ ಹೇಗಿರಲಿ? ನೆನಪಿನ ಬಾವಿಯಾಳಕ್ಕೆ ಹೋದಷ್ಟೂ, ಮೊಗೆದಷ್ಟೂ ನೆನಪುಗಳು ಮತ್ತೆ ಮತ್ತೆ ಬರುತ್ತಿವೆ. ಈಗಿನ ಪೀಳಿಗೆಯವರಿಗೆ “ನಮ್ಮ ಪಾಲಿಗೆ ಇಂತಹ ದಿನಗಳಿದ್ದವು” ಅಂತ ತಿಳಿಸುವುದಕ್ಕಾದರೂ ಬಾವಿಯ ಜೊತೆಗಿನ ಒಡನಾಟವನ್ನು ಹಂಚಿಕೊಳ್ಳಬೇಕೆನಿಸಿತು. ತಂಪಾದ...

23

ಹೂಗಿಡವೇ ಕಾರಣವಾಯ್ತು ಈ ಲೇಖನಕೆ!

Share Button

ಮನೆಯಂಗಳದಲ್ಲೊಂದು ಪುಟ್ಟ ಗಿಡ ಮೊಳಕೆಯೊಡೆದಿತ್ತು. ದಿನಗಳುರುಳಿದಂತೆ   ಗಿಡ ಹುಲುಸಾಗಿ ಬೆಳೆದು ಮೊಗ್ಗುಗಳನ್ನು ಬಿಟ್ಟಿತು. ಕೆಲದಿನಗಳಲ್ಲೇ ಗಿಡದೊಡಲು ಗಾಢ ಕೆಂಪು ಬಣ್ಣದ ಹೂಗಳಿಂದ ತುಂಬಿತ್ತು. ಹೂಗಳಿಗೆ ಹೇಳಿಕೊಳ್ಳುವಂತಹ ವಿಶೇಷ ಪರಿಮಳವಿಲ್ಲ. ಆದರೆ ಮನಮೋಹಕ ಬಣ್ಣದಿಂದಲೇ ನೋಡುಗರನ್ನು ತನ್ನೆಡೆಗೆ ಆಕರ್ಷಿಸುವ ವಿಶೇಷ ಶಕ್ತಿ. ದಿನಗಳು ಕಳೆದಂತೆ, ಅರಳಿದ ಹೂವುಗಳಿದ್ದ ಜಾಗದಲ್ಲಿ...

Follow

Get every new post on this blog delivered to your Inbox.

Join other followers: