ಅಳಿಸಲಾಗದಂತೆ ಹಣೆಬರಹವನು
ಅದೆಮ್ಮ ವಿಧಿಲಿಖಿತವಂತೆ
ನಿಜವಿರಲೇಬೇಕು ಈ ಮಾತು
ನಮ್ಮ ಹಣೆ ನಮಗೆ ಕಾಣಿಸದು
ಪರರಿಗೆ ಹಣೆ ಕಂಡರೂ ಕಾಣದು
-ನಾವು ಪಡೆದು ಬಂದ ಬರಹ
ಅಹುದು ಹಣೆಬರಹ ಎಂದರೇನು?
ಅದ ಬರೆದು ನಮಗಿತ್ತವನು ಯಾರು ?
ಬರೆದವನು ಅಳಿಸಲಾಗದು ಎಂದಿಗೂ
ಬರೆಸಿಕೊಂಡವನು ಓದಲಾರ ಇಂದಿಗೂ
ನಡೆದುದಕೆಲ್ಲ ಹೊಣೆ ಅದೇ ಬರಹ
ನಮ್ಮದೇನೂ ಹೊಣೆಯೇ ಇಲ್ಲವೇ?
ಕೈಮೀರಿ ನಡೆದುದನು ನೋಡುತ
ಹೇಳುವುದೊಳಿತು ಅದು ‘ವಿಧಿಲಿಖಿತ’

ಕೆರೋಡಿ.ಎಂ.ಲೋಲಾಕ್ಷಿ


ಅರ್ಥಪೂರ್ಣ ವಾದ ಕವನ ವಂದನೆಗಳು ಮೇಡಂ
ಯಾರೂ ಓದಲಾಗದ ಹಣೆಬರಹವನ್ನು ಬರೆದವರು ಯಾರು ಎಂಬ ಉತ್ತರವಿಲ್ಲದ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾ ಯೋಚನೆಗೆ ಹಚ್ಚುವ ಸೊಗಸಾದ ಅರ್ಥಪೂರ್ಣ ಕವನ!
ಬರೆಸಿಕೊಂಡವ ಓದಲಾರ ಎಂಬುದು ನಿಮ್ಮ ಕವಿತೆಯ ಒಟ್ಟಂದ
ಹೀಗಿದ್ದರೇ ಚೆಂದ!
ಕವಿತೆಯ ಆತ್ಮಗತ ಧಾಟಿ ನನಗಿಷ್ಟವಾಯಿತು, ಧನ್ಯವಾದಗಳು ಮೇಡಂ
ಚೆನ್ನಾಗಿದೆ