ಪರಾಗ

ಭಯದ ನೆರಳು….

Share Button

Ashok Mijar4

ಬೈಕ್ ಸ್ಟಾರ್ಟ್ ಮಾಡಬೇಕೆನ್ನುವಾಗ ಕಾಲ ಬುಡದಲ್ಲಿ ನಿಂಬೆಹುಳಿ ಮತ್ತು ಕೆಂಪು ಪ್ರಸಾದ ಕಂಡವನು ಅಸಡ್ಡೆ ತೋರಿ ತನ್ನ ಕಂಪೆನಿಯತ್ತ ಓಡಿಸಿದ. ಆಗಲೇ ಆಗಬಾರದ ಅನಾಹುತ ಆಗಿಹೋಗಿತ್ತು. ಭೀಕರ ಅಪಘಾತ. ಇವನ ಕಾಲಮೇಲೆ ಲಾರಿ ಚಲಿಸಿಹೋಗಿತ್ತು. ಹೆಲ್ಮೆಟ್ ಹಾಕಿದ್ದರೂ, ತಲೆ ಒಡೆದು ರಕ್ತ ಹರಿದಿತ್ತು. ಕೊನೆಯ ಕ್ಷಣಗಳು. ಕಣ್ಣಿಂದ ಕಣ್ಣೀರು ಹರಿದು ಪತ್ನಿ ಹೇಳಿದ್ದು ನೆನಪಾಗಿತ್ತು. ಇವತ್ತು ಬೈಕ್ ಓಡಿಸಬೇಡಿ… ಅಪಶಕುನ..! ಜೋರಾಗಿ ಕಿರುಚಿದ ಸದಾನಂದ…. ಸತ್ತೇ.. ಸತ್ತೇ..!

ಮುಸುಕು ತೆಗೆದು ನೋಡಿದ್ರೆ ಒಂದೇ ಸಮನೆ ಬಯ್ತಿದ್ದಾಳೆ ಸಟ್ಟುಗ ಹಿಡಿದ ಶ್ರೀಮತಿ… “ಬೇಡ.. ಬೇಡ ಅಂದ್ರೂ ಮಧ್ಯರಾತ್ರಿವರೆಗೂ ಟೀವೀಲಿ ಬೈಕ್ ರೇಸ್ ನೋಡ್ತಾ ಕೂತ್ಕೊಳ್ತಾರೆ… ಈವಾಗ….!”                                                          

 

– ಅಶೋಕ್ ಕೆ. ಜಿ. ಮಿಜಾರ್.

 

 

3 Comments on “ಭಯದ ನೆರಳು….

  1. ಹ್ಹ ಹ್ಹ..! ಸೂಪರ್.. ಮೊದಲ ಪಾರಾ ಓದಿ ಅದು ಕನಸಾಗಿರಲೆಂದು ಅಂದುಕೊಳ್ಳುತ್ತಿದ್ದೆ.. ಅಂತೆಯೇ ಮುಕ್ತಾಯವು ಕನಸೇ ಆದಾಗಲೊಂದು ಸಮಾಧಾನ! ಚೊಕ್ಕ ಬರಹ. 🙂

Leave a Reply to ಬೆಳ್ಳಾಲ ಗೋಪೀನಾಥ ರಾವ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *