ಮಾತು ಮೌನಕ್ಕೆ ಜಾರಿದೆ
ಮೌನವೇ ಈಗ ಮಾತಾಗಿದೆ
ನೋವುಗಳೇ ಬದುಕಾಗಿದೆ
ನಲಿವು ಎನ್ನುವುದ ಕಾಣದಾಗಿದೆ
ಬದುಕಿನಲ್ಲಿ ಎಲ್ಲವೂ ಬದಲಾಗಿದೆ
ನೋವು ನಲಿವುಗಳೆಲ್ಲ ಹಳತಾಗಿದೆ
ಬದುಕನ್ನ ನೋಡುವ ರೀತಿ ಬದಲಾಗಿದೆ
ವಾಸ್ತವದ ಅರಿವು ಮುಂದೆ ನಡೆಸಿದೆ
ನೋಯಿಸುವವರ ಮರೆತಾಗಿದೆ
ಮತ್ತೆ ಮರೆವೀಗ ಒಳ್ಳೆಯದಾಗಿದೆ
ಏನಿಲ್ಲದಿದ್ದರೂ ಖುಷಿ ಜೊತೆಯಾಗಿದೆ
ಮನಸ್ಸಿನ ಭಾರ ಈಗ ಕಡಿಮೆಯಾಗಿದೆ
ನೋಡುವ ರೀತಿ ಈಗೀಗ ಹೊಸದಾಗಿದೆ
ಹಿಂದಿನದೆಲ್ಲ ಮರೆತು ಹೋಗಿದೆ
ನಾಳಿನ ಬಗೆಗಿನ ಚಿಂತೆ ತೊರೆದಾಗಿದೆ
ಇಂದು ಈ ಕ್ಷಣ ಬದುಕುವುದ ಕಲಿತಾಗಿದೆ
ನನ್ನದು ನನ್ನದೆಂಬ ಹುಚ್ಚು ಬಿಟ್ಟಾಗಿದೆ
ಬಂದುದು ಬರಲಿ ಎಂಬುದು ಬದುಕಾಗಿದೆ
ಭಾವನೆಗಳೇ ಬದುಕಲ್ಲ ಎಂಬುದ ಅರಿತಾಗಿದೆ
ಚಿಂತೆಯ ಮರೆತು ಚಿಂತನೆಯ ದಾರಿ ಹಿಡಿದಾಗಿದೆ
ನಾಗರಾಜ್ ಜಿ.ಎನ್.ಬಾಡ,ಕುಮಟ

