ಬೆಳಕು-ಬಳ್ಳಿ

ಧ್ಯೇಯ

Share Button

ಯುವಜನತೆಯಲ್ಲಿ ಹೆಚ್ಚುತ್ತಿದೆ ವಿಕೃತಿ
ಮರೆಯುತ್ತಿದ್ದಾರೆ ನಮ್ಮ ಸುಸಂಸ್ಕೃತಿ
ತೋರುತ್ತಿದ್ದಾರೆ ದುಷ್ಟ ಹೇಯ ಮನಸ್ಥಿತಿ
ಪ್ರೀತಿ ಪ್ರೇಮದ ಹೆಸರಲ್ಲಿ ರಾಕ್ಷಸ ಪ್ರವೃತ್ತಿ

ಪ್ರೀತಿ ಬಯಸುವುದು ಸಹಜ ಪ್ರೀತಿಯನ್ನೇ
ನೀಡಬಾರದು ಅದು ಯಾರಿಗೂ ನೋವನ್ನೇ
ಆಗಬೇಕು ಪರಿಶುದ್ಧ ಮನಸು ಮನಸಿನ ಮಿಲನ
ಅರಳಬೇಕು ಹೂವಿನಂತೆ ಜೀವನ ಮೌಲ್ಯ

ಸದಾ ಬಯಸಬೇಕು ಪರಸ್ಪರ ಕೇವಲ ಒಳಿತನ್ನೇ
ಇರಬೇಕು ಒಬ್ಬರಿಗೊಬ್ಬರು ನಿತ್ಯವೂ ನೆರಳಂತೆ
ಬರಬಾರದು ಪ್ರೀತಿ ಆತ್ಮೀಯತೆಯಲ್ಲಿ ಕಲಹ
ನೀಡಬಾರದು ಯಾರಿಗೂ ಎಂದಿಗೂ ವಿರಹ

ಏನಾದರೂ ಬರಬಾರದು ಪ್ರೀತಿ ನಡುವೆ ದ್ವೇಷ
ಬೇರೆ ಯಾವುದೇ ಕಾರಣಗಳಿಗೆ ದೂರಾದರೂ
ಮನದೊಳಗೆ ಬೆಳೆಯದಿರಲಿ ರೋಷ ಆವೇಶ
ಸದಾ ಹಿತವನ್ನ ಬಯಸುವದು ಆಗಲಿ ಉದ್ದೇಶ

ಪ್ರೀತಿ ವಿಶ್ವಾಸದಿಂದ ಗೆಲ್ಲಬಹುದು ಜಗವನ್ನೇ
ದ್ವೇಷಕ್ಕೆ ಬಿದ್ದರೆ ಕಳೆದುಕೊಳ್ಳಬೇಕಾಗುತ್ತದೆ ಬದುಕನ್ನೇ
ಎಲ್ಲರಿಗೂ ಬಯಸಬೇಕು ಕೇವಲ ಒಳಿತನ್ನೇ
ಬಿತ್ತಿ ಬೆಳೆಯಬೇಕು ಶಾಂತಿ ಸೌಹಾರ್ದತೆಯನ್ನೇ

ಸಾಯುವುದು ಸಾಯಿಸುವುದು ಅತ್ಯಂತ ಹೇಯ
ಮಾನವೀಯತೆ ಆಗಬೇಕು ನಮ್ಮ ಧ್ಯೇಯ
ಪ್ರೀತಿ ವಿಶ್ವಾಸ ತೋರುತ್ತ ಆಗಿರಬೇಕು ವಿಧೇಯ
ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತ
ಪಾಶವೀ ಕೃತ್ಯಕ್ಕೆ ಹೇಳಲೇ ಬೇಕಿದೆ ಇತಿಶ್ರೀ

ನಾಗರಾಜ್ ಜಿ.ಎನ್. ಬಾಡ,ಕುಮಟ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *