ನಿನ್ನ ನೋಡಿದ ಕ್ಷಣದಿಂದಲೇ
ನನ್ನ ಕನಸಿನ ಚೆಲುವೆಯು,
ಬಾನಿನಿಂದ ಧರೆಗಿಳಿದು ಬಂದಿರುವ ಅನುಭವವೊಂದು ಮೂಡಿದೆ,
ನನ್ನನೇ ಮರೆತಿರುವೆ ಆ ಕ್ಷಣದಿಂದಲೇ.
ಪ್ರೀತಿಯೆಂಬ ಮಾಯ ಕಡಲಲ್ಲಿ,
ಈಜು ಬಾರದೇ ಧುಮಿಕಿರುವ ಭಾವನೆಯೊಂದು ಚಿಗುರಿದೆ.
ನಿನ್ನದೇ ನೆನಪಿನಲ್ಲಿ ಮನವು ತೇಲಾಡುತ್ತಿದೆ.
ಕಣ್ಣುಗಳಲ್ಲಿ ನಿನ್ನದೇ ಚಿತ್ರವ,
ಸೆರೆಹಿಡೆಯುವ ಆಸೆಯೊಂದು ಅರಳಿದೆ.
ನಿನ್ನಲ್ಲಿಯೇ ನಾ ಸೆರೆಯಾದೆ.
ಬಾಳಿನ ಪ್ರತಿ ಕ್ಷಣವು ನಿನ್ನ ಜೊತೆಯಲ್ಲಿ,
ಕಳೆಯುವ ಹೊಸ ಆಸೆಯೊಂದು ಹುಟ್ಟಿದೆ,
ಇದನ್ನ ಅರೆತ ಮನಸ್ಸು ಆಕಾಶದಲ್ಲಿ ಹಾರಾಡುತ್ತಿದೆ.
ಹೃದಯವೆಂಬ ಪುಟ್ಟ ಅರೆಮನೆಯಲ್ಲಿ,
ನಿನ್ನನ್ನೇ ರಾಣೆಯನ್ನಾಗಿಸುವ ಆಸೆಯೊಂದು ಮನೆಮಾಡಿದೆ,
ನಿನ್ನಲ್ಲಿಯೇ ನಾ ಶರಣಾದೆ.
ಮೌನವೇ ಆವರಿಸಿದ ತುಟ್ಟಿಯಲ್ಲಿ,
ಇಂದು ಬರೀ ನಿನ್ನದೇ ಮಾತು,
ನಿನ್ನಲ್ಲಿಯೇ ನಾ ಬೆರೆತುಹೋದೆ.
ನನ್ನ ನೆರಳು ಅಳಿಸುವರೆಗು,
ನಿನಗೆ ನೆರಳಾಗಿರುವ ಆಸೆಯೊಂದು ಸೇರಿಕೊಂಡಿದೆ,
ನಿನ್ನಲ್ಲಿಯೇ ನಾ ಮರೆಯಾದೆ.
– ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ
ನಿನ್ನ ನೋಡುವ ಕ್ಷಣವೇ ಅದ್ಭುತ…
ತುಂಬಾ ಚೆನ್ನಾಗಿ ಮೂಡಿ ಬಂದಿದೆ..
ಧನ್ಯವಾದಗಳು